ಬೆಂಗಳೂರು: ರೋಹಿತ್ ಚಕ್ರತೀರ್ಥ ಪಠ್ಯಪುಸ್ತಕ ಪರಿಷ್ಕರಣೆ ವಿರೋಧಿಸಿ ಸಾಂಕೇತಿಕವಾಗಿ ಪ್ರತಿಭಟನೆ ಮಾಡುತ್ತಿದ್ದೇವೆ ಎಂದು ಸಿದ್ದರಾಮಯ್ಯ ಅವರು ಹೇಳಿದ್ದಾರೆ.
ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸರ್ಕಾರ ರೋಹಿತ್ ಚಕ್ರತೀರ್ಥರ ಸಮತಿಯನ್ನ ವಿಸರ್ಜನೆ ಮಾಡಿದೆ. ಸಾರ್ವಜನಿಕ, ಮಠಾಧೀಶರಿಂದ,ಸಾಹಿತಿಗಳಿಂದ, ಶಿಕ್ಷಣ ತಜ್ಞರಿಂದ, ರಾಜಕಾರಣಿಗಳಿಂದ ವಿರೋಧ ವ್ಯಕ್ತವಾಯಿತು. ಅದಕ್ಕಾಗಿ ವಿಸರ್ಜನೆ ಮಾಡಲಾಗಿದೆ ವಿಸರ್ಜನೆ ಮಾಡಿದ ಮೇಲೆ ಅವರು ಮಾಡಿದ ಪರಿಷ್ಕರಣೆಯನ್ನು ರದ್ದು ಮಾಡಬೇಕು ಎಂದರು.
ಅದಲ್ಲದೇ, ಚಕ್ರತೀರ್ಥ ಮಾಡಿದ ಪರಿಷ್ಕರಣೆ ವಜಾ ಮಾಡಬೇಕು. ಮಕ್ಕಳಿಗೆ ಆ ಪಾಠ ಭೋದನೆ ಮಾಡಬಾರದು. ಯಾಕೆಂದರೆ ಅದರಲ್ಲಿ ಇತಿಹಾಸ ತಿರುಚಲಾಗಿದೆ. ಅನೇಕ ದಾರ್ಶನಿಕರ ಇತಿಹಾಸ ತಿರುಚಲಾಗಿದೆ. ಅಂಬೇಡ್ಕರ್ ಅವರ ಸಂವಿಧಾನ ಶಿಲ್ಪಿ ಎಂಬುದನ್ನು ತೆಗೆಯಲಾಗಿದೆ. ಬಸವಣ್ಣ ವೈದಿಕ ಧರ್ಮ ಬಿಟ್ಟು ಬೇರೆ ಧರ್ಮ ಸ್ಥಾಪನೆ ಮಾಡಿದ್ದಾರೆ. ಇತಿಹಾಸ ತಿರುಚಿ ಕೇಸರಿಕರಣ ಮಾಡಿದ್ದಾರೆ. ಬಿಸಿ ನಾಗೇಶ್ ಮೊದಲು ಬದಲಾವಣೆ ಮಾಡಲ್ಲ ಎಂದು ಹೇಳಿದರು.
ಇನ್ನು, ಧಾರವಾಡದಲ್ಲಿ ಸ್ವಾಮೀಜಿಗಳು ಹೋರಾಟ ಮಾಡುತ್ತಿದ್ದಾರೆ. ಅವರ ಹೋರಾಟಕ್ಕೆ ನಮ್ಮ ಬೆಂಬಲವಿದೆ. ಆರ್.ಎಸ್.ಎಸ್ ಭಾಷಣ ಪಠ್ಯಕ್ರಮದಲ್ಲಿ ತಂದು ಮಕ್ಕಳ ಜ್ಞಾನ ಹಾಳ ಮಾಡಬಾರದು. ಹಾಗಾಗಿ ಪರಿಷ್ಕರಣೆ ಕೈ ಬಿಡಬೇಕು.ಬರಗೂರು ರಾಮಚಂದ್ರಪ್ಪ ಅವರ ಪಠ್ಯ ಮುಂದುವರೆಸಬೇಕು. ಇಲ್ಲವಾದಲ್ಲಿ ಪಕ್ಷದಲ್ಲಿ ಚರ್ಚೆ ಮಾಡಿ, ಮುಂದಿನ ಹೋರಾಟದ ರೂಪಿಸುತ್ತೇವೆ. ನಾವು RSS , ಕೇಸರಿಕರಣ ವಿರುದ್ಧ ನಾವಿದ್ದೇವೆ. ಅವರು ಅಂಬೇಡ್ಕರ್, ಕನಕದಾಸರಿಗೆ, ಬಸವಣ್ಣ, ಕುವೆಂಪು ಸೇರಿದಂತೆ ದಾಸರು, ವಚನಕಾರಿಗೆ ಅಪಮಾನ ಮಾಡಿದ್ದಾರೆ. ಮಕ್ಕಳ ಮನಸ್ಸಿಗೆ ವಿಷ ಉಣಿಸುವ ಕೆಲಸ ಬಿಜೆಪಿ ಮಾಡುತ್ತಿದೆ ಎಂದು ಕಿಡಿಕಾಡಿದ್ದಾರೆ.