ಹಾವೇರಿ : ರಾಜ್ಯಸಬೆಯಲ್ಲಿ ಬಿಜೆಪಿ ಸೋಲಿಸುವ ಉದ್ದೇಶ ಕುಮಾರಸ್ವಾಮಿಗೆ ಇದ್ರೆ, ಸೋನಿಯಾಗಾಂಧಿ, ಸುರ್ಜೆವಾಲಾ ಜೊತೆಗೆ ಮಾತನಾಡಿದ್ದೇನೆ ಎಂದು ಕುಮಾರಸ್ವಾಮಿ ಹೇಳುವ ಬದಲು, ನನ್ನ ಜೊತೆಗೆ ಮಾತನಾಡಲಿ, ನಮ್ಮ ಅಧ್ಯಕ್ಷರ ಜೊತೆ ಕುಮಾರಸ್ವಾಮಿ ಮಾತನಾಡನಾಡಲಿ ಎಂದು ಹಾವೇರಿಯಲ್ಲಿ ವಿರೋದಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ.
ನಗರದಲ್ಲಿನ ಪಶ್ಚಿಮ ಶಿಕ್ಷಕರ ಕ್ಷೇತ್ರದ ಚುನಾವಣಾ ಪ್ರಚಾರ ಸಭೆಯಲ್ಲಿ ಭಾಗಿಯಾಗುವ ಮುನ್ನ ಮಾಧ್ಯಮ ಪ್ರತಿನಿದಿಗಳೊಂದಿಗೆ ಮಾತನಾಡಿದ ಸಿದ್ದರಾಮಯ್ಯನವರು, ರಾಜ್ಯ ಸಭೆ ಚುನಾವಣೆ ವಿಚಾರಕ್ಕೆ ಸಂಬಂಧಿಸಿದಂತೆ ಸುರ್ಜೆವಾಲ ಜೊತೆಗೆ ನಾನು ಚರ್ಚಿಸಿದ್ದೇನೆ ಎಂದಿರುವ ಕುಮಾರಸ್ವಾಮಿ ಹೇಳಿಕೆಗೆ ತಿರುಗೇಟು ನೀಡಿದ್ದಾರೆ.
ಜೆಡಿಎಸ್ ಅಭ್ಯರ್ಥಿಯನ್ನ ಕಣದಿಂದ ಹಿಂದೆ ಸರಿಸಿ, ಜೆಡಿಎಸ್ ಮತಗಳನ್ನ ಕಾಂಗ್ರೆಸ್ ಅಭ್ಯರ್ಥಿ ಗೆ ಹಾಕಿಸಿ ಬೆಂಬಲ ನೀಡಲಿ. ದೇವೆಗೌಡರು ಸ್ಪರ್ದೆ ಮಾಡಿದಾಗ ಕಾಂಗ್ರೆಸ್ ಅಭ್ಯರ್ಥಿ ಹಾಕದೆ ಅವರಿಗೆ ಬೆಂಬಲ ನೀಡಿತ್ತು, ಕುಮಾರಸ್ವಾಮಿಯನ್ನ ಮುಖ್ಯಮಂತ್ರಿ ಯಾಗಿ ನಾವು ಮಾಡಿದ್ವಿ, ಅವರಿಗಿಂತ ಮೊದಲು ನಾವು ಅಭ್ಯರ್ಥಿಯನ್ನ ಹಾಕಿದ್ದೆವೆ, ಈ ವಿಚಾರವಾಗಿ ಕುಮಾರಸ್ವಾಮಿ ನಮ್ಮ ಜೊತೆಗೆ ಯಾವುದೇ ಚರ್ಚೆ ನಡೆಸಿಲ್ಲ, ಅವರು ಸಹಕಾರ ನೀಡಿದ್ರೆ ನಾವು ಸಹಕಾರ ಪಡೆದುಕೊಳ್ಳಲು ಸಿದ್ದರಿದ್ದೇನೆ ಎಂದು ಕುಮಾರಸ್ವಾಮಿಗೆ ಸಲಹೆ ನೀಡಿದ್ರು. ಇದೆ ವೇಳೆ ಮಾಜಿ ಸಿಎಂ ಜಗದೀಶ್ ಶೆಟ್ಟರ್ ವಿರುದ್ದ ಹರಿಹಾಯ್ದ ಸಿದ್ದರಾಮಯ್ಯನವರು, ಬಿಜೆಯವರು ಯಡಿಯೂರಪ್ಪ ನವರ ಬಳಿಕ ಬಸವರಾಜ್ ಬೊಮ್ಮಾಯಿಯನ್ನ ಯಾಕೆ ಸಿಎಂ ಮಾಡಿದ್ರು, ಗೋವಿಂದ ಕಾರಜೋಳ ಅವರನ್ನ ಯಾಕೆ ಸಿಎಂ ಮಾಡಲಿಲ್ಲ ಅಂರಾ ತಿರುಗೇಟು ನೀಡಿದ್ದಾರೆ. ಕಾಂಗ್ರೆಸ್ ಪಕ್ಷದಲ್ಲಿ ಎಲ್ಲಾ ವರ್ಗದವರು ಸಿಎಂ ಆಗಲು ಅವಕಾಶ ಇದೆ ಎಂದು ಹೇಳಿದರು.