Monday, December 23, 2024

ನಿಮಗೆ ಗೊತ್ತಿರದ ಶಿವಣ್ಣ-ಕ್ರೇಜಿಸ್ಟಾರ್ ‘ಸ್ನೇಹಲೋಕ’

ಸ್ಯಾಂಡಲ್​ವುಡ್​​ನ ಮಹಾದಿಗ್ಗಜರು, ಕೋಟ್ಯಂತರ ಅಭಿಮಾನಿಗಳ ಅತಿರಥ ಮಹಾರಥರು ಒಂದೇ ವೇದಿಕೆಯಲ್ಲಿ ಹಾಡಿ, ಕುಣಿದು ಕುಪ್ಪಳಿಸಿದ್ರೆ ಹೇಗಿರುತ್ತೆ..? ಯೆಸ್​​.. ಇಂತಹ ಅವಿಸ್ಮರಣೀಯ ಕ್ಷಣಕ್ಕೆ ಖಾಸಗಿ ವಾಹಿನಿಯ ರಿಯಾಲಿಟಿ ಶೋ ಒಂದು ಸಾಕ್ಷಿಯಾಗಿದೆ. ಸೆಂಚೂರಿ ಸ್ಟಾರ್​ ಶಿವಣ್ಣ, ಕ್ರೇಜಿಲೋಕದ ಕನಸುಗಾರ ರವಿಚಂದ್ರನ್ ಇಬ್ರೂ ಅಪ್ಪಿಕೊಂಡು ಮುದ್ದಾಡಿದ್ದಾರೆ. ಈ ಅದ್ಭುತ ಗೆಳೆತನದ ಬಗ್ಗೆ ನಾವ್​ ಹೇಳ್ತೀವಿ.

ನಿಮಗೆ ಗೊತ್ತಿರದ ಶಿವಣ್ಣ – ಕ್ರೇಜಿಸ್ಟಾರ್ ‘ಸ್ನೇಹಲೋಕ’

ಶಿವಣ್ಣ -ರವಿಚಂದ್ರನ್​​ ಜೋಡಿಗೆ ಸ್ನೇಹವೇ ಚಿರಂಜೀವಿ

s/o ಬಂಗಾರದ ಮನುಷ್ಯನಿಗೆ ಮುತ್ತಿಕ್ಕಿದ ಕ್ರೇಜಿಸ್ಟಾರ್​​​..!

ಜೊತೆಯಾದ ಯಜಮಾನ್ರು.. ತೆರೆದ ಭಾಗ್ಯದ ಬಾಗಿಲು

ಸಾವಿರ ಯುಗಗಳೇ ಉರುಳಿದರೂ ಪ್ರೀತಿ, ಪ್ರೇಮ, ಸ್ನೇಹಕ್ಕೆ ದೊಡ್ಮನೆ ಕುಟುಂಬ ಹೆಸರುವಾಸಿ. ಹೆಸರಿಗೆ ಮಾತ್ರ ರಾಜಕುಮಾರನಾಗಿರದೆ, ನಿಜ  ಬದುಕಿನಲ್ಲೂ ರಾಜನಂತೆ ಬಾಳಿದ ಡಾ.ರಾಜ್​​ ಸದಾ ಮಾದರಿಯಾಗಿ ನಿಲ್ಲುತ್ತಾರೆ. ಅವರ ನಡೆ, ನುಡಿ, ಅಭಿನಯ ರಕ್ತಗತವಾಗಿ ಅವರ ಮಕ್ಕಳಿಗೂ ಬಂದಿದೆ. ದೇವರಂತೆ ನಿತ್ಯ ಪೂಜಿಸುವ ರಾಜರತ್ನ ಅಪ್ಪು ಇದಕ್ಕೆ ಪ್ರತ್ಯಕ್ಷ ಸಾಕ್ಷಿ.

ಹಣ ಅಂತಸ್ತು, ಐಶ್ವರ್ಯ, ಗೌರವ ಎಲ್ಲವೂ ಕಾಲಡಿ ಬಿದ್ದಿದ್ದರೂ ಹೃದಯವಂತರಾಗಿ  ಬಾಳುತ್ತಿರುವ ಶಿವಣ್ಣ ಅವ್ರ ಬಗ್ಗೆ ಬಾಲ್ಯದ ಗೆಳೆಯ ರವಿಚಂದ್ರನ್​ ಆಡಿರುವ ಮಾತುಗಳಿಗೆ ಇಡೀ ಚಿತ್ರರಂಗವೇ ಫಿದಾ ಆಗಿದೆ. ಕ್ರೇಜಿಸ್ಟಾರ್​ ಮಾತುಗಳು ನೂರಕ್ಕೆ ನೂರು ಸತ್ಯ.  ಶಿವಣ್ಣ ಅವ್ರಿಗೆ ಶಿವಣ್ಣನೇ ಸಾಟಿ. ಖಾಸಗಿ ವಾಹನಿಯ ಮಹಾಸಂಗಮ ವೇದಿಕೆಯಲ್ಲಿ ಕುಚಿಕು ಗೆಳೆಯರು ಒಂದಾಗಿದ್ದು, ಅಭಿಮಾನಿಗಳು ದಿಲ್​ಖುಷ್ ಆಗಿದ್ದಾರೆ. ಸ್ನೇಹಕ್ಕೆ ಸ್ನೇಹ ಸಾಂಗ್​ಗೆ ಈ ಜೋಡಿ ಮಸ್ತ್​ ಸ್ಟೆಪ್​  ಹಾಕಿದೆ. ಶಿವಣ್ಣ- ರವಿ ಕ್ರೇಜಿ​​ ಎಂಟ್ರಿಗೆ ಇಡೀ ವೇದಿಕೆಯೇ ಹಾಡಿ ಕುಪ್ಪಳಿಸಿದೆ.

ಸಿನಿಮಾ ಹಾದಿಯಲ್ಲಿ  ಒಂದೂ ಜಗಳವಿಲ್ಲದ, ಮನಸ್ತಾಪವಿಲ್ಲದ ಟ್ರೂ ಫ್ರೆಂಡ್ಸ್​ ಅಂದ್ರೆ ಶಿವಣ್ಣ, ರವಿಚಂದ್ರನ್ ಜೋಡಿ​​. ಎಲ್ಲೇ ಸಿಕ್ಕರೂ ಕ್ರೇಜಿಸ್ಟಾರ್​ಗೆ, ಹೇಗಿದ್ದೀರಾ ಯಜಮಾನ್ರೇ ಅಂತಾರೆ ಶಿವಣ್ಣ. ಇನ್ನು ಅಷ್ಟೇ ವಿನಯ, ಪ್ರೀತಿಯಿಂದ ಶಿವಣ್ಣ ಕೂಡ ಅವ್ರಿಗೆ ಸಾಹುಕಾರ ಅಂತಲೇ ಮಾತನಾಡಿಸೋದು ಇವರಿಬ್ರ ನಡುವಿನ ಸ್ನೇಹಸೇತುವೆಯ ಪ್ರತೀಕವಾಗಿದೆ.

ಲಗಾಮಿಲ್ಲದ ಕುದುರೆಗೆ ಪ್ರಾಣಕ್ಕಿಂತ ಹೆಚ್ಚಾಗಿ ಪ್ರೀತಿಸೋ ಆತ್ಮೀಯ ಗೆಳೆಯನಾಗಿ ಸಿಕ್ಕವರು ಶಿವಣ್ಣ ಎಂದು ಹಾಡಿ ಹೊಗಳಿದ್ರು ರವಿಮಾಮ. ಒಬ್ಬರಿಗೊಬ್ರು ಜೀವಕ್ಕೆ ಜೀವ ಕೊಡೋ ಗೆಳೆತನದ ಬಗ್ಗೆ ಮಾತನಾಡುತ್ತಾ ಅಪ್ಪಿಕೊಂಡು  ಮುತ್ತಿಕ್ಕಿಕೊಂಡರು. ಈ ಜೋಡಿಗೆ ಯಾರ ದೃಷ್ಠಿಯೂ ಬೀಳದೇ ಇರಲಿ ಅಂತ ಕೋಟ್ಯಂತರ ಅಭಿಮಾನಿಗಳು ಹಾರೈಸಿದ್ದಾರೆ.

ಗೆಲ್ಲೋದಕ್ಕೇ ಯುದ್ಧವೇ ಮಾಡಬೇಕಾಗಿಲ್ಲ. ಯುದ್ಧ ಇಲ್ಲದೆಯೂ ಗೆಲ್ಲೋ ಮಯೂರನ ಹೆಮ್ಮೆಯ ಪುತ್ರ ಡಾ ಶಿವಣ್ಣ. ಈ ಇಬ್ರೂ ಘಟಾನುಘಟಿಗಳು ಒಂದೇ ವೇದಿಕೆಯಲ್ಲಿ ಮನರಂಜನೆಯ ರಸದೌತಣ ನೀಡಿ ಕನ್ನಡ ಕಲಾಭಿಮಾನಿಗಳ ಹೃದಯ ಗೆದ್ದರು. ಇನ್ನು ಶಿವಣ್ಣ ಹುಟ್ಟಿದಾಗಲೇ ಕಿಂಗ್​ ಎಂದ ಕ್ರೇಜಿಸ್ಟಾರ್​, ರಾಜಕುಮಾರನ ಮಗನಾಗಿ ಇಷ್ಟು ಸಿಂಪಲ್​ ಆಗಿರೋದು ಗ್ರೇಟ್​​ ಎಂದು ಹೊಗಳಿಕೆಯ ಮಹಾಮಳೆ ಸುರಿಸಿದ್ರು. ಹೌದು,  ದೊಡ್ಮನೆಯ ಪ್ರತಿಯೊಂದು ಕುಡಿಯು ಪ್ರೇಮದ ಸಂಕೇತ.  ಶಿವಣ್ಣ-ರವಿಚಂದ್ರನ್​​ ಸ್ನೇಹ ಇದೇ ರೀತಿ ಚಿರಕಾಲ ಇರಲಿ ಅಂತ ಆಶಿಸೋಣ.

ರಾಕೇಶ್​​ ಆರುಂಡಿ, ಫಿಲ್ಮ್ ಬ್ಯೂರೋ, ಪವರ್ ಟಿವಿ

RELATED ARTICLES

Related Articles

TRENDING ARTICLES