Monday, December 23, 2024

ರಾಜ್ಯಸಭೆಯ ಒಂದು ಸ್ಥಾನಕ್ಕೆ ಮೂರು ಪಕ್ಷಗಳ ಪೈಪೋಟಿ..!

ಬೆಂಗಳೂರು: ರಾಜ್ಯಸಭೆಯ ಒಂದು ಸ್ಥಾನಕ್ಕೆ ಮೂರು ಪಕ್ಷಗಳು ಪೈಪೋಟಿ ನಡೆಸುತ್ತಿದ್ದು, ಸಂಖ್ಯಾಬಲ ಕೊರತೆಯಿದ್ರೂ ಗೆಲುವಿಗಾಗಿ ನಾನಾ ರಣತಂತ್ರ ಮಾಡುತ್ತಿದ್ದಾರೆ.

ಕಾಂಗ್ರೆಸ್​ನ ಒಬ್ಬರು, ಬಿಜೆಪಿಯ ಇಬ್ಬರ ಗೆಲುವು ಸುಲಭವಾಗಿದ್ದು, ಮೂರನೇ ಅಭ್ಯರ್ಥಿ ಗೆಲುವಿನ ನಿರೀಕ್ಷೆಯಲ್ಲಿ ಕಮಲಪಡೆ ಇದ್ದು, ಎರಡನೇ ಅಭ್ಯರ್ಥಿ ಗೆಲುವಿನ ನಿರೀಕ್ಷೆಯಲ್ಲಿ ಕಾಂಗ್ರೆಸ್ ಪಾಳಯದಲ್ಲಿದ್ದು, ತಮ್ಮ ಅಭ್ಯರ್ಥಿ ಗೆದ್ದೇ ಗೆಲ್ತಾರೆ ಎಂದು ಜೆಡಿಎಸ್​ ​ಹೇಳುತ್ತಿದೆ. ಮೂರು ಪಕ್ಷಗಳ ನಾಯಕರಿಂದಲೂ ಹತ್ತಾರು ಲೆಕ್ಕಾಚಾರವಿದೆ.

ಅದಲ್ಲದೇ, ಮೇಲ್ಮನೆ ಚುನಾವಣೆಯಲ್ಲಿ ಮೇಲುಗೈ ಸಾಧಿಸಲು ಬಿಜೆಪಿ ಚಕ್ರವ್ಯೂಹ ನಡೆಸುತ್ತಿದ್ದು, ಇಂದು ಸಂಜೆ 7 ಗಂಟೆಗೆ ಮತ್ತೊಂದು ಸುತ್ತಿನ ಮಹತ್ವದ ಸಭೆಯನ್ನು ಮಾಡಲಿದ್ದಾರೆ. ಸಚಿವ ಆರ್​.ಅಶೋಕ್, ಸುನೀಲ್ ಕುಮಾರ್, ಬಿ.ಸಿ.ನಾಗೇಶ್​ಗೆ ಈ ಮೂವರು ಸಚಿವರಿಗೆ ರಾಜ್ಯಸಭಾ ಚುನಾವಣೆಯ ಉಸ್ತುವಾರಿಯನ್ನು ನೀಡಲಾಗಿದೆ.

RELATED ARTICLES

Related Articles

TRENDING ARTICLES