Wednesday, January 22, 2025

ಮೊದಲು ನಮಗೆ ಮತ; ಮಿಕ್ಕರೆ ಬೇರೆಯವರಿಗೆ ಕೊಡಿ : ಆರ್ ಅಶೋಕ್

ಬೆಂಗಳೂರು : ಪ್ರಧಾನಿ ನರೇಂದ್ರ ಮೋದಿಯವರ ನಾಯಕತ್ವದಲ್ಲಿ ನಂಬಿಕೆ ಇರುವಾಗ ಒಂದಲ್ಲ, ಅರ್ಧ ಮತಗಳು ಕೂಡ ಆಚೇ ಈಚೆ ಹೋಗಲ್ಲ ಎಂದು ಕಂದಾಯ ಸಚಿವ ಆರ್​​ ಅಶೋಕ್​​ ಹೇಳಿದ್ದಾರೆ.

ನಗರದಲ್ಲಿಂದು ಏರ್ಪಡಿಸಿದ್ದ ಬಿಜೆಪಿ ಭೋಜನ ಕೂಟ ಮತ್ತು ಸಭೆ ಅಂತ್ಯದ ಬಳಿಕ ಸುದ್ದಿಗಾರರೊಂದಿಗೆ  ಮಾತನಾಡಿದ ಅವರು, ರಾಜ್ಯಸಭೆ ಚುನಾವಣೆಯಲ್ಲಿ ಬಿಜೆಪಿ ಗೆಲುವು ನಿಶ್ಚಯವಾಗಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮತ್ತು ಪ್ರಧಾನಿ ಮೋದಿ ನಾಯಕತ್ವದಲ್ಲಿರುವ ನಾವು ನಮ್ಮ ಶಾಸಕರಿಂದ ಯಾವುದೇ ಅಡ್ಡ ಮತದಾನವಿರುವುದಿಲ್ಲ. ಅಲ್ಲದೇ ಒಂದು ಮತವು ಆಚೆ ಈಚೆ ಹೋಗುವುದಿಲ್ಲ ಎಂದು ಹೇಳಿದರು.

ಇನ್ನು ಬಿಜೆಪಿಯೊಂದು ರಾಷ್ಟ್ರೀಯ ಪಕ್ಷ. ಮೋದಿ,ಸಿಎಂ ಬೊಮ್ಮಾಯಿ‌ ನೇತೃತ್ವದಲ್ಲಿ ಚುನಾವಣೆ ಎದುರಿಸುತ್ತಿದ್ದೇವೆ ಹೀಗಾಗಿ ಗೆಲುವು ನಮ್ಮದೇ, ಗೆಲ್ಲಲು ಬೇಕಾದ ರಣತಂತ್ರ ಮಾಡಿದ್ದೇವೆ. ಕಾಂಗ್ರೆಸ್, ಜೆಡಿಎಸ್ ಆತ್ಮಸಾಕ್ಷಿ ಮತಕ್ಕೆ ಬಿದ್ದಿದೆ. ನಮಗೆ ಈ ಪಕ್ಷಗಳ ಕಚ್ಚಾಟ ನೋಡಿದ್ರೆ ಆಶ್ಚರ್ಯ ಆಗುತ್ತದೆ. ಜೆಡಿಎಸ್‌ ಬಿಜೆಪಿ ಒಂದು ಟಿಂ ಅಂತ ಕಾಂಗ್ರೆಸ್ ಹೇಳುತ್ತಿತ್ತು. ಆದರೆ, ಈಗ ದಳವು ನಾವು ನಿಮ್ಮ ಬಿ ಟೀಂ ಆಗ್ತೀವಿ ಎಂದು  ಕಾಂಗ್ರೆಸ್ ಬಳಿ ಹೇಳುತ್ತಿದೆ. ಇಬ್ಬರು ಒಟ್ಟಾಗಲು ಕಾಲು ಹಿಡಿಯುತ್ತಿದ್ದಾರೆ. ಇದನೆಲ್ಲಾ ನೋಡುತ್ತಿದ್ದರೆ ಸಾಕಷ್ಟು ಆತ್ಮ ಬಲ ಇರೋದು ನಮಗೆ ಎಂದು ಅನಿಸುತ್ತಿದೆ. ಹೀಗಾಗಿ ಮೊದಲು ನಮಗೆ ಮತ ಕೊಡಿ, ಮಿಕ್ಕರೆ ಅವರಿಗೆ ಕೊಡಿ ಎಂದು ವ್ಯಂಗ್ಯವಾಡಿದರು.

ಅಷ್ಟೇಅಲ್ಲದೇ ಕಾಂಗ್ರೆಸ್ ಜೆಡಿಎಸ್ ಇಬ್ಬರೂ ಕೈ ಮುಗಿದುಕೊಳ್ಳುತ್ತಿದ್ದಾರೆ. ಈಗ ಸಮಯ ಮುಗಿದಿದೆ. ನಾನೇನು ಹೆಚ್ಚಾಗಿ ಕಮೆಂಟ್ ಮಾಡಲ್ಲ. ನಮ್ಮ 3 ಅಭ್ಯರ್ಥಿಗಳು ಅನಾಯಾಸವಾಗಿ ಗೆಲ್ತಾರೆ ಅನ್ನೋ ನಂಬಿಕೆ ಇದೆ ಎಂದರು.

ಬಳಿಕ ಅಡ್ಡಮತದಾನಗಳು ಆಗುತ್ತಾ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿ, ಪ್ರಧಾನಿ ಮೋದಿಯವರ ನಾಯಕತ್ವದಲ್ಲಿ ನಂಬಿಕೆ ಇರುವಾಗ ಒಂದಲ್ಲ ಅರ್ಧ ಮತಗಳು ಕೂಡ ಆಚೇ ಈಚೆ ಹೋಗಲ್ಲ ಎಂದು ಸ್ವಪಕ್ಷದ ಬಗ್ಗೆ ಗರ್ವ ತೋರಿದರು.

RELATED ARTICLES

Related Articles

TRENDING ARTICLES