Friday, November 8, 2024

ಪಿಎಸ್‌ಐ ಪರೀಕ್ಷೆ ಟಾಪರ್ ಕುಶಾಲ್ ಬಂಧನ

ಕಲಬುರಗಿ : ಪಿಎಸ್ಐ ಅಕ್ರಮ ನೇಮಕಾತಿಯಲ್ಲಿ ಬಂಧನವಾಗಿದ್ದ ಮೋಸ್ಟ್ ಕಾಟ್ರವರ್ಷಿಯಲ್ ಪರ್ಸನ್ ದರ್ಶನ್ ಗೌಡ ಅಕ್ರಮ ನಡೆಸಿರೋದು ಎಫ್ ಎಸ್ ಎಲ್ ವರದಿಯಲ್ಲಿ ಧೃಡವಾಗಿದೆ… ಈ ನಡುವೆ ಮೆರಿಟ್ ಲಿಸ್ಟ್ ನಲ್ಲಿ ಟಾಪ್ ರ್ಯಾಂಕ್ ಪಡೆದಿದ್ದ ಮತ್ತೊಬ್ಬ ಅಭ್ಯರ್ಥಿ ಬಂಧನವಾಗಿರೋದು ಆತಂಕ ಉಂಟು ಮಾಡಿದೆ.. ಇಂಟ್ರೆಸ್ಟಿಂಗ್ ಅಂದ್ರೆ ಈ ಇಬ್ಬರೂ ಆಪ್ತ ಸ್ನೇಹಿತರಂತೆ.

PSI ಅಕ್ರಮ ನೇಮಕಾತಿ ಪ್ರಕರಣದ ಮೋಸ್ಟ್ ಕಾಂಟ್ರವರ್ಷಿಯಲ್ ವ್ಯಕ್ತಿ ಅಂದ್ರೆ ಅದು ದರ್ಶನ ಗೌಡ… ಇತ್ತೀಚೆಗಷ್ಟೇ ಆತನ ಮೇಲೆ ಯಲಹಂಕ ನ್ಯೂಟೌನ್ ಪೊಲೀಸ್ ಠಾಣೆಯಲ್ಲಿ ಎಪ್ ಐ ಆರ್ ದಾಖಲಿಸಿ ಆತನನ್ನ ಬಂಧನ ಮಾಡಿದ್ರು.. ಇದೀಗ ಆತ ಅಕ್ರಮ ನಡೆಸಿರುವುದು ದೃಢವಾಗಿದೆ.. ಪರೀಕ್ಷೆಯಲ್ಲಿ ಉತ್ತರ ಬರೆಯದೇ ದರ್ಶನ್ ಗೌಡ ನಾಲ್ಕನೇ ರ್ಯಾಂಕ್ ಬಂದಿದ್ದ ಎನ್ನುವುದು ಎಫ್ಎಸ್ಎಲ್‌ ವರದಿಯ ಮೂಲಕ ಬಹಿರಂಗವಾಗಿದೆ.

ಇನ್ನೂ ಪರೀಕ್ಷೆ ಬರೆಯುವ ದಿನ ಸಂಪೂರ್ಣ ಗೊತ್ತಿದ್ದ ಕೆಲವು ಉತ್ತರಗಳನ್ನು ಮಾತ್ರ ಬರೆದಿದ್ದ ದರ್ಶನ್, ಉಳಿದ ಜಾಗವನ್ನ ಖಾಲಿ ಬಿಟ್ಟು ಉತ್ತರ ಪತ್ರಿಕೆ ಕೊಟ್ಟು ಬಂದಿದ್ದ…ನಂತರ ಈ ಉತ್ತರ ಪತ್ರಿಕೆಯನ್ನ ಮಧ್ಯವರ್ತಿಗಳ ಸಹಾಯದಿಂದ ನೇಮಕಾತಿ ವಿಭಾಗದಲ್ಲೆ ತಿದ್ದಿರುವ ಅನುಮಾನ ವ್ಯಕ್ತವಾಗಿದೆ. ಖಾಲಿ ಉತ್ತರ ಪತ್ರಿಕೆ ಕೊಟ್ಟು ಹೋಗಿದ್ದ ದರ್ಶನ್ ಗೌಡ, ಒಎಂಆರ್ ಶೀಟ್ ನಂಬರ್ ಪಡೆದು ನಂತರ ನೇಮಕಾತಿ ವಿಭಾಗದಲ್ಲಿ ಕೆಲಸ ಮಾಡುವವರ ಜೊತೆಗೆ ಡೀಲ್ ನಡೆಸಿ ಉತ್ತರ ಬರೆಸಿರುವ ಶಂಕೆ ವ್ಯಕ್ತವಾಗಿದೆ.

ಇನ್ನೂ ಪಿಎಸ್ಐ ಕೇಸ್ ಹೊರಬರುತ್ತಿದ್ದಂತೆ ದರ್ಶನ್ ಗೌಡ ಸಚಿವ ಅಶ್ವತ್ಥನಾರಾಯಣ ಮುಖೇನ ಲಕ್ಷ-ಲಕ್ಷ ಹಣ ಕೊಟ್ಟು ಕೆಲಸ ಗಿಟ್ಟಿಸಿಕೊಂಡಿದ್ದಾನೆಂದು ಕಾಂಗ್ರೆಸ್ ಆರೋಪ ಮಾಡಿತ್ತು. ಸುಮಾರು 80 ಲಕ್ಷ ಹಣವನ್ನ ದರ್ಶನ್ ನೀಡಿದ್ದ ಎಂಬ ಆರೋಪ‌ ಕೇಳಿ ಬಂದಿತ್ತು. ನೇಮಕಾತಿ ವಿಭಾಗದಲ್ಲಿ ತಿದ್ದುಪಡಿ ನಂತರ ಓಎಂಆರ್ ಶೀಟ್‌ನಲ್ಲೂ ಕೀ ಆನ್ಸರ್ ನೋಡಿ ಮತ್ತೆ ಕಾರ್ಬನ್ ಕಾಪಿ ತಿದ್ದಿದ್ದ. ಆದರೆ, ಈ ಎಫ್ಎಸ್ಎಲ್‌ನಲ್ಲಿ ಅಸಲಿ ಸತ್ಯ ಬಯಲಾಗಿದ್ದು, ಮುಂದಿನ‌ ದಿನಗಳಲ್ಲಿ ಈ‌ ಪ್ರಕರಣ ಸಚಿವರ ಬುಡಕ್ಕೆ ಅಂಟಿಕೊಳ್ಳುವ ಸಾಧ್ಯತೆಯಿದೆ.

PSI ನೇಮಕಾತಿಯಲ್ಲಿ ಅಕ್ರಮ ನಡೆದಿರೋದು ಎಲ್ಲರಿಗೂ ಗೊತ್ತಿರೋ ವಿಷಯ.. ಆದ್ರೆ, ಪರೀಕ್ಷೆಯ ಮೆರಿಟ್ ವಿಭಾಗದಲ್ಲಿ ಟಾಪರ್ ಆಗಿದ್ದ ಅಭ್ಯರ್ಥಿಯೇ ಇದೀಗ ಬಂಧನವಾಗಿರೋದು ಆತಂಕ ಉಂಟು ಮಾಡಿದೆ.. ಪಿಎಸ್‌ಐ ಸೆಲೆಕ್ಷನ್ ಲಿಸ್ಟ್‌ನ ಟಾಪ್ ರ್ಯಾಂಕ್ ಬಂದಿದ್ದ ಮಾಗಡಿಯ ಜುಟ್ಟನಹಳ್ಳಿ ಮೂಲದ ಕುಶಾಲ್ ರಾಜು ಅರೆಸ್ಟ್ ಆಗಿದ್ದಾನೆ. ಸಚಿವರೊಬ್ಬರ ಸಂಬಂಧಿಯಾಗಿರೊ ಕುಶಾಲ್ ಕುಮಾರ್ ಮೊನ್ನೆ ಬಂಧನವಾಗಿದ್ದ ದರ್ಶನ್ ಗೌಡನ ಆಪ್ತ ಸ್ನೇಹಿತ ಅಂತಲೂ ಹೇಳಲಾಗುತ್ತಿದೆ.. ಈತನ ಓಎಂಆರ್ ಹಾಗೂ ಕಾರ್ಬನ್ ಕಾಪಿಯಲ್ಲಿ ವ್ಯತ್ಯಾಸವಿರೋದು ಎಫ್‌ಎಸ್‌ಎಲ್ ವರದಿಯಲ್ಲಿ ದೃಢವಾಗಿದೆ.. 545ರಲ್ಲಿ 1ನೇ ರ್ಯಾಂಕ್ ಪಡೆದಿದ್ದ ಕುಶಾಲ್ ಕುಮಾರ್, 200 ಅಂಕಗಳಿಗೆ 168 ಅಂಕ ಪಡೆದು ಫಸ್ಟ್ ರ್ಯಾಂಕ್ ಪಡೆದಿದ್ದ. ಇದೀಗ ಈತನ ಮೇಲೆ ಹಲಸೂರು ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದ್ದು, ಆತನನ್ನ ಬಂಧನ ಮಾಡಲಾಗಿದೆ..

ಅಶ್ವಥ್ ಎಸ್.ಎನ್‌ ಕ್ರೈಂ ಬ್ಯೂರೋ ಪವರ್ ಟಿವಿ

RELATED ARTICLES

Related Articles

TRENDING ARTICLES