Monday, December 23, 2024

ವಿಕ್ರಂ ಶೈಲಿಯಲ್ಲಿ ಬಾಲಯ್ಯ NBK 107 ಲೋಡಿಂಗ್

ಸೂಪರ್ ಸ್ಟಾರ್ ಒಬ್ರಿಗೆ ಒಬ್ಬ ಡೈರೆಕ್ಟರ್ ಆ್ಯಕ್ಷನ್ ಕಟ್ ಹೇಳೋಕೂ, ಕಟ್ಟಾ ಅಭಿಮಾನಿಯೊಬ್ಬ ಡೈರೆಕ್ಟ್ ಮಾಡೋಕೂ ಬಹುದೊಡ್ಡ ವ್ಯತ್ಯಾಸವಿರುತ್ತೆ. ಡೈಹಾರ್ಡ್​ ಫ್ಯಾನ್ ಸಾರಥ್ಯ ವಹಿಸಿದ್ರೆ, ಅದ್ರ ರಿಸಲ್ಟ್ ವಿಕ್ರಮ್ ಅಂತಹ ಸಿನಿಮಾ ಹೊರಬರುತ್ತೆ. ಸದ್ಯ ಅದೇ ಪ್ಯಾಟ್ರನ್​​ನಲ್ಲಿ ಎನ್​ಬಿಕೆ 107 ಬರ್ತಿರೋದು ಹಾಟ್ ಟಾಪಿಕ್ ಆಗಿದೆ.

  1. ವಿಕ್ರಂ ಶೈಲಿಯಲ್ಲಿ ಬಾಲಯ್ಯ NBK 107 ಲೋಡಿಂಗ್
  2. ಅಭಿಮಾನಿ ಆ್ಯಕ್ಷನ್ ಕಟ್ ಹೇಳಿದ್ರೆ ಎಫೆಕ್ಟ್ ಡಬಲ್..!
  3. 250 ಕೋಟಿ ಕ್ಲಬ್​​ನತ್ತ ಕಮಲ್ ಹಾಸನ್ ವಿಕ್ರಮ್ ಹೆಜ್ಜೆ
  4. ಡೈರೆಕ್ಟರ್​ಗೆ ಕಾರ್, ಸೂರ್ಯಗೆ ರೋಲೆಕ್ಸ್ ವಾಚ್ ಗಿಫ್ಟ್

ಇದು ನಟಸಿಂಹ ನಂದಮೂರಿ ಬಾಲಕೃಷ್ಣ ನಟನೆಯ 107ನೇ ಚಿತ್ರದ ಹೈ ವೋಲ್ಟೇಜ್ ಟೀಸರ್ ಝಲಕ್. ಬಾಲಯ್ಯನ ಟೆರಿಫಿಕ್ ಅಪಿಯರೆನ್ಸ್ ಒಂದ್ಕಡೆ ಧೂಳೆಬ್ಬಿಸ್ತಿದ್ರೆ, ನಮ್ಮ ಸ್ಯಾಂಡಲ್​ವುಡ್ ಸಲಗ ದುನಿಯಾ ವಿಜಯ್ ಮತ್ತೊಂದ್ಕಡೆ ವಿಲನ್ ಖದರ್ ತೋರೋ ಮೂಲಕ ಚಿತ್ರದ ಗಮ್ಮತ್ತು ಹೆಚ್ಚಿಸಿದ್ದಾರೆ. ಹೌದು.. ಇದು ಇಬ್ಬರು ಹೈ ವೋಲ್ಟೇಜ್ ಆ್ಯಕ್ಟರ್​ಗಳ ಮಹಾ ಸಂಗಮದ ಡೆಡ್ಲಿ ಹಾಗೂ ಡೇರಿಂಗ್ ಎಂಟರ್​ಟೈನರ್.

ಅಂದಹಾಗೆ ಬಾಲಯ್ಯನ 107ನೇ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳ್ತಿರೋದು ಗೋಪಿಚಂದ್ ಮಾಲಿನೇನಿ ಅನ್ನೋ ಮೋಸ್ಟ್ ಪ್ಯಾಷನೇಟ್ ಡೈರೆಕ್ಟರ್. ಕ್ರ್ಯಾಕ್ ಅನ್ನೋ ಬ್ಲಾಕ್ ಬಸ್ಟರ್ ಹಿಟ್ ಬಳಿಕ ಗೋಪಿಯ ಬಹು ನಿರೀಕ್ಷಿತ ಸಿನಿಮಾ ಇದು. ಅಂದಹಾಗೆ ಗೋಪಿಚಂದ್ ಕೂಡ ವಿಕ್ರಂ ಡೈರೆಕ್ಟರ್ ಹಾದಿಯಲ್ಲೇ ಸಾಗಲು ಮುಂದಾಗಿರೋದು ಎಲ್ಲೆಡೆ ಬ್ರೇಕಿಂಗ್ ನ್ಯೂಸ್​ ಆಗಿ ಮಾರ್ಪಟ್ಟಿದೆ.

ಸಿನಿಮಾದ ನಿರ್ದೇಶಕ ಬರೀ ಆ ಚಿತ್ರದ ಕ್ಯಾಪ್ಟನ್ ಅಷ್ಟೇ ಆಗದೆ, ಆ ಸೂಪರ್ ಸ್ಟಾರ್​​ನ ಡೈ ಹಾರ್ಡ್​ ಫ್ಯಾನ್ ಆದ್ರೆ ಅದ್ರ ಔಟ್​ಪುಟ್ ಎಫೆಕ್ಟ್ ಡಬಲ್ ಆಗಲಿದೆ. ಇದಕ್ಕೆ ಕಮಲ್ ಹಾಸನ್​ರ ಸೆನ್ಸೇಷನಲ್ ಹಿಟ್ ವಿಕ್ರಂ ಸಿನಿಮಾ ಹಾಗೂ ಅದ್ರ ಸಾರಥಿ ಲೋಕೇಶ್ ಕನಕರಾಜ್. ಹೌದು.. ತಾನೊಬ್ಬ ಕಮಲ್ ಅಭಿಮಾನಿ, ಇದು ನನ್ನ ಸ್ಟಾರ್​ಗೆ ನಾ ಕೊಡ್ತಿರೋ ಗಿಫ್ಟ್ ಅಂತ ಮೊದಲೇ ಹೇಳಿದ್ರ ಲೋಕಿ. ಅದ್ರಂತೆ ಸದ್ಯ ವಿಕ್ರಂ 250 ಕೋಟಿಯ ಗಡಿಯಲ್ಲಿದೆ. ಆರು ದಿನದಲ್ಲಿ ಬಾಕ್ಸ್ ಆಫೀಸ್​ ಧೂಳೆಬ್ಬಿಸಿದೆ.

ಇದೀಗ ಗೋಪಿಚಂದ್ ಮಾಲಿನೇನಿ ಕೂಡ ಅದೇ ಹಾದಿಯಲ್ಲಿ ಸಾಗಿದ್ದಾರೆ. ಇದು ಸಿಂಹದ ಘರ್ಜನೆ, ಅಭಿಮಾನಿಯ ಕನಸು ಅಂತ ಬಾಲಯ್ಯ ಅವ್ರ ಬಗ್ಗೆ ಹಾಗೂ ಸಿನಿಮಾ ಬಗ್ಗೆ ಟೀಸರ್ ಲಾಂಚ್​ಗೂ ಮುನ್ನ ಪೋಸ್ಟ್ ಮಾಡಿದ್ದಾರೆ ಡೈರೆಕ್ಟರ್. ಅರ್ಥಾತ್ ಬಾಲಯ್ಯನ ಕಟ್ಟಾ ಅಭಿಮಾನಿಯಾಗಿ ಗೋಪಿಚಂದ್ ಈ ಸಿನಿಮಾದ ಮೇಕಿಂಗ್​ನ ಬೇರೆಯದ್ದೇ ಲೆವೆಲ್​ಗೆ ಪ್ರೆಸೆಂಟ್ ಮಾಡ್ತಿದ್ದಾರೆ.

ಲೋಕೇಶ್ ಕನಕರಾಜ್​ಗೆ ಒಂದೊಳ್ಳೆ ಸಿನಿಮಾ ಕೊಟ್ಟ ಖುಷಿಗೆ ಕಮಲ್ ಹಾಸನ್ ಅವ್ರೇ ಸ್ವತಃ ದುಬಾರಿ ಕಾರ್​ವೊಂದನ್ನ ಗಿಫ್ಟ್ ಮಾಡಿದ್ರು. ಜೊತೆಗೆ ರೋಲೆಕ್ಸ್ ರೋಲ್ ಮಾಡಿ ಎಲ್ಲರ ಗಮನ ಸೆಳೆದ ಸೂರ್ಯ ಅವ್ರಿಗೂ ರೋಲೆಕ್ಸ್ ವಾಚ್​ನ ಉಡುಗೊರೆಯಾಗಿ ನೀಡಿದ್ರು. ಇದು ಚಿತ್ರದ ಕಲಾವಿದರು ಹಾಗೂ ಟೆಕ್ನಿಷಿಯನ್ಸ್ ಮಧ್ಯೆ ಇರೋ ಬಾಂಡಿಂಗ್. ಇದೇ ಪ್ರೀತಿ, ಆಪ್ಯಾಯತೆಗಳು ಬಾಲಯ್ಯ 107ನೇ ಚಿತ್ರದಲ್ಲೂ ಪ್ರಜ್ವಲಿಸೋ ಮನ್ಸೂಚನೆ ಸಿಕ್ಕಿದೆ.

ಬೀರಗಾನಹಳ್ಳಿ ಲಕ್ಷ್ಮಿನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಪವರ್ ಟಿವಿ

RELATED ARTICLES

Related Articles

TRENDING ARTICLES