Wednesday, January 22, 2025

ಇದು ದೇವೇಗೌಡ್ರು ಕಾಲ ಅಲ್ಲ, ಕುಮಾರಸ್ವಾಮಿ-ರೇವಣ್ಣ ಅವರ ಕಾಲ : ಎನ್.ಚಲುವರಾಯಸ್ವಾಮಿ

ಮಂಡ್ಯ: 37 ಜನ ಇದ್ದಾಗ ಒಬ್ಬ ದಲಿತರನ್ನ ಯಾಕೆ ಮಂತ್ರಿ ಮಾಡಿಲ್ಲ ಎಂದು ಮಂಡ್ಯದಲ್ಲಿ ಎನ್.ಚಲುವರಾಯಸ್ವಾಮಿ ಹೇಳಿದ್ದಾರೆ.

ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾವು ಕಿವಿಗೆ ಹೂ ಮುಡಿದುಕೊಂಡಿಲ್ಲ. ಪಕ್ಷ ಅಧಿಕಾರಕ್ಕೆ ಬಂದ್ರೆ ದಲಿತರಿಗೆ ಸಿಎಂ ಕೊಡ್ತೇವೆ ಅಂತ ಹೇಳಲಿ. ನಾವು ಅಣ್ಣ-ತಮ್ಮ ತೆಗೆದುಕೊಳ್ಳುವುದಿಲ್ಲ ಎನ್ನಲಿ. ಅದನ್ನ ಬಿಟ್ಟು ನಾವೇನು ಕಿವಿಗೆ ಹೂ ಮಡಿಕೊಂಡಿದ್ದೀವಾ.? ನಾನು ಅವರ ಜೊತೆಯಲ್ಲೆ ಇದ್ದು ಬಂದವನು. ನನ್ನ ಉಸಿರಿರೊ ಒಳಗೆ ಯಾವಾತಾದ್ರು ಒಂದು ದಿನ ಅಂತ ಹೇಳಿದ್ದಾರೆ. ಹಿಂದೆ ಖರ್ಗೆ ರೇಸ್​ನಲ್ಲಿದ್ರು, ಯಾಕೇ ಮಾಡಿಲ್ಲ. ಇವತ್ತು ಕುಮಾರಸ್ವಾಮಿನ ಗೆಳಗೆ ಇಳಿಸಿ ಇಬ್ರಾಹಿಂನ ಅಧ್ಯಕ್ಷರನ್ನಾಗಿ ಮಾಡಿದ್ದಾರೆ ಎಂದು ಹೇಳಿದರು.

ಅದಲ್ಲದೇ, 37 ಜನ ಇದ್ದಾಗ ಒಬ್ಬ ದಲಿತರನ್ನ ಯಾಕೆ ಮಂತ್ರಿ ಮಾಡಿಲ್ಲ. ಮುಂದಿನ ಚುನಾವಣೆಯಲ್ಲಿ ನಮ್ಮ ಪಕ್ಷ ಅಧಿಕಾರಕ್ಕೆ ಬಂದ್ರೆ ದಲಿತರಿಗೆ ಕೊಡ್ತಿವಿ ಅಂತ ಹೇಳಲಿ. ಲಾಸ್ಟ್ ಟೈಮ್ ಕೂಡ ಹೇಳಿದ್ರು 125 ಸ್ಥಾನ ಬಂದಿಲ್ಲ ಅಂದ್ರೆ ರಾಜಕಾರಣ ಮಾಡಕಿಲ್ಲ ಅಂತ. 37 ಬಂದು ಸಿಎಂ ಆಗಿಲ್ವಾ.? ಇವಾಗ 120 ಬರಲಿಲ್ಲ ಅಂದ್ರೆ ಪಾರ್ಟಿ ಡಿಸಾಲ್ ಮಾಡ್ತೀನಿ ಅನ್ನಲಿ ನೋಡೋಣ. ಇದು ದೇವೇಗೌಡ್ರು ಕಾಲ ಅಲ್ಲ, ಕುಮಾರಸ್ವಾಮಿ-ರೇವಣ್ಣ ಅವರ ಕಾಲ. ದೇವೇಗೌಡ್ರು ಕಾಲಕ್ಕೆ ಸೆಕ್ಯೂಲರ್ ಅನ್ನೋದು ಮುಗಿತು. ದೇವೇಗೌಡ್ರು ಸ್ವಲ್ಪ ಸೆಕ್ಯೂಲರ್ ಅಂದ್ರೆ ನಂಬಹುದಿತ್ತು ಎಂದು ಜೆಡಿಎಸ್ ವಿರುದ್ದ ಎನ್.ಚಲುವರಾಯಸ್ವಾಮಿ ವಾಗ್ದಾಳಿ ಮಾಡಿದರು.

ಇನ್ನು, ಸೆಕ್ಯೂಲರ್ ಅನ್ನೋದು ಇದ್ರೆ ರಾಜ್ಯಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪರವಾಗಿ ಅವರು ಓಟ್ ಹಾಕಲಿ. ಜೆಡಿಎಸ್ ನವರು ಬಿಜೆಪಿ ಜೊತೆ ಕೈ ಜೋಡಿಸಿದ್ದಾರೆ. ಅಸೆಂಬ್ಲಿಯಲ್ಲಿ ಕಾಂಗ್ರೆಸ್-ಜೆಡಿಎಸ್ ಸರ್ಕಾರ ಇತ್ತು. ಸಿಎಂ ಗಿರಿ ಕಳೆದುಕೊಂಡ ಮೇಲೆ ಜೆಡಿಎಸ್ ನವರು ಬಿಜೆಪಿ ಜೊತೆ ಕೈ ಜೋಡಿಸಿದ್ದಾರೆ. ಎಲ್ಲಾ ವಿಧಾನ ಪರಿಷತ್, ವಿಧಾನ ಸಭೆಯಲ್ಲಿ ಜೆಡಿಎಸ್ ನವರು ಬಿಜೆಪಿ ಜೊತೆ ಕೈ ಜೋಡಿಸಿದ್ದಾರೆ. ಸಭಾಪತಿ ಚುನಾವಣೆಯಲ್ಲಿ ನಮ್ಮ ಪಕ್ಷದ ರಾಜೀನಾಮೆ ತೆಗೆದುಕೊಳ್ಳುವ ಪ್ರಯತ್ನದಿಂದ ಹಿಡಿದು. ಬಸವರಾಜ್ ಹೊರಟ್ಟಿಯನ್ನ ಸಭಾಪತಿ ಮಾಡಿಕೊಂಡ ಕೆಲಸದಿಂದ ಹಿಡಿದು. ಮಂಡ್ಯದಲ್ಲಿ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಗಿರಿವರೆಗೆ ಬಿಜೆಪಿ ಜೊತೆ ಕೈ ಜೋಡಿಸಿದ್ರು ಅವಾಗೆಲ್ಲಾ ರೇವಣ್ಣ ಅವರಿಗೆ ಸೆಕ್ಯೂಲರ್ ನೆನಪಾಗಿಲ್ಲ ಪಾಪ. ಇವತ್ತು ಸೆಕ್ಯೂಲರ್ ಸೆಕ್ಯೂಲರ್ ಅಂತ ಮಾತನಾಡ್ತಾರೆ. ದೇವೇಗೌಡ್ರು ಕಾಲಕ್ಕೆ ಸೆಕ್ಯೂಲರ್, ಇದು ದೇವೇಗೌಡ್ರು ಕಾಲ ಅಲ್ಲ. ಇದು ಕುಮಾರಸ್ವಾಮಿ-ರೇವಣ್ಣ ಅವರ ಕಾಲ ಕಾಂಗ್ರೆಸ್ ಬಗ್ಗೆ ಎಷ್ಟು ಸಲ ಲಘುವಾಗಿ ಮಾತನಾಡಿದ್ದಾರೆ ಎಂದರು.

RELATED ARTICLES

Related Articles

TRENDING ARTICLES