Monday, December 23, 2024

ಸಪ್ತ ಭಾಷೆಗೆ ಉಪ್ಪಿ- ಕಿಚ್ಚನ ಕಬ್ಜ ಡಬ್ಬಿಂಗ್ ಶುಭಾರಂಭ

ರೆಟ್ರೋ ಲುಕ್​, ಜಾವಾ ಬೈಕ್​ನಲ್ಲಿರೋ ಉಪ್ಪಿಯ ರಗಡ್​ಸ್ಟೈಲ್​ ಸಿನಿರಸಿಕರಿಗೆ ಸಖತ್​ ಕಿಕ್ ಕೊಟ್ಟಿದೆ. ಅಮಿತಾಭ್​ ಬಚ್ಚನ್​ ಶೋಲೆ ಸಿನಿಮಾದಲ್ಲಿ ಬಳಸಿದ ಪಿಸ್ತೂಲ್​ ನೋಡಿ ಥ್ರಿಲ್​ ಆಗಿರೋ ಪ್ರೇಕ್ಷಕರು ಐ ಕಾಂಟ್​​ ವೆಯ್ಟ್​ ಅಂತಿದ್ದಾರೆ. ಯೆಸ್​.. ನಾವು ಹೇಳ್ತಾ ಇರೋದು ಕಬ್ಜ ಚಿತ್ರದ ಬಗ್ಗೆ. ಸ್ಯಾಂಡಲ್​ವುಡ್​ ಬಾದ್​ಷಾ ಕಿಚ್ಚ, ರಿಯಲ್ ಸ್ಟಾರ್​ಉಪ್ಪಿ ಕಾಂಬೋದಲ್ಲಿ ಮೂಡಿಬರ್ತಿರೋ ಅದ್ಧೂರಿ ಸಿನಿಮಾದ ಎಕ್ಸ್​ಕ್ಲೂಸಿವ್​ ಅಪ್ಡೇಟ್​ ನಿಮಗಾಗಿ.

  1. ಸಪ್ತ ಭಾಷೆಗೆ ಉಪ್ಪಿ- ಕಿಚ್ಚನ ಕಬ್ಜ ಡಬ್ಬಿಂಗ್ ಶುಭಾರಂಭ
  2. ಮೊದಲ ಬಾರಿಗೆ ಏಕಕಾಲಕ್ಕೆ 7 ಭಾಷೆಗಳಲ್ಲಿ ಡಬ್ಬಿಂಗ್
  3. ‘ಕಬ್ಜ’ ಟೀಸರ್​ ರಿಲೀಸ್ ಮಾಡುವಂತೆ ಫ್ಯಾನ್ಸ್​ ಒತ್ತಾಯ
  4. ಅಭಿಮಾನಿಗಳಿಗೆ  ಕಾದಿದೆ ಸರ್​​ಪ್ರೈಸಿಂಗ್​ ಗುಡ್​ ನ್ಯೂಸ್

ಸೂಪರ್ ಸ್ಟಾರ್ ಉಪೇಂದ್ರ, ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್​ ಕಾಂಬಿನೇಷನ್​​ನಲ್ಲಿ ಮೂಡಿಬರ್ತಿರೋ ಅದ್ಧೂರಿ ಸಿನಿಮಾ ಕಬ್ಜ. ರೆಟ್ರೋ ಅಂಡರ್​​ವರ್ಲ್ಡ್​​​ ಕಥೆಯನ್ನು, ಮೈನವಿರೇಳಿಸೋ ಹಾಗೆ ತೋರಿಸೋಕೆ ನಿರ್ದೇಶಕ ಆರ್.​ ಚಂದ್ರು ಹೊರಟಿದ್ದಾರೆ. ಈಗಾಗ್ಲೇ ಸಿನಿಮಾದ ಮೇಕಿಂಗ್ ಇನ್ನಿಲ್ಲದ​ ಕ್ಯೂರಿಯಾಸಿಟಿ ಹುಟ್ಟಿಸಿದೆ. ಕಬ್ಜ ಮೇಕಿಂಗ್​ ತುಣುಕುಗಳನ್ನು ನೋಡಿದವ್ರು ಸ್ಟನ್​ ಆಗಿದ್ದಾರೆ.

ಶೂಟಿಂಗ್​ ಕಂಪ್ಲೀಟ್ ಅಗಿದ್ದು, ಡಬ್ಬಿಂಗ್​ ಹಾಗೂ ಪೋಸ್ಟ್​ ಪ್ರೊಡಕ್ಷನ್​ ಕಾರ್ಯಗಳಲ್ಲಿ ಬ್ಯುಸಿ ಇದೆ ಟೀಂ. ಕೆಜಿಎಫ್​ ನಂತ್ರ ಇಡೀ ವಿಶ್ವದಲ್ಲೇ ವಿನೂತನ ಪ್ರಯೋಗದೊಂದಿಗೆ ಸಿನಿಮಾ ತಯಾರಾಗ್ತಿದೆ. ಮಲ್ಟಿ ಸ್ಟಾರರ್​ ಮೂವಿ ಕಬ್ಜ ಬರೋಬ್ಬರಿ ಏಳು ಭಾಷೆಗಳಲ್ಲಿ ಡಬ್ಬಿಂಗ್​ ಆಗ್ತಿದೆ. ಚಿತ್ರರಂಗದಲ್ಲೇ ಹೊಸ ಇತಿಹಾಸ ಬರೆದಿರುವ ಕಬ್ಜ ಸಿನಿಮಾ, ಚಿತ್ರರಸಿಕರ ಎದೆಯಲ್ಲಿ ಹೊಸ ಸಂಚಲನ ಮೂಡಿಸಿದೆ. ಎರಡನೇ ಬಾರಿ ಕಿಚ್ಚ-ಉಪ್ಪಿ ಕಾಂಬಿನೇಷನ್​​ ಧೂಳೆಬ್ಬಿಸೋಕೆ ಸಜ್ಜಾಗಿದೆ.

ನಿರ್ದೇಶಕ ಆರ್​.ಚಂದ್ರು ಕೆಜಿಎಫ್​ ಚಿತ್ರದ ನಂತ್ರ ಯಾರೂ ಊಹಿಸಿರದ  ರೀತಿಯಲ್ಲಿ ಕಬ್ಜ  ಸಿನಿಮಾ ಮೇಕಿಂಗ್​ ಮಾಡೋ ಪಣ ತೊಟ್ಟಿದ್ರು. ಅದೇ ರೀತಿಯಲ್ಲಿ ಕಂಡು ಕೇಳರಿಯದ ಹಾಗೆ ಕೋಟಿ ಕೋಟಿ ವೆಚ್ಚದಲ್ಲಿ ಬೃಹತ್​ ಸೆಟ್​ ಹಾಕಿ, ಅದ್ಧೂರಿ ಲೊಕೆಷನ್ಸ್​ಗಳಲ್ಲಿ ಚಿತ್ರೀಕರಣ ಮಾಡಿದ್ದಾರೆ. ಹಿಂದಿಯ ಶೋಲೆ, ಕನ್ನಡದ ಗಂಧದ ಗುಡಿ ಸಿನಿಮಾಗಳಲ್ಲಿ ಉಪಯೋಗಿಸಿದ್ದ ಪಿಸ್ತೂಲ್​​ ಬಳಸಲಾಗಿದೆ. ಇದಕ್ಕಾಗಿ ಗನ್​ ಸಂಸ್ಥೆಯೊಂದಿಗೆ ಒಪ್ಪಂದ ಕೂಡ ಮಾಡಿಕೊಂಡಿತ್ತು ಟೀಂ.

ಸದ್ಯ ಶೂಟಿಂಗ್​ ಮುಗಿಸಿರುವ ಚಿತ್ರತಂಡ, ಶುಭ ಮುಹೂರ್ತದೊಂದಿಗೆ ಪೂಜೆ ಸಲ್ಲಿಸಿ ಡಬ್ಬಿಂಗ್​ ಕಾರ್ಯ ಶುರು ಮಾಡಿದೆ. ಕನ್ನಡ, ತಮಿಳು, ತೆಲುಗು, ಹಿಂದಿ, ಒರಿಯಾ, ಮರಾಠಿ, ಮಲಯಾಳಂ ಭಾಷೆಗಳಲ್ಲಿ ಏಕಕಾಲಕ್ಕೆ ಡಬ್ಬಿಂಗ್​ ಮಾಡಿ ದಾಖಲೆ ಬರೆಯಲು ಮುಂದಾಗಿದೆ. ರಿಲೀಸ್​ಗೂ ಮುನ್ನ ಎಲ್ಲರ ಕುತುಹಲ ಕೆರಳಿಸಿರುವ ಕಬ್ಜ ಚಿತ್ರದ ಟೀಸರ್​ ಯಾವಾಗ ಅಂತ ಅಭಿಮಾನಿಗಳು ಹಠ ಹಿಡಿದಿದ್ದಾರೆ. ಅದಷ್ಟು ಬೇಗ ಟೀಸರ್​ ರಿಲೀಸ್​ ಮಾಡಿ ಎಂದು ದುಂಬಾಲು ಬಿದ್ದಿದ್ದಾರೆ.

ಚಿತ್ರದಲ್ಲಿ ಉಪ್ಪಿ, ಕಿಚ್ಚ ಸುದೀಪ್​ ಮಾತ್ರವಲ್ಲದೇ ನಟಿ ಶ್ರಿಯಾ ಸರಣ್​​, ಬಾಲಿವುಡ್​​ನ ನವಾಬ್​  ಶಾ, ತಮಿಳಿನ ಐ ಚಿತ್ರದಲ್ಲಿ ನಟಿಸಿದ್ದ ಬಾಡಿ ಬಿಲ್ಡರ್​ ಕಾಮರಾಜನ್​​, ಟಾಲಿವುಡ್​ ಸೂಪರ್ ಸ್ಟಾರ್​ ಜಗಪತಿ ಬಾಬು, ಪ್ರಮೋದ್​ ಶೆಟ್ಟಿ, ಸುನೀಲ್ ಪುರಾಣಿಕ್​ ಸೇರಿದಂತೆ ಬಹುದೊಡ್ಡ ಕಲಾವಿದರ ದಂಡು ಚಿತ್ರದಲ್ಲಿದೆ.

ಬಹುಕೋಟಿ ವೆಚ್ಚದಲ್ಲಿ ಎಮ್​ಟಿಬಿ ನಾಗರಾಜ್ ಅರ್ಪಿಸ್ತಿರೋ ಈ ಸಿನಿಮಾನ ನಿರ್ದೇಶನದ ಜೊತೆಗೆ ನಿರ್ಮಾಣಕ್ಕೂ ಕೈ ಹಾಕಿದ್ದಾರೆ ಆರ್ ಚಂದ್ರು. ಕೆಜಿಎಫ್​ ಖ್ಯಾತಿಯ ರವಿ ಬಸ್ರೂರು ಮ್ಯೂಸಿಕ್​ ಕಂಪೋಸಿಂಗ್​ ಚಿತ್ರಕ್ಕೆ ಇನ್ನಷ್ಟು ಮೈಲೇಜ್​ ಕೊಡಲಿದೆ. ಎಜೆ ಶೆಟ್ಟಿ ಕ್ಯಾಮೆರಾ ಕಣ್ಣಲ್ಲಿ  ಅಂಡರ್​ವರ್ಲ್ಡ್​​ ರೋಚಕ ಜಗತ್ತು ತೆರೆದುಕೊಳ್ಳಲಿದೆ. ಒಟ್ನಲ್ಲಿ, ಡಬ್ಬಿಂಗ್​ ಶುರುವಾಗಿರೋದ್ರಿಂದ ಸದ್ಯದಲ್ಲೇ ಟೀಸರ್​ನ ಸರ್​ಪ್ರೈಸ್ ಗಿಫ್ಟ್ ಆಗಿ ನೀಡೋ ಮನ್ಸೂಚನೆ ನೀಡಿದೆ.

ರಾಕೇಶ್ ಆರುಂಡಿ, ಫಿಲ್ಮ್​ ಬ್ಯೂರೋ, ಪವರ್​ ಟಿವಿ

RELATED ARTICLES

Related Articles

TRENDING ARTICLES