ಬೆಂಗಳೂರು: ನಮ್ಮನ್ನ ಬಿಜೆಪಿ ಬಿ ಟೀಂ ಅಂತಾ ಹೇಳಿಕೊಂಡು ಹೋದ್ರಲ್ಲಾ ಈಗ ನಮಗೆ ಪಾಠ ಮಾಡಲು ಬರ್ತೀರಾ? ನಿಮ್ಮಿಂದ ಕಲಿತುಕೊಳ್ಳಬೇಕಾ? ಎಂದು ಹೆಚ್ಡಿಕೆ ಸಿದ್ದರಾಮಯ್ಯ ವಿರುದ್ದ ಕಿಡಿಕಾಡಿದ್ದಾರೆ.
ನಗರದಲ್ಲಿಂದು ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಸಿದ್ದರಾಮಯ್ಯನವ್ರಿಗೆ ನಾಚಿಕೆ ಆಗಲ್ವಾ? ಆತ್ಮಸಾಕ್ಷಿ ಅಂದ್ರೆ ಏನು? ವ್ಯಾಪಾರ ಸಂಪರ್ಕಕ್ಕೆ ಹೋಗಿದ್ದೀರಾ? ನಮ್ಮನ್ನ ಬಿಜೆಪಿ ಬಿ ಟೀಂ ಅಂತಾ ಹೇಳಿಕೊಂಡು ಹೋದ್ರಲ್ಲಾ ಈಗ ನಮಗೆ ಪಾಠ ಮಾಡಲು ಬರ್ತೀರಾ? ನಿಮ್ಮಿಂದ ಕಲಿತುಕೊಳ್ಳಬೇಕಾ? ಎಂದುನ ಹೆಚ್ಡಿಕೆ ವಾಗ್ದಾಳಿ ಮಾಡಿದ್ದಾರೆ. ಸಾರ್ವಜನಿಕವಾಗಿ ಯಾವುದೇ ಚರ್ಚೆಗೆ ನಾನು ಸಿದ್ದ. ನಮ್ಮ ಅಭ್ಯರ್ಥಿಗೆ ಸಪೋರ್ಟ್ ಮಾಡಲಿ, ಆಮೇಲೆ ಮಾತುಕತೆ ಅಂತಾ ಡಿಕೆಶಿ ಹೇಳಿದ್ದಾರೆ. ಅಂಥ ಅವಶ್ಯಕತೆ ನನಗೆ ಇಲ್ಲ ಎಂದರು.
ಅದಲ್ಲದೇ, ಕಳೆದ ಚುನಾವಣೆಗಳಲ್ಲಿ ನಮ್ಮ ಎಂಟು ನಾಯಕರನ್ನ ಹೈಜಾಕ್ ಮಾಡಿದ್ರು. ಈಗ ಆತ್ಮ ಸಾಕ್ಷಿ ವಿಚಾರದ ಬಗ್ಗೆ ಮಾತಾಡ್ತಾರೆ. ನನಗೆ ಚೂರಿ ಹಾಕಿ ಹೊರಾಟಗಾಲೂ ಕೋಮುಗಲಭೆಗಳಿಗೆ ಅವಕಾಶ ನೀಡಲಿಲ್ಲ. ಜೆಡಿಎಸ್ ವಿತ್ ಡ್ರಾ ಮಾಡಿ ಬೆಂಬಲ ಕೊಡಿ ಅಂತಾರೆ. ಎಷ್ಟು ಬಾರಿ ನೀವು ನನಗೆ ಬೆಂಬಲ ಕೊಟ್ಟಿದ್ದೀರಿ? ಎಂದು ಸಿದ್ದರಾಮಯ್ಯ ವಿರುದ್ಧ ಹೆಚ್ಡಿಕೆ ವಾಗ್ಬಾಣ ಮಾಡಿದ್ದಾರೆ.
ಇನ್ನು, ಅನ್ ಕಂಡೀಶನಲ್ ಆಗಿ ನಿಮ್ಮನ್ನ ಸಿಎಂ ಮಾಡಿಲ್ವಾ ಅಂತಾರೆ. 123 ರಿಂದ 79 ಕ್ಕೆ ಇಳಿದಾಗ್ಲೇ ನಿಮ್ಮನ್ನ ಜನ ತಿರಸ್ಕಾರ ಮಾಡಿದ್ರು. ಬಿಜೆಪಿಯಿಂದಲೂ ನಮಗೆ ಆಗ ಆಫರ್ ಇತ್ತು. ಯಾವುದೇ ಕಾರಣಕ್ಕೂ ಕೋಮುಶಕ್ತಿಗಳು ಉದ್ಭವ ಆಗಬಾರದು. ನೀವೇ ಸಿಎಂ ಆಗಿ, ನಾನು ಸಿಎಂ ಆಗಲ್ಲ ಅಂತಾ ಸಿದ್ದರಾಮಯ್ಯ ಹೇಳಿದ್ರು. 24 ಮಂತ್ರಿಗಳು ಬೇಕು, ಇಂಥವೇ ಖಾತೆ ಬೇಕು ಅಂತಾ ತೆಗೆದುಕೊಂಡಿದ್ದು ಮತ್ತೊಂದು ಭಾಗ. ಡಿಪಿಆರ್ನ್ನು ಎಫ್ಡಿಎ ಮಟ್ಟಕ್ಕೆ ತಂದು ಇಟ್ರಿ. ನೀವೇ ಆಟ ಆಡಿದ್ರಿ, ಅದನ್ನೆಲ್ಲಾ ನಾನು ಸಹಿಸಿಕೊಂಡು ಬಂದೆ. ರೈತರ ಸಾಲ ಮನ್ನಾ ಮಾಡಲು ದುಡ್ಡು ಹೇಗೆ ಸಂಗ್ರಹಿಸಬೇಕು ಅಂತಾ ಸಿದ್ದರಾಮಯ್ಯ ಅವ್ರಿಗೆ ಪಾಠ ಮಾಡಿದೆ. ಈಗ ಬೆಳಿಗ್ಗೆಯಿಂದ ಸಂಜೆ ತನಕ ಭಜನೆ ಮಾಡ್ತಿದ್ದಾರೆ. ಪಠ್ಯ ಪುಸ್ತಕ ವಿಚಾರವಾಗಿ ಟೋಪಿ ಹಾಕ್ಕೊಂಡು ಕೂತಿದ್ದೀರಲ್ಲಾ? ನೀವು ಸಿಎಂ ಆಗಿ ಒಂದು ಸಮಾಜ ಒಡೆಯಲು ಮುಂದಾದ್ರಿ. ಕೊನೆಗೆ ಏನೇನು ಅನುಭವಿಸಿದ್ರಿ, ಈಗ ಬಸವಕಲ್ಯಾಣದಿಂದ ಪಾದಯಾತ್ರೆಗೆ ಮುಂದಾಗಿದ್ದಾರೆ ಎಂದರು.
ಹೊಸ ಅಧ್ಯಾಯ ಮಾಡಲು ನಿಮ್ಮಲ್ಲಿ ಪ್ರಾಮಾಣಿಕೆ ಇದ್ರೆ. ಚರ್ಚೆಗೆ ಸಿದ್ಧ ಅಂತಾ ಕಾಂಗ್ರೆಸ್ ನಾಯಕರಿಗೆ ಹೇಳಿದ್ದೇನೆ. ಅದು ನನ್ನ ವೀಕ್ನೆಸ್ ಅಂತಾ ಭಾವಿಸೋದು ಬೇಡ. ಪ್ರತೀ ನಿತ್ಯ ಎಲ್ಲರ ಹೇಳಿಕೆಗಳನ್ನ ಗಮನಿಸ್ತಿದ್ದೇನೆ. ನಾವು ಮೊದಲು ಅಭ್ಯರ್ಥಿ ಹಾಕಿದ್ದೇವೆ ನಮಗೆ ಬೆಂಬಲ ಕೊಡಿ ಅಂತಾ ವಿರೋಧ ಪಕ್ಷದ ನಾಯಕರು ಹೇಳ್ತಾರೆ. ನೀವು ಎರಡನೇ ಅಭ್ಯರ್ಥಿ ಹಾಕುವ ಮುಂಚೆಯೇ ನಮ್ಮ ದೇವೇಗೌಡ್ರು ಸೋನಿಯಾಗಾಂಧಿಗೆ ಮನವಿ ಮಾಡಿದ್ರು. ನಿಮ್ಮ ನಿಮ್ಮ ನಾಯಕರೇ ತೀರ್ಮಾನ ಮಾಡಿಕೊಂಡ್ರೆ ಅದು ತೀರ್ಮಾನವಾ? ನಿಮ್ಮ ಹೈಕಮಾಂಡ್ ಆಗಲೀ, ರಾಜ್ಯದ ಕಾಂಗ್ರೆಸ್ ನಾಯಕರಾಗಲೀ ನಮ್ಮ ಜೊತೆ ಚರ್ಚೆ ಮಾಡಿದ್ರಾ? ನೀವೇ ತೀರ್ಮಾನ ಮಾಡಿದ್ರೆ ನಾವು ನಿಮ್ಮ ಅಡಿಯಾಳುಗಳಾ? ನುಡಿಮುತ್ತುಗಳ ಮೂಲಕವೇ ನಿಮ್ಮ ಮನವೊಲಿಕೆ ಪ್ರಯತ್ನ ಮಾಡ್ತಿದ್ದೇನೆ ಎಂದು ಹೇಳಿದರು.