Thursday, December 19, 2024

ದೂರುದಾರನಿಗೆ ಕಾರ್ ಕೊಡದೇ ಸುತ್ತಾಟ ನಡೆಸುತ್ತಿರುವ ಪೊಲೀಸರು..!

ದಾವಣಿಗೆರೆ: ಕಾರು ತೆಗೆದುಕೊಂಡು ಹೋದ ಸ್ನೇಹಿತ ಕಾರು ಕೊಟ್ಟಿಲ್ಲ ಎಂದು ದೂರು ನೀಡಿದ್ದಾನೆ ಆದರೆ ಕಾರ್ ಸಿಕ್ಕಿದೆ ಎಂದು ದಾವಣಗೆರೆ ಪೊಲೀಸರು ಬಿಟ್ಟಿ ಶೋಕಿ ಮಾಡುತ್ತಿದ್ದಾರೆ.

ಸ್ನೇಹಿತ ಪರಮೇಶ್ ಕಾರ್ ತೆಗೆದುಕೊಂಡು ಹೋಗಿ ಕೊಡುತ್ತಿಲ್ಲ ಎಂದು ವಿದ್ಯಾನಗರ ಠಾಣೆಯಲ್ಲಿ ಗಿರೀಶ್ ಎಂಬಾತನಿಂದ ದೂರು ನೀಡಿದ್ದಾರೆ, ಹಾಗೆನೇ ಆ ಕಾರು ಹದಡಿ ಪೊಲೀಸ್ ಠಾಣೆ ಪಿಎಸ್ ಐ ರೂಪ, ಪಿಸಿ ಮಂಜು ಎಂಬುವವರಿಗೆ ಕಾರ್ ಸಿಕ್ಕಿದೆ. ಆದರೆ ಅನುಮಾನಗೊಂಡು ಕಾರ್ ಬೆನ್ನು ಹತ್ತಿದ್ದ ಕಾರ್ ಓನರ್ ಗಿರೀಶ್ ಮೇ 31 ರಂದು ಅದೇ ಕಾರಿನಲ್ಲಿ ವಿದ್ಯಾನಗರದ ಕಾಫಿ ಡೇ ಗೆ ಪೊಲೀಸರು ಬಂದಿದ್ದಾರೆ. ಈ ವೇಳೆ ಅಲ್ಲೇ ಇದ್ದ ಕಾರ್ ಮಾಲೀಕ ಗೀರಿಶ್ ವಿಡಿಯೋ ಮಾಡಿಕೊಂಡಿದ್ದಾರೆ. ಸರ್ ಕಾರ್ ನನ್ನದು ದೂರು ನೀಡಿದ್ದೇನೆ, ಕೊಡಿ ಎಂದರು ನಾಳೆ ಕೊಡುತ್ತೇವೆ ಎಂದು ಪೊಲೀಸರು ಹಲ್ಲೆ ಮಾಡಿದ್ದಾರೆ.

ಪೊಲೀಸರಿಗೆ ಆ ಕಾರ್ ಸಿಕ್ಕಿದ್ದರು ಕೊಡದೇ ಸತಾಯಿಸುತ್ತಿರುವ ಪೊಲೀಸರು. ಠಾಣೆಯಲ್ಲಿ ಕಾರ್ ನಿಲ್ಲಿಸದೇ ನಗರದ ತುಂಬೆಲ್ಲಾ ಚಾಲನೆ ಮಾಡುತ್ತಿದ್ದಾರೆ. ಕಾರ್ ಕೇಳಿದರೆ ನಾಳೆ ಕೊಡುತ್ತೇವೆ ಎಂದು ಕಾರ್ ಮಾಲೀಕನಿಗೆ ದಮ್ಕಿ ಮಾಡಿದ್ದಾರೆ. ವಿದ್ಯಾನಗರ ಪೊಲೀಸ್ ಠಾಣೆಗೆ ಮಾಹಿತಿ ಇದ್ದರು ಸುಮ್ಮನೆ ಕೂತ ಪೊಲೀಸರು. ನನಗೆ ನನ್ನ ಕಾರುಗಳನ್ನು ವಾಪಸ್ ಕೊಡಿಸಿ ಎಂದು ಕಾರ್ ಮಾಲಿಕ ಗಿರೀಶ್ ಅಳಲನ್ನು ತೋಡಿಕೊಂಡಿದ್ದಾರೆ.

RELATED ARTICLES

Related Articles

TRENDING ARTICLES