ಬೆಂಗಳೂರು : ರಾಜ್ಯದಲ್ಲಿ ಕೊರೋನಾ ಆತಂಕ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದೆ. ಜೂನ್ ಅಂತ್ಯದಲ್ಲಿ ನಾಲ್ಕನೇ ಅಲೆ ಎಂಟ್ರಿ ಆಗಿದೆ ಎಂದು ತಜ್ಞರು ಹೇಳುತ್ತಿದ್ದಾರೆ.
ದಿನೇ ದಿನೇ ಆತಂಕ ಮೂಡಿಸುತ್ತಿದೆ ಸೋಂಕಿನ ಪ್ರಮಾಣ. ದಿನದಿನಕ್ಕೂ ರಾಜ್ಯದಲ್ಲಿ ಸೋಂಕಿತರ ಪ್ರಮಾಣ ಏರುಗತಿಯತ್ತ ಸಾಗುತ್ತಿದೆ. ಜೂನ್ ಅಂತ್ಯದಲ್ಲಿ ನಾಲ್ಕನೇ ಅಲೆ ಎಂಟ್ರಿ ಎಂದಿರುವ ತಜ್ಞರು. ಕಳೆದ ಒಂದು ವಾರದಿಂದ ಬೆಂಗಳೂರು ಸೇರಿ ಏಳು ಜಿಲ್ಲೆಗಳಲ್ಲಿ ಸೋಂಕು ಪ್ರಮಾಣ ಏರಿಕೆ ಕಂಡುಬಂದಿದೆ.
ಅದುವಲ್ಲದೇ, ಸೋಂಕಿತನ ಪ್ರಮಾಣದಲ್ಲಿ ಬೆಂಗಳೂರಿನಲ್ಲಿ ಅತಿ ಹೆಚ್ಚು ಪ್ರಕರಣ ದಾಖಲಾಗಿದ್ದು, ಕಳೆದೊಂದು ವಾರದಲ್ಲಿ 2.003 ಹೊಸ ಪ್ರಕರಣ ದಾಖಲಾಗಿದೆ. ಬೆಂಗಳೂರು, ಮೈಸೂರು, ಉಡುಪಿ, ದಕ್ಷಿಣ ಕನ್ನಡ ಚಿಕ್ಕಮಗಳೂರು, ಶಿವಮೊಗ್ಗ, ಹಾಗೂ ಬಳ್ಳಾರಿಯಲ್ಲಿ ಸೋಂಕಿನ ಪ್ರಮಾಣ ಏರಿಕೆಯಾಗಿದ್ದು, ರಾಜ್ಯದ ಪಾಲಿಗೆ ಎರಡು ವಾರಗಳು ನಿರ್ಣಾಯಕವಾಗಿದೆ.
ಇನ್ನು, ಸೋಂಕಿತ ಪ್ರಮಾಣ ಹೆಚ್ಚಳವಾದ್ರೆ ಮತ್ತೆ ಕಠಿಣ ರೂಲ್ಸ್ ಜಾರಿಯಾಗಲಿದ್ದು, ಈಗಾಗಲೇ ತಾಂತ್ರಿಕ ಸಲಹಾ ಸಮಿತಿ ಕಠಿಣ ಕ್ರಮಕ್ಕೆ ಸಲಹೆಯನ್ನು ನೀಡಿದ್ದಾರೆ. ಜೂನ್ 1 ರಿಂದ ಏರುಗತಿಯಲ್ಲಿ ಸಾಗ್ತಿರೋ ಕೊರೊನಾ ಕಟ್ಟಿಹಾಕಲು ಕ್ರಮ ಅಗತ್ಯ ಎಂದು ತಾಂತ್ರಿಕ ಸಲಹಾ ಸಮಿತಿ ಸೂಚನೆಯನ್ನು ನೀಡಿದ್ದಾರೆ.