Wednesday, January 22, 2025

ಶ್ವಾನ ಗುಂಪನ್ನ ಎದುರಿಸಿದ ಒಂಟಿ ಬೆಕ್ಕು

ಧೈರ್ಯವೊಂದಿದ್ದರೆ ಎಂತಹ ಕಠಿಣ ಪರಿಸ್ಥಿತಿಯನ್ನೂ ಎದುರಿಸಬಹುದು. ಇದಕ್ಕೆ ಬೇಕಾದಷ್ಟು ಸಾಕ್ಷಿಗಳಿವೆ. ಇಂತಹ ದೃಶ್ಯಗಳು ಬದುಕಿಗೆ ಸ್ಫೂರ್ತಿ ಕೂಡಾ ಹೌದು. ಸದ್ಯ ಅಂತಹದ್ದೇ ಧೈರ್ಯಶಾಲಿಯ ವಿಡಿಯೋವೊಂದು ವೈರಲ್ ಆಗುತ್ತಿದೆ.

ಸುಮಾರು ಹತ್ತರಿಂದ ಹದಿನೈದು ಶ್ವಾನಗಳು ಇರುವ ದೊಡ್ಡ ಗುಂಪು ಮತ್ತು ಎದುರಿಗೆ ಒಂಟಿ ಬೆಕ್ಕು ಇರುವ ದೃಶ್ಯದ ಮೂಲಕ 15 ಸೆಕೆಂಡುಗಳ ಈ ಕ್ಲಿಪ್ ಶುರುವಾಗುತ್ತದೆ.

ಒಟ್ಟಾಗಿ ಬಂದರೆ ಬೆಕ್ಕನ್ನು ಹೆದರಿಸಬಹುದು ಎಂಬ ಹುಮ್ಮಸ್ಸಿನಲ್ಲಿ ಈ ಶ್ವಾನಗಳು ಇದ್ದವು. ಆದರೆ, ಇವುಗಳ ಆಲೋಚನೆಯನ್ನು ಈ ಧೈರ್ಯಶಾಲಿ ಬೆಕ್ಕು ತಲೆಕೆಳಗೆ ಮಾಡಿತ್ತು. ಯಾಕೆಂದರೆ, ತನ್ನೆದುರು ಗಟ್ಟಿ ಧ್ವನಿಯಲ್ಲಿ ಶ್ವಾನಗಳು ಬೊಗಳುತ್ತಿದ್ದರೂ ಬೆಕ್ಕು ಅಲ್ಲಿಂದ ಕದಲಿಲ್ಲ. ಹೋರಾಟದಿಂದ ಹಿಂದೆ ಸರಿದಿರಲಿಲ್ಲ. ಬದಲಾಗಿ, ತಾನೇ ಮುನ್ನುಗ್ಗಿ ಹೋಗುತ್ತಿತ್ತು. ಬೆಕ್ಕಿನ ಧೈರ್ಯ ಎಷ್ಟಿತ್ತು ಎಂದರೆ ಬೆಕ್ಕು ಮುನ್ನುಗ್ಗುತ್ತಿದ್ದಂತೆಯೇ ಶ್ವಾನಗಳು ಹಿಂದಕ್ಕೆ ಕಾಲಿಡುತ್ತಿದ್ದವು…! ಅಲ್ಲದೇ ಅವುಗಳು ತುಂಬಾ ಸುಂದರ ಮತ್ತು ಧೈರ್ಯಶಾಲಿ’ ಎಂಬ ಕ್ಯಾಪ್ಶನ್‌ನೊಂದಿಗೆ ಈ ವಿಡಿಯೋವನ್ನು ಹಂಚಿಕೊಳ್ಳಲಾಗಿದೆ.

RELATED ARTICLES

Related Articles

TRENDING ARTICLES