Wednesday, January 22, 2025

ಚಲನಚಿತ್ರ ನಾಯಕನಟ ರಾಕಿ ಭಾಯ್ ಯಶ್ ಹೆಸರಿಗೆ ಮತ್ತೊಂದು ಗರಿ

ಶಿವಮೊಗ್ಗ: ಯಶೋಮಾರ್ಗದ ಮೂಲಕ ಶಿವಮೊಗ್ಗ ಜಿಲ್ಲೆಯ ಐತಿಹಾಸಿಕ ಪುಷ್ಕರಣಿಗೆ ರಾಕಿಂಗ್ ಸ್ಟಾರ್ ಹೊಸ ರೂಪವನ್ನು ನೀಡಿದ್ದಾರೆ.

ಈ ಪುಷ್ಕರಣಿಯ ಹಿಂದಿನ ಇತಿಹಾಸ ಹಾಗೂ ಪ್ರೇಮ ಕಥೆ ಕೇಳಿ ಪುನಶ್ಚೇತನಕ್ಕೆ ಮುಂದಾಗಿದ್ದ ನಟ ಯಶ್‌. 76.8 ಮೀಟರ್‌ ಅಗಲ ಹಾಗೂ 77.8 ಮೀಟರ್‌ ಉದ್ದವಿದೆ. ಜಂಬಿಟ್ಟಿಗೆ ಕಲ್ಲುಗಳನ್ನೇ ಬಳಸಿಕೊಂಡು ಈ ಕೊಳವನ್ನು ನಿರ್ಮಿಸಲಾಗಿತ್ತು. ಆದರೆ, ಇತಿಹಾಸದ ಪ್ರಕಾರ ಕೆಳದಿ ಅರಸ ವೆಂಕಟಪ್ಪ ಚಂಪಕಾ ಎನ್ನುವ ಹುಡುಗಿಯ ಪ್ರೀತಿಯಲ್ಲಿದ್ದ. ಆದರೆ ಚಂಪಕಾ ಮೀನುಗಾರರ ಸಮುದಾಯಕ್ಕೆ ಸೇರಿದ್ದ ಕಾರಣ ಸಂಬಂಧ ಮುರಿದು ಬಿದ್ದಿತ್ತು. ಮನನೊಂದ ಚಂಪಕಾ ಆತ್ಮಹತ್ಯೆ ಮಾಡಿಕೊಂಡಿದ್ದಳು. ಚಂಪಕಳಾ ನೆನಪಿಗಾಗಿ ವೆಂಕಟಪ್ಪ ಚಂಪಕ ಸರಸಿ ಎಂಬ ಕಲ್ಯಾಣಿಯನ್ನು ಕಟ್ಟಿಸಿದ್ದ ಎನ್ನಲಾಗುತ್ತದೆ.

ಅದಲ್ಲದೇ, ಮೊದಲು ಅನೈತಿಕ ಚಟುವಟಿಕೆಗಳ ತಾಣವಾಗಿತ್ತು ಈ ಕೊಳ. ಆದರೆ, 2021ರ ನವೆಂಬರ್‌ ತಿಂಗಳಲ್ಲಿ ಈ ಪುಷ್ಕರಣಿಯ ಪುನಶ್ಚೇತನ ಕೆಲಸ ಶುರುವಾಗಿತ್ತು. ಸ್ಥಳೀಯವಾಗಿ 30-40 ಜನರನ್ನು ಬಳಸಿಕೊಂಡು ಈ ಪುಷ್ಕರಣಿಯನ್ನು ಯಶೋಮಾರ್ಗವು ಪುನಶ್ಚೇತನಗೊಳ್ಳುತಿತ್ತು. ರಾಕಿಂಗ್ ಸ್ಟಾರ್’ ಯಶ್‌ ನೇತೃತ್ವದ ಯಶೋಮಾರ್ಗ ಚಾರಿಟಿ ಟ್ರಸ್ಟ್‌ ನಿಂದ ಈ ಕಾರ್ಯನಿರ್ವಹಿಸಿದ್ದು, ಯಶೋಮಾರ್ಗ ಮೂಲಕ ಜನಪರ ಕಾರ್ಯಗಳು ನಡೆಯುತ್ತಿವೆ.

ಇನ್ನು, ಯಶೋಮಾರ್ಗದಿಂದ ಹೊಸ ರೂಪ ಪಡೆದ ಐತಿಹಾಸಿಕ ಚಂಪಕ ಸರಸ್ಸು ಪುಷ್ಕರಣಿ. ಕೆಲ ದಿನಗಳಿಂದ ಪುನಶ್ಚೇತನಗೊಳಿಸುವ ಕೆಲಸಕ್ಕೆ ಕೈ ಹಾಕಿದ್ದ ಯಶೋಮಾರ್ಗ ಸಂಸ್ಥೆ. ಜೀರ್ಣೋದ್ಧಾರ ಕಾರ್ಯ ಸಂಪೂರ್ಣಗೊಂಡಿದ್ದು, ‘ಚಂಪಕ ಸರಸ್ಸು’ ಪುಷ್ಕರಣಿ ಈಗ ಲೋಕಾರ್ಪಣೆಗೊಂಡಿದೆ. 400 ವರ್ಷಗಳ ಇತಿಹಾಸವಿರುವ ಈ ಐತಿಹಾಸಿಕ ಪುಷ್ಕರಣಿ ಯಶೋಮಾರ್ಗದ ಮೂಲಕ ಆರೇ ತಿಂಗಳಲ್ಲಿ ಪುನಶ್ಚೇತನಗೊಳ್ಳುತ್ತಿದ್ದು, ನಟ ಯಶ್ ಕಾರ್ಯಕ್ಕೆ ಎಲ್ಲೆಡೆ ಅಭಿನಂದನೆ ಸಲ್ಲುತ್ತಿದೆ.

RELATED ARTICLES

Related Articles

TRENDING ARTICLES