Tuesday, December 24, 2024

ಕೋಳಿ ಸಾಂಬಾರ್ ಮಾಡಿಲ್ಲ ಎಂದು ಪತ್ನಿ ಕೊಲೆ

ದಾವಣಗೆರೆ : ಕಿರಾತಕ ಪತಿ ಕೋಳಿ ಸಾಂಬಾರ್ ಮಾಡಿಲ್ಲ ಎಂದು ಪತ್ನಿಯನ್ನು ಕೊಲೆ ಮಾಡಿರುವ ಘಟನೆ ದಾವಣಗೆರೆ ಜಿಲ್ಲೆಯ ಹರಿಹರ ತಾಲೂಕಿನ ಬನ್ನಿಕೋಡು ಗ್ರಾಮದಲ್ಲಿ ನಡೆದಿದೆ.

ಶೀಲಾ(29) ಕೊಲೆಯಾದ ಮಹಿಳೆ. ಕೆಂಚಪ್ಪ ಕೊಲೆ ಮಾಡಿದ ಕೀಚಕ ಪತಿ. 9 ವರ್ಷಗಳ ಹಿಂದೆ ಲವ್ ಮಾಡಿ ಮದುವೆಯಾಗಿದ್ದ ದಂಪತಿಗಳು. ನಿತ್ಯ ಕುಡಿದು ಬಂದು ಗಲಾಟೆ ಮಾಡುತ್ತಿದ್ದರು.

ನಿನ್ನೆ ಚಿಕನ್ ತಂದು ಸಾಂಬಾರ್ ಮಾಡಿಕೊಡುವಂತೆ ಗಲಾಟೆ ಮಾಡಿದ್ದಾನೆ. ಈ ವೇಳೆ ಚಾಕುವಿನಿಂದ ಹಿರಿದು ಕೊಲೆಗೈದು,  ಚಾಕು ಹಿಡಿದು ಸೀದಾ ಪೊಲೀಸ್ ಸ್ಟೇಷನ್​​ಗೆ ಹೋಗಿ ಶರಣಾಗಿದ್ದಾನೆ.

ಸದ್ಯ ಈ ಪ್ರಕರಣ ಹರಿಹರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.

RELATED ARTICLES

Related Articles

TRENDING ARTICLES