Monday, December 23, 2024

ಅಲ್‌ಖೈದಾ ಉಗ್ರಗಾಮಿ ಸಂಘಟನೆಯಿಂದ ಭಾರತದ ಮೇಲೆ ಯುದ್ಧ ಬೆದರಿಕೆ

ನವದೆಹಲಿ: ಪ್ರವಾದಿ ಮಹಮ್ಮದರನ್ನು ಕುರಿತ ಅವಹೇಳನಕಾರಿ ಹೇಳಿಕೆಗೆ ಪ್ರತೀಕಾರವಾಗಿ ಅಲ್‌ಖೈದಾ ಉಗ್ರಗಾಮಿ ಸಂಘಟನೆಯಿಂದ ಭಾರತದ ಮೇಲೆ ಯುದ್ಧದ ಬೆದರಿಕೆ ಹಾಗೂ ಮುಂಬೈಯಲ್ಲಿ ಆತ್ಮಾಹುತಿ ಬಾಂಬ್ ದಾಳಿ ನಡೆಸುವುದಾಗಿ ‘ಅಲ್ ಕೈದಾ’ದ ಭಾರತೀಯ ಉಪಖಂಡ ಘಟಕ ಎಚ್ಚರಿಕೆ ನೀಡಿದೆ.

ದೆಹಲಿ, ಮುಂಬೈ, ಉತ್ತರ ಪ್ರದೇಶ ಹಾಗೂ ಗುಜರಾತ್‌ಗಳಲ್ಲಿ ಕೇಸರಿ ಭಯೋತ್ಪಾದಕರು ತಮ್ಮ ಅಂತ್ಯವನ್ನು ಎದುರು ನೋಡಲಿದ್ದಾರೆ. ಅವರು ತಮ್ಮ ಮನೆಗಳಲ್ಲಿ ಅಥವಾ ತಮ್ಮ ಭದ್ರಕೋಟೆಗಳಲ್ಲಿ ಆಶ್ರಯ ಪಡೆಯಬಾರದು’ ಎಂದು ಬೆದರಿಕೆ ಪತ್ರದಲ್ಲಿ ಅಲ್ ಕೈದಾ ಉಲ್ಲೇಖಿಸಿದೆ.

ಜಗತ್ತಿನಾದ್ಯಂತ ಮುಸ್ಲಿಮರ ಹೃದಯಗಳು ಒಡೆದುಹೋಗಿವೆ. ಪ್ರತೀಕಾರದ ಭಾವನೆಗಳಿಂದ ತುಂಬಿ ಹೋಗಿವೆ’ ಎಂದು ಹೇಳಿದ್ದಾರೆ.

ನೂಪುರ್ ಶರ್ಮಾ ಹೇಳಿಕೆಯನ್ನು ಇಂಡೊನೇಷ್ಯಾ, ಸೌದಿ ಅರೇಬಿಯಾ, ಮಾಲ್ಡೀವ್ಸ್‌, ಅರಬ್‌ ಸಂಯುಕ್ತ ಸಂಸ್ಥಾನ, ಜೋರ್ಡನ್‌, ಬಹರೈನ್‌, ಒಮಾನ್‌, ಪಾಕಿಸ್ತಾನ ಮತ್ತು ಅಫ್ಗಾನಿಸ್ತಾನ ಭಾನುವಾರವೇ ಖಂಡಿಸಿದ್ದವು. ಇದೀಗ ಇರಾಕ್‌ ಮತ್ತು ಲಿಬಿಯಾ ಕೂಡ ಹೇಳಿಕೆಯನ್ನು ಖಂಡಿಸಿವೆ.

ಅಲ್ ಕೈದಾ ಬೆದರಿಕೆ ಪತ್ರದ ಬೆನ್ನಲ್ಲೇ ದೇಶಾದ್ಯಂತ ವ್ಯಾಪಕವಾಗಿ ಭದ್ರತಾ ಸಂಸ್ಥೆಗಳು ಕಟ್ಟೆಚ್ಚರ ವಹಿಸಿವೆ.

RELATED ARTICLES

Related Articles

TRENDING ARTICLES