Wednesday, January 22, 2025

ಇಂದು ವಿಶ್ವ ಬ್ರೈನ್​ ಟ್ಯೂಮರ್‌​ ಡೇ

ವಿಶ್ವ ಬ್ರೈನ್‌ ಟ್ಯೂಮರ್‌ ದಿನಾಚರಣೆಯ ಅಂಗವಾಗಿ ಮಾಹಿತಿಯನ್ನು ನೀಡುವ ಕಾರ್ಯಕ್ರಮದಲ್ಲಿ ಆಕಸ್ಮಿಕವಾಗಿ ಬಂದ ರೋಗಿಗಳು ವೈದ್ಯರನ್ನ ಅಭಿನಂದಿಸಿದರು.

ಅತ್ಯಂತ ಕ್ಲಿಷ್ಟಕರ ಶಸ್ತ್ರಚಿಕಿತ್ಸೆಯ ಮೂಲಕ ಬ್ರೈನ್‌ ಟ್ಯೂಮರ್‌ ತಗೆದು ಪ್ರಾಣ ಉಳಿಸಿದ ವೈದ್ಯರುಗಳಿಗೆ 70 ವರ್ಷದ ರೋಗಿಯೊಬ್ಬರು ಹೃದಯಪೂರ್ವಕ ಅಭಿನಂದನೆ ಸಲ್ಲಿಸಿದ ಘಟನೆಗೆ ಇಂದು ಜಯನಗರದ ಯುನೈಟೆಡ್‌ ಆಸ್ಪತ್ರೆ ಸಾಕ್ಷಿಯಾಯಿತು. ಜೂನ್‌ 8 ವಿಶ್ವ ಬ್ರೈನ್‌ ಟ್ಯೂಮರ್‌ ದಿನಾಚರಣೆಯ ಹಿಂದಿನ ದಿನ ಇಂತಹದ್ದೊಂದು ಕಾರ್ಯಕ್ರಮ ನಡೆದಿದ್ದು ವಿಶೇಷ. ಒಂದು ವರ್ಷದ ಹಿಂದೆ ಪ್ರಾರಂಭವಾಗಿರುವ ಜಯನಗರದ ಯುನೈಟೆಡ್‌ ಆಸ್ಪತ್ರೆಯಲ್ಲಿ ಅತ್ಯಾಧುನಿಕ ಬ್ರೈನ್‌ ಟ್ಯೂಮರ್‌ ಶಸ್ತ್ರಚಿಕಿತ್ಸಾ ಸೌಲಭ್ಯಗಳನ್ನು ಅಳವಡಿಸಿಕೊಳ್ಳಲಾಗಿದೆ.

ವಿದೇಶದಿಂದ ತರಿಸಲಾದ ಡೆಡಿಕೇಟೆಡ್‌ ಆಪರೇಟಿಂಗ್‌ ನ್ಯೂರೋ ಮೈಕ್ರೋಸ್ಕೋಪಿ, ಲ್ಯಾಪ್ರೋಸ್ಕೋಪಿ ಟವರ್‌ಗಳನ್ನು ಹೊಂದಿದೆ. ಈ ಸೌಲಭ್ಯಗಳನ್ನು ಬಳಸಿಕೊಂಡು ಕೆಲವು ದಿನಗಳ ಹಿಂದೆ ಜಯನಗರದ ಯುನೈಟೆಡ್‌ ಆಸ್ಪತ್ರೆಯ ನುರಿತ ನ್ಯೂರೋ ಸರ್ಜನ್‌ಗಳು ಅತ್ಯಂತ ಕ್ಲಿಷ್ಟಕರ ಶಸ್ತ್ರಚಿಕಿತ್ಸೆ ಮೂಲಕ ಬ್ರೈನ್‌ ಟ್ಯೂಮರ್‌ ತೆಗೆದು ಹಾಕಿ 70 ವರ್ಷದ ರೋಗಿಯ ಜೀವವನ್ನು ಉಳಿಸಿದ್ದಾರೆ.

RELATED ARTICLES

Related Articles

TRENDING ARTICLES