Wednesday, January 22, 2025

ನಿಖಿಲ್​ ಕುಮಾರಸ್ವಾಮಿ ಪುತ್ರನ ನಾಮಕರಣ

ಬೆಂಗಳೂರು: ನಿಖಿಲ್ ಕುಮಾರಸ್ವಾಮಿ ಪುತ್ರನ ನಾಮಕರಣ ಕಾರ್ಯಕ್ರಮ ಇಂದು ವೆಂಕಟೇಶ್ವರ ದೇವಸ್ಥಾನದಲ್ಲಿ ಶಾಸ್ತ್ರೋಕ್ತವಾಗಿ ನಡೆಯಿತು.

ಜೆಪಿ ನಗರದ ವೆಂಕಟೇಶ್ವರ ದೇವಸ್ಧಾನದಲ್ಲಿ ಶಾಸ್ತ್ರೋಕ್ತವಾಗಿ ನಾಮಕರಣ ಶಾಸ್ತ್ರ ಜರಗುತ್ತಿದೆ. 10:30 ರಿಂದ 12:20ರವರೆಗೂ ನಡೆಯುವ ಶುಭ ಲಗ್ನದಲ್ಲಿ ನಾಮಕರಣ ಕಾರ್ಯಕ್ರಮ ನಡೆಯುತ್ತಿದೆ. ಪ್ರಪೌತ್ರ ಜನನ ಶಾಂತಿ, ನಾಮಕರಣ, ಕನಕಾಭಿಷೇಕ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.

9 ತಿಂಗಳು ತುಂಬಿರುವ ಹಿನ್ನಲೆಯಲ್ಲಿ ನಿಖಿಲ್ ಪುತ್ರನಿಗೆ ಆವ್ಯನ್ ದೇವ್ ಎಂದು ಹೆಸರಿಡಲು ಕುಟುಂಬಸ್ಥರು ನಿರ್ಣಯಿಸಿದ್ದಾರೆ. ನಾಮಕರಣಕ್ಕೆ ಕುಟುಂಬಸ್ಥರಿಗೆ ಮಾತ್ರ ಅವಕಾಶವಿದ್ದು, ವಿವಿಧ ಹೂವುಗಳಿಂದ ಬೆಳ್ಳಿ ತೊಟ್ಟಿಲನ್ನು ಸಿಂಗರಿಸಲಾಗಿದೆ.

RELATED ARTICLES

Related Articles

TRENDING ARTICLES