Tuesday, December 24, 2024

ಅನ್ಯ ಜಾತಿಯ ಯುವಕನನ್ನು ಪ್ರೀತಿಸಿದಕ್ಕೆ ಹೆತ್ತವರಿಂದಲೇ ಅಪ್ರಾಪ್ತ ಮಗಳ ಕೊಲೆ ?

ಮೈಸೂರು: ಅನ್ಯ ಜಾತಿಯ ಯುವಕನನ್ನು ಪ್ರೀತಿಸಿದಕ್ಕೆ ಹೆತ್ತವರಿಂದಲೇ ಅಪ್ರಾಪ್ತ ಮಗಳನ್ನು ಕೊಲೆ ಮಾಡಿದ ಘಟನೆ ಪಿರಿಯಾಪಟ್ಟಣ ತಾಲ್ಲೂಕಿನಲ್ಲಿ ನಡೆದಿದೆ.

ದ್ವಿತೀಯ ಪಿಯು ವಿಧ್ಯಾರ್ಥಿನಿ 17 ಕೊಲೆಯಾದ ದುರ್ದೈವಿ. ಪಕ್ಕದ ಗ್ರಾಮದ ಯುವಕನನ್ನ ಪ್ರೀತಿಸುತ್ತಿದ್ದಳು. ಇವರಿಬ್ಬರ ಪ್ರೀತಿಗೆ ಯುವತಿ ಪೋಷಕರು ವಿರೋಧ ವ್ಯಲ್ತಪಡಿಸುತ್ತಿದ್ದು, ವಿರೋಧದ ನಡುವೆಯೂ ಪ್ರೇಮಿಗಳು ಮದುವೆಯಾಗಲು ನಿರ್ಧರಿಸಿದ್ದಾರೆ.

ಅದಲ್ಲದೇ, ತನ್ನ ಪ್ರಿಯಕರನಿಗಾಗಿ ಮನೆ ಬಿಟ್ಟಿದ್ದ ಯುವತಿ ಇದೇ ವಿಚಾರ ಪೊಲೀಸ್ ಠಾಣೆ ಮೆಟ್ಟಲೇರಿತ್ತು. ಪೊಲೀಸರ ಮುಂದೆ ಮನೆಗೆ ಹೋಗುವುದಿಲ್ಲ ಎಂದು ಪಟ್ಟು ಹಿಡಿದಿದ್ದು, ಯುವತಿಯನ್ನ ಬಾಲಮಂದಿರದ ವಶಕ್ಕೆ ನೀಡಲಾಗಿತ್ತು. ಯುವತಿ ಮೃತದೇಹ ಜಮೀನಿನಲ್ಲಿ ಪತ್ತೆಯಾಗಿದ್ದು, ತಮಗೆ ಅವಮಾನ ಮಾಡಿದಕ್ಕೆ ಕೊಲೆ ಮಾಡಿದ್ದಾಗಿ ಪೊಲೀಸರಿಗೆ ಪೋಷಕರು ವಿಷಯವನ್ನು ತಿಳಿಸಿದ್ದಾರೆ. ಹಾಗೆನೇ ಪಿರಿಯಾಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

RELATED ARTICLES

Related Articles

TRENDING ARTICLES