Monday, January 20, 2025

ಒಂದೇ ಚಿತ್ರದಲ್ಲಿ ರಜಿನಿ- ಐಶು.. ಇದು ರೋಬೋ 3 ಅಲ್ಲ..!

ಸ್ಟೈಲ್​ ಕಿಂಗ್​​​, ಸೂಪರ್ ಸ್ಟಾರ್​​ ರಜನೀಕಾಂತ್​ ಸಿನಿಮಾ ಸೆಟ್ಟೇರ್ತಿದ್ದ  ಹಾಗೆ  ಕಾಲಿವುಡ್​ ಟು ಹಾಲಿವುಡ್​ ಹೊಸ ಸಂಚಲನ ಶುರುವಾಗುತ್ತೆ. ಇನ್ನೂ ಹಿಟ್ ಪೇರ್​ ರಜನಿಕಾಂತ್​, ಐಶ್ವರ್ಯಾ ರೈ ಒಟ್ಟಿಗೆ ಸಿನಿಮಾ ಮಾಡಿದ್ರೆ ಕೇಳಬೇಕಾ. ರೋಬೋ ಚಿತ್ರದ ಮೂಲಕ ಹೊಸ ಇತಿಹಾಸ ಬರೆದ ಈ ಜೋಡಿ ಮತ್ತೆ ಡ್ಯೂಯೆಟ್​ ಆಡೋಕೆ ತಯಾರಾಗಿದ್ದಾರೆ. ಇದು ರೋಬೋ-3 ಸಿನಿಮಾ ಅಂತಾ ಕನ್ಫ್ಯೂಸ್​ ಆಗ್ತಾ ಇದೆಯಾ..?

  • ಒಂದೇ ಚಿತ್ರದಲ್ಲಿ ರಜಿನಿ- ಐಶು.. ಇದು ರೋಬೋ 3 ಅಲ್ಲ..!
  • ಬಚ್ಚನ್​ ಸೊಸೆಯ ಜೊತೆ ಮತ್ತೊಮ್ಮೆ ತಲೈವಾ ಮಿಂಚಿಂಗ್
  • ರಜಿನಿ 169ನೇ ಚಿತ್ರಕ್ಕೆ ‘ಬೀಸ್ಟ್’​ ನೆಲ್ಸನ್​ ಆ್ಯಕ್ಷನ್​ ಕಟ್​​..!
  • ಕಾರಣ ಇಲ್ಲದೆ ಸಿನಿಮಾ ಓಕೆ ಮಾಡಿಲ್ಲ ಐಶ್ವರ್ಯಾ

ರಜನೀಕಾಂತ್​ ಹೀರೋ ಆಗೋದಾದ್ರೆ, ಟೀನೇಜ್​ ಹುಡುಗೀರು ಕೂಡ ಜೋಡಿಯಾಗಿ ಆ್ಯಕ್ಟ್​ ಮಾಡೋಕೆ ತುದಿಗಾಲಲ್ಲಿ ಕಾಯ್ತಾರೆ. ಕಾಲಿವುಡ್​ ತಲೈವಾ ಈ ವಯಸ್ಸಲ್ಲೂ ಈ ಪಾಟಿ ಬ್ರಾಂಡ್​ ಉಳಿಸಿಕೊಂಡು ಬಂದಿರೋದು ಅಚ್ಚರಿಯೇ ಸರಿ. ರಜಿನಿ ತೆರೆಯ ಮೇಲೆ ನಡೆದು ಬರ್ತಿದ್ರೆ, ಸೀಟಲ್ಲಿ ಕೂತ ಪ್ರೇಕ್ಷಕರ ಮೈ ರೋಮಾಂಚನವಾಗುತ್ತೆ. ಬಾಯಲ್ಲಿ ಒಂದೆರಡು ಡೈಲಾಗ್​ ಬಂದ್ರೆ ಸೀಟಿ ಚಪ್ಪಾಳೆಯ ಸುರಿಮಳೆ ಶುರುವಾಗುತ್ತೆ. ಇದು ರಜಿನಿಕಾಂತ್​ ತಾಕತ್ತು.

ಎಪ್ಪತ್ತರ ವಯಸ್ಸಲ್ಲೂ ಹದಿನೆಂಟರ ಹುಡುಗನಂತೆ ಆ್ಯಕ್ಷನ್​​ ಸಿನಿಮಾಗಳಿಗೆ ರಜಿನಿಕಾಂತ್​ ಓಕೆ ಎನ್ನುತ್ತಾರೆ. ಆದ್ರೆ ಇತ್ತೀಚೆಗೆ ರಜಿನಿಯ ಸಿನಿಮಾಗಳು ನಿರೀಕ್ಷೆ ಮಾಡಿದ ಯಶಸ್ಸು ಕಂಡಿಲ್ಲ. ಅಣ್ಣಾತೆ ಚಿತ್ರದ ನಂತ್ರ ಸ್ಟೈಲೀಶ್​  ಸ್ಟಾರ್​ ರಜಿನಿ 169 ನೇ ಚಿತ್ರಕ್ಕೆ ಕೈ ಹಾಕಿದ್ದಾರೆ. 70 ವರ್ಷದ ರಜಿನಿಗೆ ಜೋಡಿಯಾಗಿ ಅಗೈನ್​ ರೋಬೋ ಚಿತ್ರದ  ಹಿಟ್​ ಪೇರ್​​ ಐಶ್ವರ್ಯಾ ರೈ ಕಾಣಿಸಿಕೊಳ್ಳಲಿದ್ದಾರೆ. ಈ ಸುದ್ದಿ ಕೇಳ್ತಿದ್ದ ಹಾಗೆ ಥ್ರಿಲ್​ ಆಗಿರೋ ಫ್ಯಾನ್ಸ್​​ ರೋಬೋ ತ್ರೀ ಸಿನಿಮಾ ಅಂತಾ ಎಗ್ಸೈಟ್​ ಆಗಿದ್ದಾರೆ.

ರಜಿನಿ ಚಿತ್ರಕ್ಕೆ ಬೀಸ್ಟ್​ ಚಿತ್ರದ ನಿರ್ದೇಶಕ ನೆಲ್ಸನ್​ ದಿಲೀಪ್​​ಕುಮಾರ್​ ಆ್ಯಕ್ಷನ್ ಕಟ್​ ಹೇಳ್ತಿದ್ದಾರೆ. ಬೀಸ್ಟ್​ ಚಿತ್ರದ ಸೋಲಿನ ನಂತ್ರ ಗಾಯಗೊಂಡಿರೋ ಸಿಂಹದಂತೆ ನೆಲ್ಸನ್​​ ಸಕ್ಸಸ್​ಗಾಗಿ ಹಾತೊರೆಯುತ್ತಿದ್ದಾರೆ. ಹಾಗಾಗಿ ಇದು ಸೋತವರ ಸಿನಿಮವಾಗಲಿದೆ. ಜುಲೈಗೆ ರಜಿನಿ 169ನೇ ಸಿನಿಮಾ ಸೆಟ್ಟೇರಲಿದ್ದು ಖ್ಯಾತ ನಿರ್ದೇಶಕ ಅನಿರುದ್ಧ್​ ಸಂಗೀತ ಸಂಯೋಜನೆ ಮಾಡ್ತಿದ್ದಾರೆ. ಅದ್ಧೂರಿ ವೆಚ್ಚದಲ್ಲಿ ಒಂದೊಳ್ಳೆ ಕಥೆಯೊಂದಿಗೆ ಸಿನಿಮಾ ನಿರ್ಮಾಣ ಆಗಲಿದೆ.

ನಟಿ ಐಶ್ವರ್ಯಾ ರೈ  ಕೂಡ ಇಂದಿಗೂ ಬಣ್ಣದ ಲೋಕದಲ್ಲಿ ಇಂದಿಗೂ  ಅದೇ ಚಾರ್ಮಿಂಗ್​ ಉಳಿಸಿಕೊಂಡಿದ್ದಾರೆ. ಇತ್ತೀಚೆಗೆ ಕಾನ್​ ಫೆಸ್ಟಿವಲ್​ನಲ್ಲಿ ಅವರ ಸೌಂದರ್ಯ, ಬೆಡಗು, ಭಿನ್ನಾಣ ನೋಡಿದವರು ಒಂದು ಕ್ಷಣ ಬೆರಗಾಗಿದ್ದಾರೆ. 48ರ ವಯಸ್ಸಲ್ಲೂ ಪಡ್ಡೆ ಹೈಕಳ ನಿದ್ದೆ ಕದಿಯೋ ಕನಸಿನ ರಾಣಿ ಐಶ್ವರ್ಯಾ ರೈ. ಸಖತ್​ ಚ್ಯೂಸಿಯಾಗಿರೋ ಐಶ್ವರ್ಯಾ ಈ ಕಥೆಯನ್ನು ಇಷ್ಟಪಟ್ಟು ಒಪ್ಪಿಕೊಂಡಿದ್ದಾರಂತೆ. ಹಾಗಾಗಿ ಚಿತ್ರದ ಮೇಲಿನ ನಿರೀಕ್ಷೆ ಡಬಲ್ ಅಗಿದೆ.

ಮದುವೆಯ ನಂತ್ರ ಮಗಳೊಂದಿಗೆ ಬ್ಯುಸಿ ಇರೋ ಐಶ್ವರ್ಯಾ ಚಿತ್ರರಂಗದಿಂದ ಸ್ವಲ್ಪ ಅಂತರವನ್ನು ಕಾಯ್ದುಕೊಂಡಿದ್ರು. ಇದೀಗ ರಜಿನಿ ಜೊತೆಗೆ 169 ಸಿನಿಮಾ ಮಾಡೋಕೆ ಒಪ್ಪಿಕೊಂಡಿದ್ದಾರೆ. ಚಿತ್ರದ ಟೈಟಲ್​​ ಇನ್ನೂ ಸಸ್ಪೆನ್ಸ್​ ಆಗಿದ್ದು, ಚಿತ್ರದ ಕುರಿತು ನಿರೀಕ್ಷೆಗಳು ದುಪ್ಪಟ್ಟಾಗಿವೆ. ತಲೈವಾ ಅಭಿಮಾನಿಗಳು ಈ ಸಿನಿಮಾ ಮೂಲಕ ರಜಿನಿ ಕಂಬ್ಯಾಕ್​ ಆಗಲಿ ಅಂತಾ ದೇವರಲ್ಲಿ ಪ್ರಾರ್ಥನೆ ಮಾಡ್ತಿದ್ದಾರೆ.

ರಾಕೇಶ್​ ಆರುಂಡಿ, ಫಿಲ್ಮ್​ ಬ್ಯೂರೋ, ಪವರ್ ಟಿವಿ.

RELATED ARTICLES

Related Articles

TRENDING ARTICLES