Wednesday, January 22, 2025

B.Y.ವಿಜಯೇಂದ್ರಗೆ ಪಟ್ಟ ಕಟ್ಟಲು BSY ಬೆಂಬಲಿಗರ ಆಗ್ರಹ

ಬೆಂಗಳೂರು : ಮುಂದಿನ ಸಾರ್ವತ್ರಿಕ ಚುನಾವಣೆಯಲ್ಲಿ ಅಧಿಕಾರಕ್ಕೇರಲು ವಿಪಕ್ಷ ಕಾಂಗ್ರೆಸ್ ಇನ್ನಿಲ್ಲದ ಕಸರತ್ತು ಮಾಡುತ್ತಿದೆ.JDS ಕೂಡ ತಾನೇನು ಕಡಿಮೆ ಇಲ್ಲ ಎಂಬಂತೆ ತಂತ್ರಗಾರಿಕೆ ಮಾಡುತ್ತಿದೆ.ಏತನ್ಮಧ್ಯೆ ಆಡಳಿತಾರೂಢ ಬಿಜೆಪಿಯಲ್ಲಿ ಮುಂದಿನ ನಾಯಕನ ಪಟ್ಟಕ್ಕಾಗಿ ಚಟುವಟಿಕೆಗಳು ಗರಿಗೆದರಿವೆ.

ಮುಂದಿನ ಶತಾಯ ಗತಾಯ ಅಧಿಕ್ಕೇರಲು ವಿಪಕ್ಷಗಳಾದ ಕಾಂಗ್ರೆಸ್ ಹಾಗೂ ಜೆಡಿಎಸ್ ಭಾರಿ ತಂತ್ರಗಾರಿಕೆ ಮಾಡುತ್ತಿದ್ದಾರೆ.ಈ ಮಧ್ಯೆ ಬಿಜೆಪಿ ಕೂಡ ಅಧಿಕಾರ ಉಳಿಸಿಕೊಳ್ಳಲು ಬಿಜೆಪಿ ಕಸರತ್ತು ಮಾಡುತ್ತಿದೆ. ಈ ಮಧ್ಯೆ ಮುಂದಿನ ನಾಯಕನ ಪಟ್ಟಕ್ಕೇರಲು ನಾಯಕರು ನಾ ಮುಂದು, ತಾ ಮುಂದು ಅಂತಾ ಹೈಕಮಾಂಡ್ ಮಟ್ಟದಲ್ಲಿ ಭಾರಿ ಲಾಬಿ ಮಾಡುತ್ತಿದ್ದಾರೆ.ಏತನ್ಮಧ್ಯೆ ಮಾಜಿ ಸಿಎಂ ಯಡಿಯೂರಪ್ಪ ಅವರ ಕಿರಿಮಗ ವಿಜಯೇಂದ್ರ ಅವರನ್ನು ಮುಂದಿನ ನಾಯಕನಾಗಿ ಬಿಂಬಿಸುವ ಯತ್ನ ಮುನ್ನೆಲೆಗೆ ಬಂದಿದೆ. ಬಿಎಸ್‌ವೈ ಆಪ್ತರು ವಿಜಯೇಂದ್ರ ಪರವಾಗಿ ಬ್ಯಾಟ್ ಬೀಸಿದ್ದಾರೆ. ವಿಜಯೇಂದ್ರರನ್ನೇ ಮುಂದಿನ ಸಿಎಂ ಅಭ್ಯರ್ಥಿ ಎಂದು ಬೆಂಬಲಿಸಿ ಹಲವು ಮುಖಂಡರು ಹೇಳಿಕೆ ನೀಡಿದ್ದಾರೆ. ಇದು ಪಕ್ಷದೊಳಗಿನ ಯಡಿಯೂರಪ್ಪ ವಿರೋಧಿಗಳನ್ನು ಕೆರಳಿಸಿದೆ.

B.Y. ವಿಜಯೇಂದ್ರ ಮುಖ್ಯಮಂತ್ರಿಯಾದರೆ ತಪ್ಪೇನು..? :

B.Y.ವಿಜಯೇಂದ್ರ ಮುಖ್ಯಮಂತ್ರಿಯಾದರೆ ತಪ್ಪೇನು..? ವಿಜಯೇಂದ್ರಗೆ ನಾಯಕನಾಗುವ ಎಲ್ಲ ಕ್ವಾಲಿಟಿ ಇದೆ. ವಿಜಯೇಂದ್ರ 30 ವರ್ಷಗಳಿಂದ ಗೊತ್ತು.ಮುಂದೆ ಯಡಿಯೂರಪ್ಪ, ಸಂಘಪರಿವಾರ, ಹಿರಿಯರ ಆಶೀರ್ವಾದ, ಮಾರ್ಗದರ್ಶನದಿಂದ ಎತ್ತರಕ್ಕೆ ಬೆಳೆಯುತ್ತಾನೆ ಎಂದು ಕೇಳುವ ಮೂಲಕ ಸಚಿವ ಮುರುಗೇಶ್ ನಿರಾಣಿ BSY ಪುತ್ರನ ಪರ ಬ್ಯಾಟಿಂಗ್ ಮಾಡಿದ್ದಾರೆ.

ಇನ್ನು ನಿರಾಣಿ ಹೇಳಿಕೆಯಿಂದ ಕೆರಳಿ ಕೆಂಡವಾಗಿರುವ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ, ಯೋಗ್ಯತೆ ಇರುವವರು ಅನೇಕರು ಇದ್ದಾರೆ. ಯೋಗ್ಯತೆ ಇದ್ರೂ ಯೋಗ ಬೇಕು ಎಂದು ವಿಜಯೇಂದ್ರ ಕಾಲೆಳೆದಿದ್ದಾರೆ.

ವಿಜಯೇಂದ್ರಗೆ ತಿರುಗೇಟು ಕೊಟ್ಟ ಸಚಿವ ವಿ.ಸೋಮಣ್ಣ :

ವಿಧಾನ ಪರಿಷತ್ ಟಿಕೆಟ್‌ ಕೈತಪ್ಪಿದ ಬೆನ್ನಲ್ಲೇ ಮುಂದಿನ ನಾಯಕನಾಗಿ B.Y.ವಿಜಯೇಂದ್ರ ಹೆಸರು ಮತ್ತೆ ಮುನ್ನೆಲೆಗೆ ಬರುತ್ತಿದ್ದಂತೆ ಸಚಿವ ಸೋಮಣ್ಣ ಕೆರಳಿ ಕೆಂಡವಾಗಿದ್ದಾರೆ.ವಿಜಯೇಂದ್ರ ವಿರುದ್ಧ ಏಕವಚನದಲ್ಲೇ ಸೋಮಣ್ಣ ವಾಗ್ದಾಳಿ ನಡೆಸಿದ್ದಾರೆ..ನಂಗೆ 71 ಅವನಿಗೆ 46, ಮೊದಲು ಚುನಾವಣೆ ಗೆದ್ದು ಬರಲಿ.ಏಳು ಬಾರಿ ಚುನಾವಣೆ ಗೆದ್ದು ನಾನು ಶಾಸಕನಾಗಿದ್ದೇನೆ ಎಂದು ತಿರುಗೇಟು ಕೊಟ್ಟಿದ್ದಾರೆ.

ಒಟ್ಟಿನಲ್ಲಿ ಮಾಜಿ ಸಿಎಂ BSY ಪುತ್ರ ವಿಜಯೇಂದ್ರ ವಿಧಾನ ಪರಿಷತ್ ಟಿಕೆಟ್ ಕೈ ತಪ್ಪಿದ ಬಳಿಕ ಮತ್ತೊಮ್ಮೆ ಸುದ್ದಿಯಲ್ಲಿದ್ದಾರೆ. ಬಿಎಸ್​​ವೈ ಆಪ್ತರು ವಿಜಯೇಂದ್ರ ಪರ ಬ್ಯಾಟಿಂಗ್ ಮಾಡಿದರೆ, ವಿರೋಧಿಗಳು ತಿರುಗೇಟು ಕೊಟ್ಟಿದ್ದಾರೆ. ಆದರೆ, ಇದಕ್ಕೆಲ್ಲಾ ಹೈಕಮಾಂಡ್ ಯಾವ ನಿರ್ಧಾರ ಕೈಗೊಳ್ಳಲಿದೆ ಎಂಬುದನ್ನು ಕಾದು ನೋಡಬೇಕಿದೆ.

ಬ್ಯೂರೋ ರಿಪೋರ್ಟ್‌ ಪವರ್ ಟಿವಿ

RELATED ARTICLES

Related Articles

TRENDING ARTICLES