Monday, December 23, 2024

ನಿರ್ದೇಶಕನಿಗೆ ಕಾರ್ ಗಿಫ್ಟ್​ ಕೊಟ್ಟ ಕಮಲ್

‘ವಿಕ್ರಮ್’ ಸಿನಿಮಾ ಸೂಪರ್ ಹಿಟ್ ಆಗಿದೆ. ನಟ ಕಮಲ್ ಹಾಸನ್ ಈ ಸಿನಿಮಾ ಮೂಲಕ ಒಂದೊಳ್ಳೆ ಕಂಬ್ಯಾಕ್ ಮಾಡಿದ್ದಾರೆ. ಈ ಸಿನಿಮಾ ಕೇವಲ ನಾಲ್ಕು ದಿನದಲ್ಲಿ 200 ಕೋಟಿ ಕ್ಲಬ್ ಸಮೀಪದಲ್ಲಿದೆ. ಈ ಸಿನಿಮಾದಲ್ಲಿ ನಿರ್ದೇಶಕ ಲೋಕೇಶ್ ಕನಗರಾಜ್ ಅವರ ಶ್ರಮ ತುಂಬಾನೇ ದೊಡ್ಡದು. ಈ ಕಾರಣಕ್ಕೆ ಅವರಿಗೆ ನಟ ಕಮಲ್ ಹಾಸನ್ ಸುಮಾರು 70 ಲಕ್ಷ ರೂಪಾಯಿ ಮೌಲ್ಯದ ಲೆಕ್ಸಸ್ ಕಾರನ್ನು ಉಡುಗೊರೆಯಾಗಿ ನೀಡಿದ್ದಾರೆ.

ಲೋಕೇಶ್​ಗೆ ಕಮಲ್ ಕೀ ಕೊಡುತ್ತಿರುವ ಫೋಟೋ ವೈರಲ್ ಆಗಿದೆ. ಈ ಕಾರು ಪಡೆಯಲು ಅವರು ಅರ್ಹರು ಎಂದು ಫ್ಯಾನ್ಸ್ ಕಮೆಂಟ್ ಮಾಡುತ್ತಿದ್ದಾರೆ. ಮಾಸ್ ಮಸಾಲ ಅಂಶವಿದ್ದ ಮಾತ್ರಕ್ಕೆ ಸಿನಿಮಾ ಗೆಲ್ಲುವುದಿಲ್ಲ..‘ವಿಕ್ರಮ್’ ಸಿನಿಮಾದಲ್ಲಿ ಮಾಸ್ ಅಂಶಗಳ ಜೊತೆಗೆ ಹಳೆಯ ಸಿನಿಮಾಗಳಿಗೆ ಕನೆಕ್ಷನ್, ಭಾವನಾತ್ಮಕ ಅಂಶಗಳನ್ನು ಕೂಡ ಬೆರೆಸಲಾಗಿತ್ತು . ಈ ಕಾರಣಕ್ಕೆ ಸಿನಿಮಾ ಸೂಪರ್ ಹಿಟ್ ಆಗಿದೆ ಅಂತಿದ್ದಾರೆ ಫ್ಯಾನ್ಸ್.

RELATED ARTICLES

Related Articles

TRENDING ARTICLES