ಹುಬ್ಬಳ್ಳಿ: ಡಿ.ಕೆ.ಶಿವಕುಮಾರ್ ಮತ್ತು ಸಿದ್ದಾರಾಮಯ್ಯನವರಿಗೆ ಗಡ್ಸ್ ಇದ್ದರೆ ಮುಂದಿನ ಸಿ.ಎಂ ಅಭ್ಯರ್ಥಿ ಜಿ.ಪರಮೇಶ್ವರ ಎಂದು ಘೋಷಣೆ ಮಾಡಲಿ ಎಂದು ಮಾಜಿ ಸಿ ಎಂ ಜಗದೀಶ್ ಶೆಟ್ಟರ್ ಅವರು ಕಾಂಗ್ರೆಸ್ ಪಕ್ಷಕ್ಕೆ ಸವಾಲು ಹಾಕಿದ್ದಾರೆ.
ಇಂದು ಹುಬ್ಬಳ್ಳಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್‌ನವರು ಇಲ್ಲಿಯವರೆಗೆ ದಲಿತ ಮುಖ್ಯಮಂತ್ರಿ ಮಾಡಿದ್ದಾರೆಯೇ? ದಲಿತರ ಬಗ್ಗೆ ಕಾಳಜಿ ಇದ್ದರೇ, ತಕ್ಷಣ ವಿಪಕ್ಷ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅವರು ಕಾಂಗ್ರೆಸ್‌ನ ಮುಂದಿನ ಮುಖ್ಯಮಂತ್ರಿ ಅಭ್ಯರ್ಥಿ ಜಿ ಪರಮೇಶ್ವರ್ ಎಂದು ಹೇಳಿಕೆ ಕೊಡಲಿ. ಅದು ಬಿಟ್ಟು ದಲಿತರ ಹೆಸರಿನಲ್ಲಿ ಕಣ್ಣು ಒರೆಸುವ ತಂತ್ರ ಬೇಡ ಎಂದು ವಾಗ್ದಾಳಿ ನಡೆಸಿದರು.
ಕೋಮುವಾದಿ ಬಿಜೆಪಿ ಸೋಲಿಸಲು ಕಾಂಗ್ರೆಸ್ ಜೆಡಿಎಸ್ ಒಂದಾಗೋಣ ಎಂಬ ಕುಮಾರಸ್ವಾಮಿ ಹೇಳಿಕೆ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿ, ಮಾಜಿ ಸಿಎಂ ಇಬ್ಬರು ಬೆಳಗ್ಗೆಯೊಂದು ಸಂಜೆಯೊಂದು ಹೇಳಿಕೆ ನೀಡುತ್ತಾರೆ. ಅವರ ಅನುಕೂಲಕೆ ತಕ್ಕಂತೆ ಸೆಕ್ಯುಲೆರ್ ಪದ ಬಳಕೆ ಮಾಡತ್ತಾರೆ. ನಿತ್ಯ ಯಾರು ಜಾತಿ ರಾಜಕಾರಣ ಮಾಡುತ್ತಾರೆ ಅವರು ಸೆಕ್ಯೂಲರ್ ಬಗ್ಗೆ ಮಾತನಾಡುತ್ತಾರೆ. ಕುಮಾರಸ್ವಾಮಿ ಮತ್ತು ಸಿದ್ದರಾಮಯ್ಯ ಸೆಕ್ಯುಲೆರ್ ಪದವನ್ನು ದಿನ ಬಳಕೆ ಮಾಡಿ ಆ ಪದಕ್ಕೆ ಅರ್ಥವಿಲ್ಲದಂತೆ ಮಾಡಿದ್ದಾರೆ. ಒಂದು ಕಡೆ ಆರ್ ಎಸ್ ಎಸ್ ಬಗ್ಗೆ ಮಾತನಾಡಿ ಮತ್ತೊಂದು ಕಡೆ ಸೆಕ್ಯೂಲರ್ ಅಂತ ಹೇಳತ್ತಾರೆ.
ಇನ್ನು ನಾವು ಸ್ವತಂತ್ರವಾಗಿ ಮೂರನೇ ಅಭ್ಯರ್ಥಿ ಹಾಕಿದ್ದೇವೆ ನಾವು ಗೆಲುತ್ತೇವೆ. ವಿಪಕ್ಷ ನಾಯಕರಿಗೆ ದಲಿತರ ಮೇಲೆ ಪ್ರೀತಿ ಇದ್ದರೆ ಜಿ.ಪರಮೇಶ್ವರನ್ನ ಯಾಕೆ ಸಿ.ಎಂ ಮಾಡಲಿಲ್ಲ ಎಂದು ಕಿಡಿಕಾರಿದರು.