ಚಾಮರಾಜನಗರ: ಹಿಜಾಬ್ನಿಂದ ಹಿಡಿದು ಹಲಾಲ್ ಕಟ್, ಮಸೀದಿ ವಿವಾದದ ಬೆನ್ನಲ್ಲೇ ಈದ್ಗಾ ಮೈದಾನದ ಜಟಾಪಟಿ ಮತ್ತಷ್ಟು ತೀವ್ರಗೊಳ್ಳುತ್ತಿದೆ.
ಈಗಾಗಲೇ ಆಗಸ್ಟ್ ೧೫ ಕ್ಕೆ ಧ್ವಜಾರೋಹಣಕ್ಕೆ ಅವಕಾಶ ಕೇಳಿರೋ ಹಿಂದೂ ಸಂಘಟನೆಗಳು. ಚಾಮರಾಜಪೇಟೆ ಈದ್ಗಾ ಮೈದಾನದಲ್ಲಿ ರಾಷ್ಟ್ರ ಧ್ವಜ ಹಾರಿಸೋಕೆ ಹಿಂದೂ ಸಂಘಟನೆಗಳು ತೀರ್ಮಾನ ಮಾಡುತ್ತಿದ್ದಾರೆ. ಹಿಂದೂ ಸಂಘಟನೆಗಳ ಬದಲು ಮುಸ್ಲಿಂ ಸಮುದಾಯ ನಾವೇ ಧ್ವಜ ಹಾರಿಸ್ತೀವಿ ಅಂತಿದ್ದಾರೆ.
ಅದಲ್ಲದೇ, ಸುಪ್ರಿಂ ಕೋರ್ಟ್ನಲ್ಲಿ ತೀರ್ಪು ನಮ್ಮ ಪರ ಬಂದಿದೆ ಅಂತಿರೋ ವಕ್ಫ್ ಬೋರ್ಡ್ ಇದಕ್ಕೆಲ್ಲ ಮುಕ್ತಿ ನೀಡಲು ವರ್ಕ್ಸ್ ಬೋರ್ಡ್ ನಿರ್ಧಾರ ಮಾಡಿದ್ದಾರೆ. ಸ್ಥಳೀಯ ವರ್ಕ್ಸ್ ಬೋರ್ಡ್ ನಿಂದ ಅಗಸ್ಟ್ ೧೫ ರಂದು ಈದ್ಗಾ ಗ್ರೌಂಡ್ನಲ್ಲಿ ರಾಷ್ಟ್ರಧ್ವಜ ಹರಿಸಲು ತೀರ್ಮಾನಿಸಲಾಗಿದ್ದು, ಯಾವುದೇ ಕೋಮು ಗಲಭೆ ನಡೆಯದಂತೆ ಧ್ವಜಾರೋಹಣ ಮಾಡಲು ಮುಸ್ಲಿಂ ಮುಖಂಡರು ಚಿಂತನೆ ನಡೆಸಿದ್ದಾರೆ.
ಇನ್ನು, ಧ್ವಜಾರೋಹಣ ನಡೆಸಿ ವಿವಾದಕ್ಕೆ ತೆರೆ ಎಳೆಯಲು ವರ್ಕ್ಸ್ ಬೋರ್ಡ್ ನಿರ್ಧಾರ ಮಾಡಲಾಗಿದ್ದು, ನಮ್ಮಗೆ ಅವಕಾಶ ಕೊಡಿ ಅಂತಿರೋ ಹಿಂದೂ ಸಂಘಟನೆಗಳು ರಾಷ್ಟ್ರ ಧ್ವಜ ಹಾರಿಸೋಕೆ ಯಾರಿಗೆ ಸಿಗುತ್ತೆ ಪರ್ಮಿಷನ್..? ಎಂದು ಕಾದುನೋಡಬೇಕಿದೆ.