Thursday, January 23, 2025

ಕುಮಾರಸ್ವಾಮಿ ಮಾತಿಗೆ ಪ್ರತಿಕ್ರಿಯೆ ನೀಡುವಷ್ಟು ಶಕ್ತಿ ನನಗಿಲ್ಲ : ಡಿ.ಕೆ ಶಿವಕುಮಾರ್

ಬೆಂಗಳೂರು: ಸುರ್ಜೇವಾಲ ಮನವಿ ಮಾಡಿದಾರೆ ಅಂದರೆ ಅದು ಹೈಕಮಾಂಡ್ ಮನವಿ ಮಾಡಿದ ಹಾಗೇ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್​ ಹೇಳಿದ್ದಾರೆ.

ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನೊಬ್ಬನೇ ಏನು ಮಾತನಾಡಲು ಸಾಧ್ಯವಿಲ್ಲ. ನನ್ನ ವೈಯಕ್ತಿಕ ನಿರ್ಧಾರ ಏನೇ ಇರಬಹುದು. ಆದರೆ ಭಾವನಾತ್ಮಕ ವಿಚಾರ ಇದೆ ಸ್ವಾಭಿಮಾನವು ಇದೆ. ಕುಮಾರಸ್ವಾಮಿ ಮಾತಿಗೆ ಪ್ರತಿಕ್ರಿಯೆ ನೀಡುವಷ್ಟು ಶಕ್ತಿ ನನಗಿಲ್ಲ. ಜಾತ್ಯಾತೀತ ಶಕ್ತಿ ಅಂತಾನೇ ಸುರ್ಜೇವಾಲ ಅವರು ಅವರಿಗೆ ಮನವಿ ಮಾಡಿದ್ದು. ಸುರ್ಜೇವಾಲ ಮನವಿ ಮಾಡಿದಾರೆ ಅಂದರೆ ಅದು ಹೈಕಮಾಂಡ್ ಮನವಿ ಮಾಡಿದ ಹಾಗೇ ಎಂದರು

ರಾಜ್ಯಸಭಾ ಚುನಾವಣೆ ಬಗ್ಗೆ ಹೆಚ್​ಡಿಕೆ ಮಾತುಕತೆಗೆ ಆಹ್ವಾನ ವಿಚಾರವಾಗಿ ಮಾತನಾಡಿದ ಅವರು, ನಾನೊಬ್ಬ ಕಾರ್ಯಕರ್ತ ಅವರಲ್ಲಿ ಸ್ವತಂತ್ರವಾಗಿ ಮಾತನಾಡಬಹುದು. ನಾನು ಪಕ್ಷದ ವರಿಷ್ಠರುನಾಯಕರಿಗೆ ಮಾತನಾಡಬೇಕು. ಸರ್ಕಾರ ಹೋಗಿದ್ದುಹೊರಗಡೆ ಉಳಕೊಂಡಿದ್ದು ಇಬ್ರಾಹಿಂ ಮಾತನಾಡಿದ್ದು ಎಲ್ಲವು ನಿಮ್ಮ ಮುಂದೆ ಇದೆ. ರಾಜಕೀಯದಲ್ಲಿ ಯಾವುದು ಶಾಶ್ವತ ಅಲ್ಲ ಇದನ್ನ ನಾನು ಒಪ್ಪುತ್ತೇನೆ. ಆದರೆ ನಾನೊಬ್ಬನೇ ಏನು ನಿರ್ಧಾರ ಮಾಡಲು ಸಾಧ್ಯವಿಲ್ಲ. ಪಾಲಿಟಿಕ್ಸ್ ಇಸ್ ಆರ್ಟ್ ಆಫ್ ಪಾಸಿಬಲಿಟಿ ನುಡಿದಂತೆ ನಡೆದವರ ಜೊತೆ ಮಾತ್ರ ಮಾತನಾಡಬಹುದು ಎಂದು ಹೇಳಿದರು.

RELATED ARTICLES

Related Articles

TRENDING ARTICLES