ಬೆಂಗಳೂರು : ಗ್ರಾಮೀಣ ಮಕ್ಕಳಿಗಾಗಿ ಮಾಜಿ ಸಿಎಂ ಬಿಎಸ್ವೈ ಜಾರಿ ಮಾಡಿದ್ದ ಜನಪ್ರಿಯ ಯೋಜನೆ. ಆ ಯೋಜನೆಯಿಂದ ಹಲವಾರು ಮಕ್ಕಳಿಗೆ ಅನುಕೂಲವಾಗಿತ್ತು. ಆದರೆ ಬೊಮ್ಮಾಯಿ ಸರ್ಕಾರ ಆ ಯೋಜನೆಯನ್ನು ಕೈ ಬಿಡಲು ಮುಂದಾಗಿದೆ ಅಷ್ಟಕ್ಕೂ ಅದ್ಯಾವ ಯೋಜನೆ ಅಂತೀರಾ?
ಮಾಜಿ ಸಿಎಂ ಯಡಿಯೂರಪ್ಪ ಬಿಜೆಪಿಯಲ್ಲಿ ಸೈಡ್ ಲೈನ್ ಆಗ್ತಿದ್ದಂತೆ ಅವ್ರ ಜನಪ್ರಿಯ ಯೋಜನೆಗಳಿಗೂ ಕತ್ತರಿ ಬೀಳ್ತಿದೆ. ಗ್ರಾಮೀಣ ಭಾಗದ ಮಕ್ಕಳ ಕಲಿಕಾ ದೃಷ್ಟಿಯಿಂದ 2006ರಲ್ಲಿ ಯಡಿಯೂರಪ್ಪನವ್ರು ಉಚಿತ ಬೈಸಿಕಲ್ ಯೋಜನೆ ಜಾರಿ ಮಾಡಿದ್ರು. ಅದನ್ನ ಕಾಂಗ್ರೆಸ್ ಸರ್ಕಾರವೂ ಮುಂದುವರೆಸಿಕೊಂಡು ಬಂತು. ಆದ್ರೆ ಈಗ ಬೊಮ್ಮಾಯಿ ಸರ್ಕಾರ ಹಣಕಾಸಿನ ನೆಪ ಹೇಳಿಕೊಂಡು ಯೋಜನೆಯನ್ನೇ ನಿಲ್ಲಿಸಲು ಹೊರಟಿದೆ.
ಪ್ರೈವೇಟ್ ಏಜೆನ್ಸಿಯೊಂದರ ಮೂಲಕ ನಡೆಸಿದ ಸರ್ವೇ ಪ್ರಕಾರ, ಬೈಸಿಕಲ್ ನೀಡೋದ್ರಿಂದ ಕಲಿಕಾ ಫಲಿತಾಂಶಗಳ ಮೇಲೆ ಪರಿಣಾಮ ಬೀರಲ್ವಂತೆ. ಇದನ್ನೇ ಮುಂದಿಟ್ಟುಕೊಂಡು ಆರ್ಥಿಕ ಇಲಾಖೆ ಹಣಕಾಸಿನ ಕೊರತೆ ನೆಪ ಹೇಳ್ತಿದೆ. ಬಹುತೇಕ ಗ್ರಾಮಗಳಲ್ಲಿ ಬಸ್ ವ್ಯವಸ್ಥೆ ಇರಲಿ, ರಸ್ತೆಗಳೇ ಇರಲ್ಲ. ಶಾಲೆಗಳಿಗೆ ಹತ್ತಾರು ಕಿಲೋ ಮೀಟರ್ ದೂರದಿಂದ ನಡೆದುಕೊಂಡೇ ಬರಬೇಕು. ಬೈಸಿಕಲ್ ಯೋಜನೆ ನಿಲ್ಲಿಸಿದ್ರೆ ಮಕ್ಕಳಿಗೆ ದ್ರೋಹ ಬಗೆದಂತೆ ಆಗುತ್ತೆ ಅಂತಾ ಬಿಜೆಪಿ ಕಾರ್ಯಕರ್ತರೇ ವಿರೋಧ ವ್ಯಕ್ತಪಡಿಸ್ತಿದ್ದಾರೆ.
ಇಂತಹ ಜನಪ್ರಿಯ ಯೋಜನೆಗೆ ಕೊಕ್ಕೆ ಹಾಕ್ತಿರೋ ಉದ್ದೇಶವೇ ಬೇರೆ ಅನ್ನೋ ಮಾತುಗಳು ಬಿಜೆಪಿ ಪಾಳಯದಿಂದ ಕೇಳಿ ಬರ್ತಿದೆ. ಅದೇನೇ ಇದ್ರೂ ಇವರ ಒಣ ರಾಜಕೀಯ ಗುದ್ದಾಟಗಳನ್ನ ಪಕ್ಕಕ್ಕಿಟ್ಟು, ಉಚಿತ ಬೈಸಿಕಲ್ ಯೋಜನೆ ಮುಂದುವರೆಸಬೇಕು ಅನ್ನೋ ಆಗ್ರಹ ಜೋರಾಗಿದೆ.
ಆನಂದ್ ನಂದಗುಡಿ ಸ್ಪೆಷಲ್ ಬ್ಯೂರೋ ಪವರ್ ಟಿವಿ ಬೆಂಗಳೂರು