Thursday, January 23, 2025

ಏಕಾಏಕಿ ಕಾಣೆಯಾದ ಕರುಳಿನ ಕುಡಿ

ಬೀದರ್​ : ಐದು ದಿನಗಳ ಹಿಂದೆ ಮನೆಯಿಂದ ಹೊರಗಡೆ ಹೋದ ಮಗ ವಾಪಸ್​ ಆಗದ ಹಿನ್ನೆಲೆಯಲ್ಲಿ ಊರು ತಿರುಗಿ ಮಗನ ಹುಡುಕಾಟ ನಡೆಸುತ್ತಿರುವ ತಾಯಿ ಕಲಾವತಿ,. ಈ ತಾಯಿಗೆ ಊರಿನ ಮಹಿಳೆಯರು, ಯುವಕರು ಸಾಥ್​ ನೀಡಿದ್ದಾರೆ.

​ಜಿಲ್ಲೆಯ ಭಾಲ್ಕಿ ತಾಲೂಕಿನ ಜೈನಾಪುರ ಗ್ರಾಮದ ಕಲಾವತಿ ಎಂಬ ಮಹಿಳೆಯ ನೆಚ್ಚಿನ ಮಗ ಶ್ರೀಕಾಂತ್(20) ಎಂಬಾತ ಜೂನ್​ 3ರಂದು ಸಂಜೆ 4 ಗಂಟೆಗೆ ಅಮ್ಮ ನನಗೆ ತುಂಬ ಕೆಲಸ ಇದೆ ಎಂದು ಹೇಳಿ ಹೊರಗಡೆ ಹೋಗುತ್ತಾನೆ,. ಹಾಗೆ ಹೋದ ಶ್ರೀಕಾಂತ್​ ಒಂದು ವಾರ ಕಳೆಯುತ್ತಾ ಬಂದರೂ ಮನೆಗೆ ವಾಪಸ್​ ಆಗಲೇ ಇಲ್ಲ,. ಈಗಾಗಲೇ ಈ ಕುರಿತು ಗ್ರಾಮಸ್ಥರೆಲ್ಲ ಸೇರಿ ಧನ್ನೂರಾ ಠಾಣೆಯಲ್ಲಿ ಪ್ರಕರಣ ಕೂಡ ದಾಖಲಿಸಿದ್ದಾರೆ,. ಆದರೆ ಪ್ರಕರಣ ದಾಖಲಿಸಿಕೊಳ್ಳಲು ವಿಳಂಬ ಮಾಡಿ ಪೊಲೀಸರು, ಶ್ರೀಕಾಂತ್​ ಪತ್ತೆ ಹಚ್ಚಲು ಕಾಳಜಿ ತೋರುತ್ತಿಲ್ಲ ಎಂದು ಜೈನಾಪುರ ಗ್ರಾಮಸ್ಥರು ಹೇಳುತ್ತಾರೆ,. ಇತ್ತ ಮನೆಯಲ್ಲಿ ಅತ್ಯಂತ ಪ್ರತಿಭಾವಂತ ಮತ್ತು ಎಲ್ಲ ಕೆಲಸ ಕಾರ್ಯಗಳನ್ನ ಕ್ಷಣದಲ್ಲಿ ಮುಗಿಸಿ ಬಿಡುತ್ತಿದ್ದ ಶ್ರೀಕಾಂತ್​ನನ್ನ ಕಳೆದುಕೊಂಡ ತಾಯಿ ಕಲಾವತಿ ಕಣ್ಣೀರಲ್ಲಿ ಕೈತೊಳೆಯುತ್ತಿದ್ದಾರೆ,.

ಇನ್ನು ಇವರ ಮಗ ಹುಡುಕಲು ಸಾಥ್​ ಕೊಟ್ಟಿರುವ ಗ್ರಾಮದ ಮಹಿಳೆಯರು, ಯುವಕರು ಸೇರಿ ಜಿಲ್ಲೆಯ ಹುಮನಾಬಾದ್​, ಚಿಟಗುಪ್ಪಾ, ಔರಾದ್, ಭಾಲ್ಕಿ ಸೇರಿದಂತೆ ಮೂಲೆ ಮೂಲೆಯಲ್ಲಿ ಹುಡುಕಾಡುತ್ತಿದ್ದಾರೆ,. ಹಲವು ಗ್ರಾಮಗಳ, ಪಟ್ಟಣಗಳ ಬಸ್​ ನಿಲ್ದಾಣ್, ಬೀದಿ ಬದಿ ಕಂಪೌಂಡ್​ಗಳಲ್ಲಿ ಯುವಕ ಚಿತ್ರ ಇರುವ ಬಿತ್ತಿ ಪತ್ರ ಅಂಟಿಸಿ ಶ್ರೀಕಾಂತ್​ಗೆ ಕಾಣಿಸಿದ್ದರೇ 9353615469 ಮೊಬೈಲ್​ ನಂ. ಕರೆ ಮಾಡುವಂತ ಮನವಿ ಮಾಡಿಕೊಳ್ಳುತ್ತಿದ್ದಾರೆ.

RELATED ARTICLES

Related Articles

TRENDING ARTICLES