Monday, December 23, 2024

ಆರ್ಥಿಕ ಸಂಕಷ್ಟದಲ್ಲಿ ಬಿಡಿಎ

ಬೆಂಗಳೂರು: ದುಡ್ಡಿಲ್ಲ ದುಡ್ಡಿಲ್ಲ ಅಂತಾ ಬಿಡಿಎ ಬಾಯಿ ಬಾಯಿ ಬಡಿದುಕೊಳ್ತಿದೆ. ಇದರಿಂದ ನಗರದ ವಿವಿಧ ಭಾಗಗಳಲ್ಲಿ ನಡೆಯುತ್ತಿರೋ ಕಾಮಗಾರಿಗಳು ಅರ್ಧಕ್ಕೆ ನಿಂತು ಹೋಗಿವೆ.ಇತ್ತ ಸರ್ಕಾರ ಅನುದಾನ ನೀಡ್ತಿಲ್ಲ. ಹೀಗಾಗಿ ನಗರದ ಬಡ ವರ್ಗಕ್ಕೆ ಸೂರು ಕಲ್ಪಿಸೋ ಪ್ರಾಧಿಕಾರ ಸ್ಥಿತಿ ಡೋಲಾಯಮಾನವಾಗಿದೆ.

ಬೆಂಗಳೂರು ಅಭಿವೃದ್ಧಿ ಜವಾಬ್ದಾರಿ ಹೊಣೆ ಹೊತ್ತಿರುವ ಬೆಂಗಳೂರು ಅಭಿವೃದ್ದಿ ಪ್ರಾಧಿಕಾರ ಆರ್ಥಿಕ ಗಂಡಾಂತರಕ್ಕೆ ಸಿಲುಕಿದೆ. ಬಿಡಿಎ ಈಗಾಗಲೇ ನಗರದ ಹಲವೆಡೆ ಹಲವು ಲೇಔಟ್ ಹಾಗೂ ಫ್ಲಾಟ್​ಗಳನ್ನ ನಿರ್ಮಾಣ ಮಾಡಿದೆ.

ಆದರೆ ಇತ್ತೀಚಿಗೆ ಬಿಡಿಎ ಆರ್ಥಿಕ ಪರಿಸ್ಥಿತಿ ಹದಗೆಟ್ಟಿರೋ ಕಾರಣ ಯಾವುದೇ ಕಾಮಗಾರಿ ಕೈಗೆತ್ತಿಗೊಳ್ಳಲು ಸಾಧ್ಯವಾಗ್ತಿಲ್ಲ. ಈ ಸಂಬಂಧ ಸರ್ಕಾರಕ್ಕೆ ಹಲವು ಬಾರಿ ಪತ್ರ ಬರೆದು ಅನುದಾನ ನೀಡಿ ಅಂತ ಕೇಳಿದ್ರೂ ಸರ್ಕಾರ ನಯಾಪೈಸೆ ಕೊಡ್ತಿಲ್ಲ. ಹೀಗಾಗಿ ಕಾಮಗಾರಿಗಳೆಲ್ಲಾ ಅರ್ಧಂಬರ್ಧಕ್ಕೆ ನಿಂತು ಅಭಿವೃದ್ಧಿ ಕುಂಠಿತಗೊಂಡಿದೆ.

2016-17ರಲ್ಲಿ ಬಿಡಿಎ ಕೈಗೆತ್ತಿಕೊಂಡಿರುವ ಹೊಸ ಮತ್ತು ಬಾಕಿ ಉಳಿದಿರುವ ಕಾಮಗಾರಿಗಳಿಗೆ ಸಾವಿರಾರು ಕೋಟಿ ರೂ. ಅವಶ್ಯಕತೆಯಿದೆ. ಔಟರ್ ಪೆರಿಫೆರಲ್ ರಿಂಗ್ ರೋಡ್ ನಿರ್ಮಾಣ ಯೋಜನೆಗೆ 21 ಸಾವಿರ ಕೋಟಿ ರೂ. ಹೊರವರ್ತಲ ರಸ್ತೆ ಅಲೈನ್ವೆುಂಟ್ ಯೋಜನೆಗೆ 700 ಕೋಟಿ ರೂ ,ಕೆಂಪೇಗೌಡ ಅರ್ಕಾವತಿ ಲೇಔಟ್ ಮೂಲಭೂತ ಸೌಕರ್ಯಕ್ಕೆ 1000 ಕೋಟಿ, ಶಿವರಾಮ ಕಾರಂತ ಬಡಾವಣೆ ನಿರ್ಮಾಣಕ್ಕೆ 4500 ಕೋಟಿಮಲ್ಲೇಶ್ವರಂ ವಾಣಿಜ್ಯ ಸಂಕೀರ್ಣಕ್ಕೆ 200 ಕೋಟಿಹೆಬ್ಬಾಳ ಫ್ಲೈಓವರ್ ಗೆ 200 ಕೋಟಿ, ಕಂಠೀರವ ಸ್ಟುಡಿಯೋ ಅಂಡರ್ ಪಾಸ್ ಕಾಮಗಾರಿಗೆ ,100 ಕೋಟಿಬೇಕಿದೆ.

ಈಗಾಗಲೇ ಆರು ವಸತಿ ಯೋಜನೆಗಳಿಗೆ ಬಿಡಿಎ 560 ಕೋಟಿ ಸಾಲ ಪಡೆದಿದೆ.

ಒಟ್ಟಿನಲ್ಲಿ ವಿವಿಧ ಬ್ಯಾಂಕ್​​ಗಳಲ್ಲಿ ಸಾಲ ಮಾಡುತ್ತಲ್ಲೇ ಬಂದಿರುವ ಪ್ರಾಧಿಕಾರ ಬಡ್ಡಿ ಕಟ್ಟುವದಕ್ಕೆ ಹೆಣಗಾಡುತ್ತಿದೆ. ಇಷ್ಟಾದ್ರೂ ಸರ್ಕಾರ ಬಿಡಿಎಗೆ ಅನುದಾನ ನೀಡುತ್ತಿಲ್ಲ ಅನ್ನೋ ಕೂಗು ಕೇಳಿ ಬಂದಿದೆ.

ಕೃಷ್ಣಮೂರ್ತಿ ಪವರ್ ಟಿವಿ ಬೆಂಗಳೂರು

RELATED ARTICLES

Related Articles

TRENDING ARTICLES