Wednesday, January 22, 2025

ಆತ್ಮಸಾಕ್ಷಿ ಅನ್ನುವಂಥದ್ದು ಸಿದ್ದರಾಮಯ್ಯಗೆ ಎಲ್ಲಿದೆ..? : ಬಿ.ಎಸ್​.ಯಡಿಯೂರಪ್ಪ

ವಿಜಯಪುರ: ವಾಯವ್ಯ ಶಿಕ್ಷಕರ ಹಾಗೂ ಪದವೀಧರರ ಎರಡೂ ಕ್ಷೇತ್ರದಲ್ಲಿ ನಾವು ಗೆಲ್ಲುತ್ತೇವೆ ಎಂದು ವಿಜಯಪುರದಲ್ಲಿ ಮಾಜಿ ಸಿಎಂ ಬಿ ಎಸ್ ಯಡಿಯೂರಪ್ಪ ಹೇಳಿದ್ದಾರೆ.

ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಪರಿಷತ್ ಚುನಾವಣಾ ಪ್ರಚಾರಕ್ಕೆ ಆಗಮಿಸಿದ್ದೇನೆ. ವಾಯವ್ಯ ಶಿಕ್ಷಕರ ಹಾಗೂ ಪದವೀಧರರ ಎರಡೂ ಕ್ಷೇತ್ರದಲ್ಲಿ ನಾವು ಗೆಲ್ಲುತ್ತೇವೆ. ರಾಜ್ಯಸಭಾ ಚುನಾವಣೆಯಲ್ಲಿ ಮೂರು ಕಡೆ ಸ್ಪರ್ಧೆ ಮಾಡಿದ್ದೇವೆ. ಮೂರೂ‌ ಸ್ಥಾನಗಳಲ್ಲಿ ‌ಗೆಲ್ಲುತ್ತೇವೆ. ಲೆಹರ್ ಸಿಂಗ್ ಅವರೂ ದೊಡ್ಡ ಅಂತರದಿಂದ ಗೆಲ್ಲುತ್ತಾರೆ ಎಂದು‌ ಬಿ ಎಸ್ ವೈ ಹೇಳಿದರು.

ಅದಲ್ಲದೇ, ರಾಜ್ಯಸಭಾ ಚುನಾವಣೆಯಲ್ಲಿ ಆತ್ಮಸಾಕ್ಷಿ ಮತದಾನ ಆಗುತ್ತದೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿಕೆ‌ ವಿಚಾರವಾಗಿ ಮಾತನಾಡಿದ ಅವರು, ಸಿದ್ದರಾಮಯ್ಯ ಯಾವುದೋ ಭ್ರಮೆಯಲ್ಲಿದ್ದಾರೆ. ಆತ್ಮಸಾಕ್ಷಿ ಅನ್ನೋ ಶಬ್ದಕ್ಕೆ ಅವರಿಗೆನೋ ಸಂಬಂಧವೇ ಇಲ್ಲಾ. ಆತ್ಮಸಾಕ್ಷಿ ಅನ್ನುವಂಥದ್ದು ಸಿದ್ದರಾಮಯ್ಯ ಅವರಿಗೆ ಎಲ್ಲಿದೆ ಎಂದು ಪ್ರಶ್ನೆ. ಆದ್ದರಿಂದ ಆ ಪ್ರಶ್ನೆ ಉದ್ಬವವಾಗಲ್ಲಾ. ಸಿದ್ದರಾಮಯ್ಯನವರಿಗೆ ಎಲ್ಲಾ ಗೊತ್ತಿದೆ. ಈ ರೀತಿ ಹೇಳಿಕೆ ಕೊಡೋದ್ರ ಮೂಲಕ ಪ್ರಚಾರಕ್ಕೆ ಪ್ರಯತ್ನ ಮಾಡುತ್ತಿದ್ದಾರೆ. ಇದರಿಂದ ಯಾವುದೇ ಉಪಯೋಗವಾಗಲ್ಲ. ನೂರಕ್ಕೆ ನೂರರಷ್ಟು‌ ಲೆಹರ್ ಸಿಂಗ್ ಸೇರಿ ನಮ್ಮ ಮೂರು ಅಭ್ಯರ್ಥಿಗಳು ಗೆಲ್ಲುತ್ತಾರೆ ಎಂದರು.

ವಿಜಯೇಂದ್ರ ಭವಿಷ್ಯದಲ್ಲಿ ಸಿಎಂ ಆಗೋ ಲಕ್ಷಣಗಳಿದ್ದಾವೆ ಎಂಬ ವಿಚಾರವಾಗಿ ಮಾತನಾಡಿದ ಅವರು, ನಾವು ಆ ಥರಾ ಮಾತನಾಡಿಲ್ಲಾ ಯಾರೋ ಅವರ ಸ್ನೇಹಿತರು ಆತ್ಮೀಯರು ಹೇಳಿದ್ದಾರೆ. ಅದಕ್ಕೆಲ್ಲಾ ನಾ ರಿಯಾಕ್ಷನ್ ಕೊಡಕಾಗೋದಿಲ್ಲಾ. ಒಳ್ಳೆಯ ಭವಿಷ್ಯವಿದೆ, ಕೆಲಸಾ ಮಾಡುತ್ತಿದ್ದಾನೆ. ಒಳ್ಳೆಯ ಕೆಲಸಾ ಮಾಡಿ ಮುಂದೆ ಬರ್ಲಿ ಎಂದು ಆಶಿಸ್ತೇನೆ ಎಂದು ಹೇಳಿದರು.

RELATED ARTICLES

Related Articles

TRENDING ARTICLES