Sunday, December 22, 2024

‘ಮಫ್ತಿ’ ಸಾರಥಿಗೆ ರಾಕಿಭಾಯ್ ಡೇಟ್ಸ್ ಕೊಟ್ಟಿದ್ಯಾಕೆ..?

ಇಡೀ ಭಾರತೀಯ ಚಿತ್ರರಂಗ ನಮ್ಮ ಹೆಮ್ಮೆಯ ಕನ್ನಡಿಗ ಯಶ್​ಗೆ ಸಲಾಂ ರಾಕಿಭಾಯ್ ಅಂತಿದೆ. ಇಂಟರ್​ನ್ಯಾಷನಲ್ ಲೆವೆಲ್​ನಲ್ಲಿ ರಾಕಿ ಹವಾ ಜೋರಿದೆ. ಆದ್ರೆ ಯಶ್​ರ ಮುಂದಿನ ಹೆಜ್ಜೆ ಮಾತ್ರ ಇಂದಿಗೂ ನಿಗೂಢ. ಸದ್ಯ ಮಫ್ತಿ ಸಾರಥಿ ಬಗ್ಗೆ ಯಶ್ ಮಾತನಾಡಿರೋ ವಿಡಿಯೋ ಸಖತ್ ವೈರಲ್ ಆಗ್ತಿದೆ. ಮಫ್ತಿ ಡೈರೆಕ್ಟರ್ ನರ್ತನ್ ಟ್ಯಾಲೆಂಟ್ ಹಾಗೂ ಅವ್ರಿಗೆ ಕೊಟ್ಟಿರೋ ಡೇಟ್ಸ್ ಬಗ್ಗೆ ನ್ಯಾಷನಲ್ ಸ್ಟಾರ್ ಹೇಳಿದ್ದೇನು ಅಂತೀರಾ..?

  1. ‘ಮಫ್ತಿ’ ಸಾರಥಿಗೆ ರಾಕಿಭಾಯ್ ಡೇಟ್ಸ್ ಕೊಟ್ಟಿದ್ಯಾಕೆ..?!
  2. ನರ್ತನ್ ಬರವಣಿಗೆ, ಟ್ಯಾಲೆಂಟ್​ಗೆ ಫಿದಾ ಆಗಿದ್ದ ಯಶ್

ಅವಕಾಶಗಳು ಸುಮ್ ಸುಮ್ನೆ ಇದ್ದಲ್ಲಿಗೆ ಹುಡುಕಿಕೊಂಡು ಬರಲ್ಲ. ಅದೃಷ್ಟ ಇರಬೇಕು. ಅದಕ್ಕಿಂತ ಹೆಚ್ಚಾಗಿ ಟ್ಯಾಲೆಂಟ್ ಇರಲೇಬೇಕು. ಗಡಿನಾಡು ಕರ್ನಾಟಕದ ಪ್ರತಿಭೆ, ಅಂದ್ರೆ ಬಾಗೇಪಲ್ಲಿಯ ವಿಲೇಜ್ ಟ್ಯಾಲೆಂಟ್ ಒಂದು ಇಡೀ ವಿಶ್ವವೇ ಮೆಚ್ಚಿದ ರಾಕಿಭಾಯ್ ಯಶ್ ಅವ್ರಿಗೆ ಌಕ್ಷನ್ ಕಟ್ ಹೇಳ್ತಿರೋದು ನಿಜಕ್ಕೂ ತಮಾಷೆಯ ಮಾತಲ್ಲ.

ಹಿ ಈಸ್ ನನ್ ಅದರ್ ದ್ಯಾನ್ ಮಫ್ತಿ ಡೈರೆಕ್ಟರ್ ನರ್ತನ್. ಕೆಲಸಗಾರರ ಬೆಲೆ ಮತ್ತೊಬ್ಬ ಕೆಲಸಗಾರನಿಗೆ ಮಾತ್ರ ಗೊತ್ತಾಗಲಿಕ್ಕೆ ಸಾಧ್ಯ. ಯಶ್ ಹಾಗೂ ನರ್ತನ್ ವಿಚಾರದಲ್ಲೂ ಅದೇ ಆಯ್ತು. ಸಿನಿಮಾಗಾಗಿ ಹಗಲಿರುಳು ಕನಸು ಕಾಣೋ ಸಿನಿಸಂತ ಯಶ್​ ನಿಜಕ್ಕೂ ಮಿಸ್ಟರ್ ಪರ್ಫೆಕ್ಷನಿಸ್ಟ್. ಕೆಜಿಎಫ್ ಅಂತಹ ಸಿನಿಮಾ ಆಗಿ ಅದು ಇಂಟರ್​ನ್ಯಾಷನಲ್ ಲೆವೆಲ್​ನಲ್ಲಿ ರೆಕಗ್ನೈಸ್ ಆಗುತ್ತೆ ಅಂದ್ರೆ ಅದಕ್ಕೆ ಪ್ರಮುಖ ಕಾರಣ ಯಶ್.

ಕೆಜಿಎಫ್ ಕೋ ಡೈರೆಕ್ಟರ್ ಆಗಿದ್ದ ನರ್ತನ್, ಅದಕ್ಕೂ ಮುನ್ನ ರಾಕಿಂಗ್ ಸ್ಟಾರ್ ಯಶ್​ರ ಮಾಸ್ಟರ್​ಪೀಸ್ ಚಿತ್ರಕ್ಕೂ ವರ್ಕ್​ ಮಾಡಿದ್ದಾರೆ. ಅಟೆನ್ಷನ್ ಪ್ಲೀಸ್ ಅನ್ನೋ ಹೀರೋ ಇಂಟ್ರಡಕ್ಷನ್ ಸಾಂಗ್ ಹಾಗೂ ಐ ಕಾಂಟ್ ವೆಯ್ಟ್ ಬೇಬಿ ಅನ್ನೋ ಎರಡು ಬ್ಲಾಕ್ ಬಸ್ಟರ್ ಹಿಟ್ ಸಾಂಗ್ಸ್ ಬರೆದ ಸಾಹಿತಿ ಇದೇ ನರ್ತನ್. ಅಂದು ನರ್ತನ್​ರಲ್ಲಿ ಇದ್ದ ಟ್ಯಾಲೆಂಟ್ ಗುರ್ತಿಸಿ, ಮುಂದೆ ನೀನೊಬ್ಬ ಒಳ್ಳೆ ಡೈರೆಕ್ಟರ್ ಆಗ್ತೀಯಾ ಅಂತ ಭವಿಷ್ಯ ನುಡಿದಿದ್ರು, ಜೊತೆಗೆ ಡೇಟ್ಸ್ ಕೊಡ್ತೀನಿ ಅಂದಿದ್ರು ಯಶ್.

ಮಫ್ತಿ ನಂತ್ರ ಸ್ಟೋರಿಲೈನ್ ಇಟ್ಕೊಂಡು ಯಶ್ ಬಳಿ ಬಂದ ನರ್ತನ್​ಗೆ, ಇಡೀ ಸಿನಿದುನಿಯಾ ಸಲಾಂ ಹೇಳ್ತಿರೋ ರಾಕಿಭಾಯ್, ಕೊಟ್ಟ ಮಾತಿನಂತೆ ಯೆಸ್ ಸಿನಿಮಾ ಮಾಡೋಣ ಅಂತ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ. ಸದ್ಯದಲ್ಲೇ ನರ್ತನ್ ಌಕ್ಷನ್ ಕಟ್ ಹೇಳೋ ಚಿತ್ರದ ಡಿಟೈಲ್ಸ್ ಕೂಡ ರಿವೀಲ್ ಆಗಲಿವೆ. ಟ್ಯಾಲೆಂಟ್ಸ್​ನ ಹೆಕ್ಕೋದ್ರಲ್ಲಿ ಯಶ್​ ಮಾಸ್ಟರ್​​ಮೈಂಡ್ ಅನ್ನೋದು ಇದ್ರಿಂದ ಮತ್ತೊಮ್ಮೆ ಪ್ರೂವ್ ಆಗಿದೆ.

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಪವರ್ ಟಿವಿ

RELATED ARTICLES

Related Articles

TRENDING ARTICLES