Monday, January 20, 2025

ಸಿಲಿಕಾನ್​ ಸಿಟಿಯಲ್ಲಿ ಶಂಕಿತ ಉಗ್ರ ತಾಲಿಬ್ ಹುಸೇನ್ ಬಂಧನ

ಬೆಂಗಳೂರು: ಉಗ್ರ ಕೃತ್ಯಗಳಲ್ಲಿ ಭಾಗಿಯಾಗಿರೋ ಆರೋಪದಲ್ಲಿ ಶಂಕಿತ ಉಗ್ರ ತಾಲಿಬ್ ಹುಸೇನ್​ನನ್ನು ಜಮ್ಮು ಕಾಶ್ಮೀರ ಪೊಲೀಸರು ಬಂಧಿಸಿದ್ದಾರೆ.

ತಾಲಿಬ್ ಹುಸೇನ್ (38) ರನ್ನು ವಶಕ್ಕೆ ಪಡೆದು ಕರೆದುಕೊಂಡು ಹೋಗಿದ್ದ ಪೊಲೀಸರು. ಬೆಂಗಳೂರಲ್ಲಿ ತಾಲಿಕ್ ಎಂದು ಹೆಸರು ಬದಲಿಸಿ ಓಡಾಡ್ತಿದ್ದ. ಬಿಎನ್ಎಲ್ ಏರ್ ಸರ್ವಿಸ್ ಲೋಡಿಂಗ್ ಅನ್ ಲೋಡಿಂಗ್ ಕೆಲಸ ಮಾಡಿಕೊಂಡಿದ್ದ. ಹಾಗೆನೇ ಜಮ್ಮು ಮತ್ತು ಕಾಶ್ಮೀರದಲ್ಲಿ ಪೊಲೀಸ್ ಪತ್ನಿಯನ್ನೇ ಕರೆದುಕೊಂಡು ಬಂದಿದ್ದ.

ಅದಲ್ಲದೇ, ಪತ್ನಿ ಮತ್ತು 3 ಜನ ಮಕ್ಕಳ ಜೊತೆಗೆ ವಾಸವಿದ್ದ ಈತ ಓಕಳಿಪುರಂ ಮಸೀದಿ ಮುಖ್ಯಸ್ಥ ಅನ್ವರ್ ಪಾಷ ಆಶ್ರಯ ನೀಡಿದ್ದಾರೆ. ಮಸೀದಿಯಲ್ಲಿ ಪಾಠ ಪ್ರವಚನ ಮಾಡುತ್ತಿದ್ದ ಅನ್ನೋ ಶಂಕೆಯಿದ್ದು, ಎಂಟತ್ತು ವರ್ಷಗಳ ಹಿಂದೆ ನಗರಕ್ಕೆ ಬಂದಿದ್ದ ತಾಲಿಬ್ ಹುಸೇನ್. ರೈಲು ನಿಲ್ದಾಣದಲ್ಲಿ ಕೆಲಸ ಮಾಡುತ್ತ ಅಲ್ಲೆ ಮಲಗುತ್ತಿದ್ದ. ಬಳಿಕ ಓಕಳಿಪುರಂ ಬಳಿ ಪಾರ್ಸೆಲ್ ಹಾಕುವ ಕೆಲಸ ಮಾಡುತ್ತಿದ್ದ. ಆಗ ಸುತ್ತಮುತ್ತಲಿನ ಜನ ಪರಿಚಯವಾಗಿದ್ರು ನಂತರ ಜಮ್ಮುಗೆ ಹೋಗಿ ಮದುವೆಯಾಗಿ ವಾಪಸ್ ಬಂದಿದ್ದ.

ಇನ್ನು, ನಾಲ್ಕನೇ ಕ್ರಾಸ್ ನಲ್ಲಿ ಬಾಡಿಗೆ ಮನೆ ಮಾಡಿಕೊಂಡು ಪತ್ನಿ ಮಕ್ಕಳ ಜೊತೆ ವಾಸ‌. ಉಗ್ರ ಕೃತ್ಯಗಳಲ್ಲಿ ಭಾಗಿಯಾಗಿರೋ ಆರೋಪದಲ್ಲಿ ವಶಕ್ಕೆ ಪಡೆದಿರೋ ಜಮ್ಮು ಕಾಶ್ಮೀರ ಪೊಲೀಸರು. ಭಾರಿ ಬಂದೋಬಸ್ತ್ ನಲ್ಲಿ ತಾಲಿಬ್ ಹುಸೇನ್ ನನ್ನ ವಶಕ್ಕೆ ಪಡೆದು ಪೊಲೀಸರು ಕರೆದೊಯ್ದಿದ್ದಾರೆ. ನಗರದಲ್ಲಿ ಲೋಡಿಂಗ್ ಅನ್‌ ಲೋಡಿಂಗ್ ಕೆಲಸ ಮಾಡುತ್ತಿದ್ದಾಗಿ ಹೇಳಿಕೊಂಡಿರೋ ಅಸಾಮಿ. ನಗರದ ಶ್ರೀರಾಮಪುರ ಠಾಣಾ ವ್ಯಾಪ್ತಿಯಲ್ಲಿ ನೆಲೆಸಿದ್ದ ಶಂಕಿತ ಉಗ್ರನನ್ನು ಜಮ್ಮು ಪೊಲೀಸರು ಮತ್ತು ಭದ್ರತಾ ಪಡೆಗಳ ಜಂಟಿ ಕಾರ್ಯಾಚರಣೆ ನಡೆಸಿ ಈತನನ್ನು ಸೆರೆ ಹಿಡಿದಿದ್ದಾರೆ.

RELATED ARTICLES

Related Articles

TRENDING ARTICLES