Monday, December 23, 2024

ಮೋದಿ ಪ್ರಧಾನಿ ಆದ್ಮೇಲೆ ದೇಶ ಆರ್ಥಿಕವಾಗಿ 20 ವರ್ಷ ಹಿಂದೆ ಹೋಗಿದೆ : ಸಿದ್ದರಾಮಯ್ಯ

ಬೆಳಗಾವಿ : ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಅಪ್ರಬುದ್ಧ ರಾಜಕಾರಣಿ, ಬಾಯಿಗೆ ಬಂದಂತೆ ಹೇಳಿಕೆಗಳನ್ನು ನೀಡುತ್ತಾರೆ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದ್ದಾರೆ.

ವಾಯವ್ಯ ಪದವೀಧರ, ಶಿಕ್ಷಕರ ಚುನಾವಣೆ ಹಿನ್ನೆಲೆ ಬೆಳಗಾವಿಯ ಮರಾಠ ಮಂಡಳದಲ್ಲಿ ಕಾಂಗ್ರೆಸ್ ಪ್ರಚಾರ ಸಭೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಟೀಲ್ ಬಿಜೆಪಿ ರಾಜ್ಯಾಧ್ಯಕ್ಷನಾಗಲು ನಾಲಾಯಕ್, ಅಪ್ರಬುದ್ಧ ರಾಜಕಾರಣಿಗೆ ಪಕ್ಷದ ಅಧ್ಯಕ್ಷ ಸ್ಥಾನ ನೀಡಲಾಗಿರುವುದೇ ದುರಂತ. ಅವರ ಹೇಳಿಕೆಯನ್ನು ಗಂಭೀರವಾಗಿ ಪರಿಗಣಿಸಬೇಕಿಲ್ಲ ಎಂದು ಹೇಳಿದರು.

ಇದೇ ವೇಳೆ ಜೂನ್ 10ರಂದು ರಾಜ್ಯಸಭಾ ಚುನಾವಣೆ ಹಿನ್ನೆಲೆಯಲ್ಲಿ ಪ್ರಧಾನಿ ಮೋದಿ ಕೆಲಸ ನೋಡಿ ಮತ ಹಾಕುತ್ತಾರೆ ಎಂಬ ಮಾಜಿ ಸಿಎಂ ಬಿಎಸ್ ವೈ ಹೇಳಿಕೆಗೆ ತಿರುಗೇಟು ನೀಡಿದ್ದಾರೆ.

ಬಿಜೆಪಿಯವರಿಗೆ ಯಾಕೆ ವೋಟ್ ಹಾಕಬೇಕು? ಏನು ಮಾಡಿದ್ದಾರೆ ಎಂದು ವೋಟ್ ಹಾಕಬೇಕು? ಪೆಟ್ರೋಲ್, ಡೀಸೆಲ್, ಗ್ಯಾಸ್ ದರ ಏರಿಕೆಯಾಗಿದೆ. ನೋಟ್ ಬ್ಯಾನ್, ಜಿಎಸ್​​ಟಿಯಿಂದ ದೇಶದ ಆರ್ಥಿಕತೆಯೇ ನಾಶವಾಗಿದೆ. ಅಲ್ಲದೇ  ಮೋದಿ ಅವರು ಪ್ರಧಾನಿ ಆದಮೇಲೆ ದೇಶ ಆರ್ಥಿಕವಾಗಿ ಇಪ್ಪತ್ತು ವರ್ಷ ಹಿಂದೆ ಹೋಗಿದೆ. ರಾಜ್ಯ ಹತ್ತು ವರ್ಷ ಆರ್ಥಿಕವಾಗಿ ಹಿಂದೆ ಹೋಗಿದೆ. ಮುಂದೇನು ಅವರ ಕೈಯಲ್ಲಿ ಅಧಿಕಾರ ಕೊಟ್ಟರೆ ಸರಿ ಮಾಡದಷ್ಟು ದೇಶ ಹಾಳಾಗುತ್ತದೆ ಎಂದು ಕಿಡಿಕಾಡಿದರು.

ಹೀಗಾಗಿ ಬಿಜೆಪಿ ಅಭ್ಯರ್ಥಿಗೆ ಓಟ್ ಹಾಕಬೇಡಿ ಕಾಂಗ್ರೆಸ್ ಅಭ್ಯರ್ಥಿಗಳಾದ ಪ್ರಕಾಶ್ ಹುಕ್ಕೇರಿ ಮತ್ತು ಸುನೀಲ್ ಸಂಕ್​​​​ಗೆ ಮತ ನೀಡಿ ಎಂದು ಪ್ರಚಾರ ಸಭೆಯಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿಕೆ ನೀಡಿದ್ದಾರೆ.

RELATED ARTICLES

Related Articles

TRENDING ARTICLES