Friday, November 22, 2024

ಜೂನ್ 10 ರಂದು ನಡೆಯಲಿದೆ ರಾಜ್ಯಸಭೆ ಎಲೆಕ್ಷನ್..!

ಬೆಂಗಳೂರು : ರಾಜ್ಯ ವಿಧಾನಸಭೆಯಿಂದ ರಾಜ್ಯಸಭೆಯ ನಾಲ್ಕು ಸ್ಥಾನಗಳಿಗೆ ಚುನಾವಣೆ ಎದುರಾಗಿದೆ. ಈ ಬಾರಿ ಚುನಾವಣೆ ನಡೆಯಲ್ಲ ನಾಲ್ಕೂ ಸ್ಥಾನಗಳಿಗೆ ಅವಿರೋಧ ಆಯ್ಕೆಯಾಗಲಿದೆ ಎಂಬ ನಿರೀಕ್ಷೆಗಳಿದ್ವು. ಎರಡು ಬಿಜೆಪಿ,ಒಂದು ಕಾಂಗ್ರೆಸ್ ಇನ್ನುಳಿದ ಒಂದನ್ನ ಜೆಡಿಎಸ್ ತನ್ನದಾಗಿಸಿಕೊಳ್ಳಲಿದೆ ಎಂಬ ಮಾತುಗಳಿದ್ವು. ಯಾಕಂದ್ರೆ ಬಿಜೆಪಿಯ ನಿರ್ಮಲಾ ಸೀತಾರಾಮನ್, ಜಗ್ಗೇಶ್ ಹಾಗೂ ಕಾಂಗ್ರೆಸ್ ನ ಜೈರಾಂ ರಮೇಶ್ ಗೆಲ್ಲೋಕೆ ಬಹುಮತವಿತ್ತು. ಆದ್ರೆ ಉಳಿದ ಒಂದು ಸ್ಥಾನ ಗೆಲ್ಲೋಕೆ ಮೂರು ಪಕ್ಷಗಳಲ್ಲೂ ಸಂಖ್ಯಾಬಲವಿರಲಿಲ್ಲ. ಆದ್ರೂ ಜೆಡಿಎಸ್ ನಾಯಕರು ಕಾಂಗ್ರೆಸ್ ಬೆಂಬಲದ ನಿರೀಕ್ಷೆಯಿಂದ ಕುಪೇಂದ್ರ ರೆಡ್ಡಿ ಕಣಕ್ಕಿಳಿಸೋಕೆ ನಿರ್ಧರಿಸಿದ್ರು. ಆದ್ರೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ರಾತ್ರೋರಾತ್ರಿ ಮನ್ಸೂರ್ ಅಲಿಖಾನ್ ಅವರನ್ನ ಕಣಕ್ಕಿಳಿಸಿ ದಳಪತಿಗಳ ನಡೆಯನ್ನೇ ಉಲ್ಟಾ ಮಾಡಿದ್ರು. ಇದಾದ ನಂತ್ರವೂ ದೊಡ್ಡಗೌಡರು ಮಲ್ಲಿಕಾರ್ಜುನ ಖರ್ಗೆಯವರನ್ನ ಮುಂದೆ ಬಿಟ್ಟು ಕಾಂಗ್ರೆಸ್ ಹೈಕಮಾಂಡ್ ಮೇಲೆ ಒತ್ತಡ ತರುವ ಪ್ರಯತ್ನ ನಡೆಸಿದ್ರು. ಆದ್ರೆ ಅದು ಫಲ ಕೊಡಲಿಲ್ಲ. ನಿನ್ನೆ ನಾಮಪತ್ರವನ್ನ ಯಾರೂ ವಾಪಸ್ ಪಡೆಯದ ಹಿನ್ನೆಲೆ ಎಲ್ಲಾ ಆರು ಮಂದಿ ಕಣದಲ್ಲಿ ಉಳಿದಿದ್ದಾರೆ. ಹೀಗಾಗಿ ಜೂನ್ ೧೦ ರಂದು ಚುನಾವಣೆ ನಡೆಯುವುದು ಕನ್ಫರ್ಮ್ ಆಗಿದೆ. ನಾಲ್ಕನೇ ಅಭ್ಯರ್ಥಿಯ ಆಯ್ಕೆ ನಿಗೂಢವಾಗಿದೆ.

ತಮ್ಮ ಅಭ್ಯರ್ಥಿ ಗೆಲ್ಲಿಸಿಕೊಳ್ಳೋಕೆ ದೊಡ್ಡಗೌಡರ ಪ್ರಯತ್ನ ಇನ್ನೂ ಮುಂದುವರೆದಿದೆ. ಕಾಂಗ್ರೆಸ್ ಬೆಂಬಲ ಗಿಟ್ಟಿಸೋಕೆ ತಮ್ಮ ರಾಜಕೀಯ ಅನುಭವಗಳನ್ನೆಲ್ಲ ಬಳಸ್ತಿದ್ದಾರೆ. ಜೂನ್ ೧೦ ರಂದು ಚುನಾವಣೆ ನಡೆಯಲಿದ್ದು,ಕೊನೆಯ ಕ್ಷಣದವರೆಗೂ ಹೋರಾಡೋಕೆ ನಿರ್ಧರಿಸಿದ್ದಾರೆ. ಜೊತೆಗೆ ಕುಪೇಂದ್ರ ರೆಡ್ಡಿಯ ವೈಯುಕ್ತಿಕ ವರ್ಚಸ್ಸನ್ನ ಪಣಕ್ಕೊಡ್ಡಿದ್ದಾರೆ. ಹೀಗಾಗಿ ಕೊನೆಯ ಕ್ಷಣದಲ್ಲಿ ಏನು ಬೇಕಾದ್ರೂ ಆಗಬಹುದು ಅನ್ನೋ ಮಾತುಗಳು ಕೇಳಿಬರ್ತಿವೆ. ಆದ್ರೆ ಸಿದ್ದರಾಮಯ್ಯ ಮಾತ್ರ ಯಾವುದೇ ಕಾರಣಕ್ಕೂ ಜೆಡಿಎಸ್ ಬೆಂಬಲಿಸಲ್ಲ ಅಂತ ಪಟ್ಟು ಹಿಡಿದಿದ್ದಾರೆ. ಹೀಗಾಗಿ ಚುನಾವಣೆ ರೋಚಕ ಘಟ್ಟದತ್ತ ಸಾಗಿದೆ.

ಕಾಂಗ್ರೆಸ್ ಅಡ್ಡ ಮತದಾನವಾಗಬಹುದು. ಕೆಲವು ಜೆಡಿಎಸ್ ಮತಗಳು ಬರಬಹುದು ಎಂಬ ನಿರೀಕ್ಷೆಯಲ್ಲಿದೆ. ಇದ್ರಿಂದ ಮೊದಲ ಪ್ರಾಶಸ್ತ್ಯದ ಮತಗಳು ಹೆಚ್ಚಿದರೆ ನಾವು ಗೆಲ್ಲಬಹುದೆಂಬ ಲೆಕ್ಕಾಚಾರದಲ್ಲಿದೆ. ಜೆಡಿಎಸ್ ಒಬ್ಬೊಬ್ಬ ಶಾಸಕರನ್ನೂ ಸೆಳೆಯುವ ಪ್ರಯತ್ನ ಮುಂದುವರೆಸಿದೆ.ಇದ್ರ ನಡುವೆ ಬಿಜೆಪಿ ಕೂಡ ಕಾಂಗ್ರೆಸ್,ಜೆಡಿಎಸ್ ನಾಯಕರ ನಡೆಯ ಮೇಲೆ ಗಮನಹರಿಸಿದೆ. ಅಡ್ಡ ಮತದಾನವಾಗದಂತೆ ನೋಡಿಕೊಂಡ್ರೆ ನಾವು ಸೆಕೆಂಡ್ ಪ್ರಿಪರೆನ್ಸ್ ಮತಗಳಿಂದ ಸುಲಭವಾಗಿ ಗೆಲ್ಲಬಹುದೆಂಬ ಅಂದಾಜಿನಲ್ಲಿದೆ.

ಒಟ್ಟಿನಲ್ಲಿ ರಾಜ್ಯಸಭೆ ಎಲೆಕ್ಷನ್ ಕುತೂಹಲ ಘಟ್ಟದತ್ತ ಸಾಗಿದೆ.. ಯಾರ್ ಗೆಲ್ತಾರೆ ಯಾರ್ ಸೋಲ್ತಾರೆ ಅನ್ನೋದನ್ನ ಜಡ್ಜ್ ಮಾಡೋದಕ್ಕೂ ಸಾಧ್ಯವಾಗ್ತಿಲ್ಲ. ಹಾಗಾಗಿ ಜೂನ್ ೧೦ ರಂದೇ ಇದಕ್ಕೆಲ್ಲ ಫುಲ್ ಸ್ಟಾಪ್ ಬೀಳಲಿದೆ.

ರಾಘವೇಂದ್ರ ವಿಎನ್ ಪೊಲಿಟಿಕಲ್ ಬ್ಯೂರೋ ಪವರ್ ಟಿವಿ ಬೆಂಗಳೂರು…

RELATED ARTICLES

Related Articles

TRENDING ARTICLES