Monday, December 23, 2024

ಚಿಟ್ಟೆ ಮತ್ತು ಪೆಂಗ್ವಿನ್ ಕ್ಯೂಟ್ ಫ್ರೆಂಡ್‌ಶಿಪ್‌

ಪ್ರಾಣಿಗಳ ಜಗತ್ತೇ ಅದ್ಭುತ. ಮಕ್ಕಳಂತೆ ಪರಿಶುದ್ಧವಾದ ಮನಸ್ಸು ಪ್ರಾಣಿಗಳದ್ದು. ಅಂತಹದ್ದೇ ಒಂದು ವಿಡಿಯೋ ಈಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ಮುದ್ದು ಮುದ್ದಾಗಿರೋ ಈ ಪೆಂಗ್ವಿನ್‌ಗಳು ಆಟ ಆಡೋ ಪರಿ ಹೇಗಿದೆ ನೋಡಿ. ಈ ರೀತಿ ಗುಂಪು ಗುಂಪಾಗಿರೋ ಪೆಂಗ್ವಿನ್‌ಗಳನ್ನ ‘ವಾಡೆಲ್’ ಅಂತ ಅನ್ನಲಾಗುತ್ತಿದೆ. ಈ ‘ವಾಡೆಲ್’ ಪೆಂಗ್ವಿನ್‌ಗಳು ಹೇಗೆ ಕುಣಿದು ಕುಪ್ಪಳಿಸ್ತಿವೆ ನೋಡಿದ್ರಾ, ಅಸಲಿಗೆ ಅವು ಹೀಗೆ ಖುಷಿಯಿಂದ ಕುಣಿಯುತ್ತಾ ಕುಪ್ಪಳಿಸುತ್ತಿರೋದು ಒಂದು ಚಿಟ್ಟೆಗಾಗಿ. ಅಲ್ಲಿ ಒಂದು ಚಿಟ್ಟೆ ಹಾರಿ ಬಂದಿತ್ತು, ಅದು ಬಂದಿದ್ದೇ ತಡ ಪೆಂಗ್ವಿನ್‌ಗಳಿಗೆ ಖುಷಿಯೋ ಖುಷಿ. ಆ ಚಿಟ್ಟೆಯನ್ನ ಹಿಡಿಯೋ ಹುರುಪು ಪೆಂಗ್ವಿನ್‌ಗಳಿಗೆ. ಈ ರೀತಿ ಚಿಟ್ಟೆಯ ಹಿಂದೆ ಬಿದ್ದು ಓಡುತ್ತಿರುವ ವಿಡಿಯೋ ನಿಜಕ್ಕೂ ಅದ್ಭುತವಾಗಿದೆ.

RELATED ARTICLES

Related Articles

TRENDING ARTICLES