Saturday, November 23, 2024

ರಾಜ್ಯಕ್ಕೆ‌ ಕೊರೋನಾ ನಾಲ್ಕನೇ ಅಲೆ ಭೀತಿ

ಬೆಂಗಳೂರು :ಅಂತೂ ಇಂತೂ ಎಲ್ಲಾ ಬ್ಯಾಕ್ ಟು ನಾರ್ಮಲ್ ಅಂತ ಜನ ರಿಲ್ಯಾಕ್ಸ್ ಆಗಿದ್ರು . ಆದ್ರೆ, ಈಗ ಮತ್ತೆ
ಕಳೆದ ಒಂದು ವಾರದಿಂದ ರಾಜ್ಯದಲ್ಲಿ ಕೊವಿಡ್ ಪ್ರಕರಣಗಳು ಏರಿಕೆಯಾಗ್ತಿದೆ. ಮತ್ತೊಂದು ಕಡೆ ದೇಶಕ್ಕೆ ಮಂಕಿ ಪಾಕ್ಸ್ ಆತಂಕ ಜಾಸ್ತಿ ಆಗಿದೆ. ಹೀಗಾಗಿ ಆರೋಗ್ಯ ಇಲಾಖೆ ಫುಲ್ ಅಲರ್ಟ್ ಆಗಿದ್ದು, ಮತ್ತೆ ಕಟ್ಟೆಚ್ಚರ ವಹಿಸಿದೆ.

ಕಳೆದ ಒಂದು ವಾರದಿಂದ ರಾಜ್ಯದಲ್ಲಿ ಕೋವಿಡ್ ಪ್ರಕರಣಗಳು ಏರಿಕೆ ಹಿನ್ನೆಲೆಯಲ್ಲಿ ಆರೋಗ್ಯ ಇಲಾಖೆ ಅಲರ್ಟ್ ಆಗಿದೆ. ಕೋವಿಡ್-19 ಪ್ರಕರಣಗಳಲ್ಲಿ ಕೊಂಚ ಏರಿಕೆ ಹಾಗೂ ಜೂನ್ ಕೊನೆಗೆ 4 ನೇ ಅಲೆ ಆತಂಕ ಇರುವುದರಿಂದ ಮತ್ತೆ ಫುಲ್ ಅಲರ್ಟ್ ಆಗಿ ಸಭೆ ನಡೆಸಿದೆ . ಈ ಸಭೆಯಲ್ಲಿ ಮತ್ತೆ ಹಲವು ನಿಯಮಗಳನ್ನು ಜಾರಿ ಮಾಡಿದೆ.

ಮತ್ತೆ ರಾಜ್ಯದಲ್ಲಿ ಕೊರೋನಾ ರೂಲ್ಸ್ :

1 .ಮತ್ತೆ ಸಾರ್ವಜನಿಕ ಸ್ಥಳಗಳಲ್ಲಿ‌ ಮಾಸ್ಕ್ ಕಡ್ಡಾಯ.

2.ಮಾಲ್, ಥಿಯೇಟರ್, ಶಾಪಿಂಗ್ ಕಾಂಪ್ಲೆಕ್ಸ್, ಸಾರ್ವಜನಿಕ ಸ್ಥಳಗಳಲ್ಲಿ ಮಾಸ್ಕ್

3.ಟೆಸ್ಟಿಂಗ್ ಪ್ರಮಾಣ 30 ಸಾವಿರ ಹೆಚ್ಚಳಕ್ಕೆ ಸೂಚನೆ

4. ಜೀನೊಮ್ ಸೀಕ್ವೆನ್ಸಿಂಗ್ ನಿರಂತರ ಸೂಚನೆ

ಕೊವಿಡ್ ಜಾಸ್ತಿಯಾದ ಹಿನ್ನೆಲೆ ಮಾರ್ಷಲ್​ಗಳು ಮಾಸ್ಕ್ ‌ಕಡ್ಡಾಯ ಪಾಲಿಸುವ ಕುರಿತು ಪರಿಶೀಲಿಸುತ್ತಿರಬೇಕು, ಸದ್ಯಕ್ಕೆ ಮಾಸ್ಕ್ ದಂಡದ ಬಗ್ಗೆ ಯಾವುದೇ ತೀರ್ಮಾನ ತೆಗೆದುಕೊಂಡಿಲ್ಲ ಕೊರೋನಾ ನಿಯಮ ಗಂಭೀರವಾಗಿ ಪರಿಗಣಿಸಬೇಕೆಂದು ಆರೋಗ್ಯ ಇಲಾಖೆ ಆಯುಕ್ತ ಡಿ. ರಂದೀಪ್ ತಿಳಿಸಿದ್ದಾರೆ.

ಇತ್ತ ಮತ್ತೊಂದೆ ಕಡೆ ಜನರು ಈಗ ಮತ್ತೇ ಮಂಕಿಪಾಕ್ಸ್ ಸೋಂಕಿಗೆ ತಲೆ ಬಿಸಿ ಮಾಡಿಕೊಂಡಿದ್ದಾರೆ, ಮಂಕಿಪಾಕ್ಸ್ ಸೋಂಕಿನ ಆಂತಕ ಹೆಚ್ಚಾಗಿದ್ದು ಆರೋಗ್ಯ ಇಲಾಖೆಯಿಂದ ಜಿಲ್ಲಾಸ್ಪತ್ರೆಗಳಿಗೆ ಹೊಸ ಆದೇಶವನ್ನು ನೀಡಲಾಗಿದೆ . ವಿದೇಶಗಳಲ್ಲಿ ಹರಡುತ್ತಿದ್ದ ಮಂಕಿಪಾಕ್ಸ್ ಭಾರತಕ್ಕೂ ಕಾಲಿಟಿದ್ದಿಯಾ ಎಂಬ ಶಂಕೆ, ಆತಂಕ ಎದುರಾಗಿದೆ, ಈ ನಿಟ್ಟಿನಲ್ಲಿ ರಾಜ್ಯ ಸರಕಾರ ಎಲ್ಲಾ ಜಿಲ್ಲಾಸ್ಪತ್ರೆಗಳಿಗೆ ಹೊಸ ಆದೇಶ ನೀಡಿದ್ದು, ಪ್ರಕರಣಗಳು ವರದಿಯಾದಾಗ ಚಿಕಿತ್ಸೆ ನೀಡಲು ಬೆಡ್‍ಗಳನ್ನು ಮೀಸಲಿಡಬೇಕು ಎಂದು ಆದೇಶಿಸಿದ್ದಾರೆ. ಶಂಕಿತ ಪ್ರಕರಣಗಳು ವರದಿಯಾದರೆ ಬೆಂಗಳೂರಿನ ಇಂದಿರಾನಗರದ ಸಾಂಕ್ರಾಮಿಕ ರೋಗ ಆಸ್ಪತ್ರೆ ಮತ್ತು ಮಂಗಳೂರಿನ ವೆನ್ಲಾಕ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲು ಸೂಚಿಸಲಾಗಿದೆ.

ಒಟ್ಟಿನಲ್ಲಿ ಸದ್ಯ ರಾಜ್ಯದ ಹಾಗೂ ದೇಶದ ಪರಿಸ್ಥಿತಿ ಹೇಗಾಗಿದೆ ಅಂದ್ರೆ ಹೋದ್ಯಾ ಪಿಶಾಚಿ ಅಂದ್ರೆ ಬಂದೆ ಗವಾಕ್ಷೀಲಿ ಅನ್ನೋ ಹಾಗೆ ಒಂದಲ್ಲದ ಒಂದು ರೋಗ ವಕ್ಕರಿಸುತ್ತಿದೆ.

ಸ್ವಾತಿ ಪುಲಗಂಟಿ ಮೆಟ್ರೋ ಬ್ಯುರೋ ಬೆಂಗಳೂರು

RELATED ARTICLES

Related Articles

TRENDING ARTICLES