Monday, December 23, 2024

ಪ್ರೀತಿಗಾಗಿ ಒಂದೇ ಕುಟುಂಬದ ಇಬ್ಬರ ಸಾವು

ಬೆಂಗಳೂರು : ಪ್ರೀತಿಸಿದವಳು‌ ಮದುವೆ ಆಗಲು ನಿರಾಕರಿಸಿದ ಹಿನ್ನೆಲೆ ಯುವಕ ಆತ್ಮಹತ್ಯೆ ಮಾಡಿಕೊಂಡಿರೋ ಘಟನೆ ಬೆಂಗಳೂರಿನ ಚಾಮುಂಡೇಶ್ವರಿ ಲೇಔಟ್​​​​​​​​​​​​​​ ಬಳಿ ನಡೆದಿದೆ.

ಚರಣ್ (25) ಎಂಬಾತ ಆತ್ಮಹತ್ಯೆ ಮಾಡಿಕೊಂಡ ದುರ್ದೈವಿ ಎಂದು ತಿಳಿದು ಬಂದಿದೆ. ಕಳೆದ ಮೂರು ನಾಲ್ಕು ವರ್ಷಗಳ ಹಿಂದೆ, ತನ್ನ ಜೊತೆಗೆ ಕೆಲಸ ಮಾಡುತ್ತಿದ್ದ ಯುವತಿಯನ್ನ ಪ್ರೀತಿಸುತ್ತಿದ್ದ. ಅಲ್ಲದೆ ಮದುವೆಯಾಗೋದಾಗಿ ಯುವತಿ ಒಪ್ಪಿಗೆಯನ್ನು ಕೂಡ ನೀಡಿದ್ದಳು. ಯುವತಿ ಒಪ್ಪಿಗೆ ಹಿನ್ನೆಲೆ ಮದುವೆಯಾಗಲೆಂದು ಜೋಡಿ ಧರ್ಮಸ್ಥಳಕ್ಕೆ ತೆರಳಿತ್ತು. ಆದ್ರೆ ಧರ್ಮಸ್ಥಳದಲ್ಲಿ ಯುವತಿ ಏಕಾಏಕಿ ಮದ್ವೆಗೆ ನಿರಾಕರಿಸಿದ್ದಳು.

ಯುವಕ ಎಷ್ಟೇ ಕೇಳಿದರೂ ಮದುವೆಯಾಗುವುದಿಲ್ಲವೆಂದು ಯುವತಿ ಹೇಳಿ ಬಿಟ್ಟು ಹೋಗಿದ್ದಳು. ಹೀಗಾಗಿ ನೊಂದ ಯುವಕ ಮನೆಗೆ ಬಂದು ಆತ್ಮಹತ್ಯೆಗೆ ಶರಣಾಗಿದ್ದಾನೆ. ಅಲ್ಲದೆ ಇದೇ ವಿಚಾರವಾಗಿ ಕಳೆದ ಮೂರು ವರ್ಷದ ಹಿಂದೆ ನೊಂದ ಯುವಕ ರೈಲ್ವೆ ಟ್ರಾಕ್​​ನಲ್ಲಿ ಆತ್ಮಹತ್ಯೆಗೆ ಯತ್ನಿಸಿದ್ದ. ಆ ವೇಳೆ ಅಲ್ಲೇ ಇದ್ದಂತಹ ಸ್ನೇಹಿತರಿಂದ ಚರಣ್ ಬಚಾವ್​​ ಆಗಿದ್ದ.

ಇನ್ನು ದುರಾದೃಷ್ಟವೆಂದರೆ ಕಳೆದ ವರ್ಷ ಚರಣ್ ಸಹೋದರಿ ಪ್ರೀತಿ ಸಿಗಲಿಲ್ಲ ಎಂದು ಆತ್ಮಹತ್ಯೆ ಮಾಡಿಕೊಂಡಿದ್ದಳು. ಈಗ ಸಹೋದರ ಚರಣ್ ಕೂಡ ಪ್ರೀತಿ ಸಿಗಲಿಲ್ಲ ಎಂದು ಆತ್ಮಹತ್ಯೆಗೆ ಶರಣಾಗಿದ್ದಾನೆ.

ಸದ್ಯ ಸ್ಥಳಕ್ಕೆ ವಿದ್ಯಾರಣ್ಯಪುರ ಪೊಲೀಸ್ ಭೇಟಿ ಪರಿಶೀಲನೆ ನಡೆಸಿ, ಠಾಣೆಯಲ್ಲಿ ಈ ಕುರಿತು ಪ್ರಕರಣ ದಾಖಲು ಮಾಡಿಕೊಂಡಿದ್ದಾರೆ.

RELATED ARTICLES

Related Articles

TRENDING ARTICLES