Wednesday, January 22, 2025

ಶೀತಲ್ ವಿಂಡೋಸೀಟ್​​ನಲ್ಲೊಂದು ಕ್ರೈಂ ಥ್ರಿಲ್ಲರ್ ಕಥೆ

ಖ್ಯಾತ ನಿರೂಪಕಿ ಶೀತಲ್ ಶೆಟ್ಟಿ ನಟಿಯಾಗಿ ಮಿಂಚಿದ್ದಾಯ್ತು. ಇದೀಗ ಡೈರೆಕ್ಟರ್ ಆಗಿ ತಮ್ಮ ಚೊಚ್ಚಲ ನಿರ್ದೇಶನದ ಚಿತ್ರವನ್ನ ಟ್ರೈಲರ್ ಸಮೇತ ಪ್ರೇಕ್ಷಕರ ಮುಂದಿಟ್ಟು, ಭೇಷ್ ಅನಿಸಿಕೊಂಡಿದ್ದಾರೆ. ಆಕೆಯ ಸಿನಿಮೋತ್ಸಾಹದ ಕೈಗನ್ನಡಿಯಂತಿರೋ ವಿಂಡೋಸೀಟ್ ಕಥೆ ಏನು..? ಮೇಕಿಂಗ್ ಹೇಗಿದೆ ಅಂತೀರಾ..?

  • ಶೀತಲ್ ವಿಂಡೋಸೀಟ್​​ನಲ್ಲೊಂದು ಕ್ರೈಂ ಥ್ರಿಲ್ಲರ್ ಕಥೆ
  • ಜುಲೈ 1ಕ್ಕೆ ರಿವೀಲ್ ಆಗಲಿದೆ ನಿರೂಪ್ ವಿಂಡೋಸೀಟ್

ವಿಂಡೋಸೀಟ್.. ಹೀಗೊಂದು ಡಿಫರೆಂಟ್ ಟೈಟಲ್​​ನಲ್ಲಿ ಸಿನಿಮಾವೊಂದು ತಯಾರಾಗಿದ್ದು, ಟ್ರೈಲರ್ ಸಮೇತ ರಿಲೀಸ್ ಡೇಟ್ ಹೊತ್ತು ಪ್ರೇಕ್ಷಕರ ಮುಂದೆ ಬಂದಿದೆ. ಯೆಸ್.. ಕಿಚ್ಚ ಸುದೀಪ್​ರ ಆಪ್ತ ಗೆಳೆಯ ಕಮ್ ಪ್ಯಾಷನೇಟ್ ಪ್ರೊಡ್ಯೂಸರ್, ಡಿಸ್ಟ್ರಿಬ್ಯೂಟರ್ ಜಾಕ್ ಮಂಜು ನಿರ್ಮಾಣದ ಸಿನಿಮಾ ಇದು.

ಟೀಸರ್ ನೋಡಿ ವ್ಹಾವ್ ಅಂದಿದ್ದ ಸಿನಿಪ್ರೇಮಿಗಳು, ಇದೀಗ ಟ್ರೈಲರ್ ಝಲಕ್ ನೋಡಿ ಶಹಬ್ಬಾಶ್ ಅಂತಿದ್ದಾರೆ. ಕಾರಣ ಚಿತ್ರದ ಕಥೆ, ಪಾತ್ರಗಳು ಹಾಗೂ ಮೀಕಿಂಗ್​ನಲ್ಲಿರೋ ಧಮ್ಮು, ರಿಧಮ್. ಅಂದಹಾಗೆ ಈ ಚಿತ್ರದ ಸಾರಥಿ ಶೀತಲ್ ಶೆಟ್ಟಿ. ಅರೇ ಈಕೆ ಜಸ್ಟ್ ಆಕ್ಟರ್ ಅಲ್ವಾ ಅಂತ ಮೈಂಡ್​ಗೆ ಜಾಸ್ತಿ ಕೆಲಸ ಕೊಡ್ಬೇಡಿ. ಈ ಚಿತ್ರದ ಮೂಲಕ ಮತ್ತೊಂದು ಹೆಜ್ಜೆ ಮುಂದಿಟ್ಟಿದ್ದಾರೆ. ಡೈರೆಕ್ಟರ್ ಕ್ಯಾಪ್ ತೊಟ್ಟು, ಇದಕ್ಕೆ ಆ್ಯಕ್ಷನ್ ಕಟ್ ಕೂಡ ಹೇಳಿದ್ದಾರೆ.

ಮೊದಲಿಗೆ ಇದೊಂದು ರೊಮ್ಯಾಂಟಿಕ್ ಲವ್ ಸ್ಟೋರಿ ಅಂದುಕೊಂಡಿದವ್ರಿಗೆ, ಕಹಾನಿ ಮೇ ಟ್ವಿಸ್ಟ್ ಅಂತ ಬೇರೆ ಇನ್ನೇನನ್ನೋ ಹೇಳೋಕೆ ಹೊರಟಿದೆ ಟೀಂ. ಪಕ್ಕಾ ಕ್ರೈಂ ಥ್ರಿಲ್ಲರ್ ಜಾನರ್​ನ ಈ ಸಿನಿಮಾದಲ್ಲಿ ಶೀತಲ್ ಶೆಟ್ಟಿಯ ನಿರ್ದೇಶನಾ ಕೌಶಲ್ಯಗಳು ಎಕ್ಸ್​ಪ್ಲೋರ್ ಆಗಿವೆ. ಒಂದೊಳ್ಳೆ ಮಲಯಾಳಂ ಚಿತ್ರದ ಸ್ಕ್ರೀನ್ ಪ್ಲೇ ಮುಂದೆ ಬಂದಂತೆ ಭಾಸವಾಗ್ತಿದೆ.

ರಂಗಿತರಂಗ, ರಾಜರಥ, ಆದಿಲಕ್ಷ್ಮಿ ಪುರಾಣ, ವಿಕ್ರಾಂತ್ ರೋಣ ಖ್ಯಾತಿಯ ನಿರೂಪ್ ಭಂಡಾರಿ ಈ ಚಿತ್ರದ ಕಥಾನಾಯಕ. ಇಲ್ಲಿ ನಿರೂಪ್ ಜೊತೆ ಸಂಜನಾ ಆನಂದ್ ಹಾಗೂ ಅಮೃತಾ ಅಯ್ಯಂಗಾರ್ ನಾಯಕಿಯರಾಗಿ ಕಾಣಸಿಗಲಿದ್ದಾರೆ. ಟೆಕ್ನಿಕಲಿ ಸಿನಿಮಾ ಸಖತ್ ಇಂಪ್ರೆಸ್ಸೀವ್ ಆಗಿದ್ದು, ನಿರೂಪ್ ನಟನಾ ಗಮ್ಮತ್ತಿಗೆ ಹೆಚ್ಚು ಸ್ಪೇಸ್ ಸಿಕ್ಕಿದೆ. ದೀಪಾವಳಿಗೆ ಟೀಸರ್ ಲಾಂಚ್ ಮಾಡಿದ್ದ ಟೀಂ, ಇದೀಗ ಟ್ರೈಲರ್ ಜೊತೆ ಜುಲೈ 1ಕ್ಕೆ ತೆರೆಗೆ ಬರೋ ನಯಾ ಖಬರ್ ಹೊಸ ಹಾಕಿದೆ.

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಪವರ್ ಟಿವಿ

RELATED ARTICLES

Related Articles

TRENDING ARTICLES