Monday, December 23, 2024

ಹಾಸನ ಘಟನೆ ಮಾಸುವ ಮುನ್ನವೇ ಮತ್ತೊಂದು ಭೀಕರ ಹತ್ಯೆ..!

ಕೋಲಾರ : ಗಂಗಮ್ಮನಿಗೆ ಪೂಜೆ ಸಲ್ಲಿಸಲು ಬಂದ ನಗರಸಭಾ ಸದಸ್ಯನನ್ನು ಹತ್ಯೆಗೈದ ಘಟನೆ ಕೋಲಾರದಲ್ಲಿ ನಡೆದಿದೆ.

ಮುಳಬಾಗಲು ನಗರಸಭೆ ಸದಸ್ಯ ಜಗನ್ ಮೋಹನ್ ರೆಡ್ಡಿ(50) ಕೊಲೆಯಾದ ವ್ಯಕ್ತಿ. ಗಂಗಮ್ಮನಿಗೆ ಪೂಜೆ ಸಲ್ಲಿಸಿ ಹೊರಬರುವ ವೇಳೆಯಲ್ಲಿ ನಾಲ್ವರು ದುಷ್ಕರ್ಮಿಗಳು ಲಾಂಗು, ಮಚ್ಚುಗಳಿಂದ ಕೊಲೆಗೈದು ಪರಾರಿಯಾಗಿದ್ದಾರೆ. ಹಾಗೆನೇ ಈ ಘಡನೆ ಸ್ಥಳೀಯ ಸಿಸಿ ಕೆಮೆರಗಳಲ್ಲಿ ಕೊಲೆಪಾತಕರ ದೃಶ್ಯ ಸೆರೆಯಾಗಿರುವ ಸಾಧ್ಯತೆ ಇದೆ.

ಎರಡನೆ ಸಲ ನಗರಸಭಾ ಸದಸ್ಯನಾಗಿದ್ದ ಜಗನ್ ಮೋಹನ್ ರೆಡ್ಡಿ. ಕಳೆದ 25 ವರ್ಷಗಳಿಂದ ಕ್ರಿಮಿನಲ್ ಪ್ರಕರಣಗಳಲ್ಲಿ ಭಾಗಿಯಾಗಿದ್ದರು. ರಿಯಲ್ ಎಸ್ಟೇಟ್ ಸೇರಿದಂತೆ ಸೆಟ್ಲಮೆಂಟ್ ಗಳಲ್ಲಿ ತೊಡಗಿಸಿಕೊಂಡಿದ್ದ ರೆಡ್ಡಿ. ಮಾಜಿ ಶಾಸಕ ಕೊತ್ತೂರು ಮಂಜುನಾಥ ಅವರ ಆಪ್ತನಾಗಿದ್ದರು. ಹಾಲಿ ಶಾಸಕ ಎಚ್.ನಾಗೇಶ್ ಜೊತೆಗೂ ರಾಜಕೀಯ ನಂಟು ಹೊಂದಿದ್ದರು. ಆದರೆ ದುಷ್ಕರ್ಮಿಗಳು ಹತ್ಯೆಗೈದು ಪರಾರಿಯಾಗಿದ್ದಾರೆ. ಕೋಲಾರದ ಜಾಲಪ್ಪ ಆಸ್ಪತ್ರೆಯಲ್ಲಿ ರೆಡ್ಡಿ ಶವ ಇರಿಸಲಾಗಿದೆ ಹಾಗೆನೇ ಮುಳಬಾಗಲು ಪಟ್ಟಣದಲ್ಲಿ ತೀವ್ರ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ.

RELATED ARTICLES

Related Articles

TRENDING ARTICLES