Friday, January 10, 2025

ಕಾಶ್ಮೀರಿ ಪಂಡಿತರ ಹತ್ಯೆಯಲ್ಲಿ ಹುಸೇನ್ ಕೈವಾಡ.!

ಬೆಂಗಳೂರು:ನಗರದಲ್ಲಿ ಮತ್ತೆ ಉಗ್ರರ ಕರಿನೆರಳು ಕಾಣಿಸೋಕೆ ಶುರುವಾಗಿದೆ. ನಾವೆಲ್ಲ ನೆಮ್ಮದಿಯಾಗಿದ್ದೇವೆ.. ಸಿಲಿಕಾನ್ ಸಿಟಿ ಸೇಫ್ ಸಿಟಿ ಅನ್ನೋ ಮಾತು ಇನ್ಮುಂದೆ ಹೇಳೋಕೆ ಸ್ವಲ್ಪ ಕಷ್ಟವಾಗಬಹುದು. ಯಾಕಂದ್ರೆ ಬೆಂಗಳೂರಲ್ಲಿ ಹಿಜ್ಬುಲ್ ಮುಜಾಹಿದ್ದೀನ್ ಸಂಘಟನೆಯ ಮೋಸ್ಟ್ ವಾಟೆಂಡ್ ಉಗ್ರನೊಬ್ಬ ಅರೆಸ್ಟ್ ಆಗಿದ್ದಾನೆ.

ಬೆಂಗಳೂರಿನಲ್ಲಿ ಸಿಕ್ಕಿಬಿದ್ದ ಕಾಶ್ಮೀರಿ ಭಯೋತ್ಪಾದಕ ತಾಲಿಬ್ ಹುಸೇನ್. ಬೆಂಗಳೂರಿನ ಓಕಳಿಪುರಂ ಬಳಿಯಲ್ಲಿರುವ ಇದೇ ಮನೆಯಲ್ಲಿ ಕಳೆದ ಎಂಟು ತಿಂಗಳಿನಿಂದ ವಾಸವಾಗಿದ್ದ. ಹೆಂಡತಿ ಮಕ್ಕಳ ಜೊತೆ ಯಾರಿಗೂ ಅನುಮಾನ ಬಾರದಂತೆ ಶ್ರೀರಾಂಪುರ ಆಸುಪಾಸಿನಲ್ಲೇ ಹತ್ತು ವರ್ಷದಿಂದ ವಾಸವಾಗಿದ್ದ. ಈ ಬಗ್ಗೆ ಮಾಹಿತಿ ಕಲೆ ಹಾಕಿದ್ದ ಕಾಶ್ಮೀರಿ ಪೊಲೀಸ್ರು ಆತನ ಮೊಬೈಲ್ ಲೊಕೇಶನ್ ಕ್ಯಾಚ್ ಮಾಡಿ ಮೇ 29 ರಂದು ಬಂಧಿಸಿದ್ದಾರೆ. ಈ ತಾಲಿಬ್ ಹುಸೇನ್‌ನ ಬಗ್ಗೆ ಕಳೆದ ಎರಡು ತಿಂಗಳಿನಿಂದ ಟ್ರ್ಯಾಕ್ ಮಾಡಿದ್ದ ಕಾಶ್ಮೀರಿ ಪೊಲೀಸ್ರು ಮೇ. 27 ರಂದು ಬೆಂಗಳೂರಿಗೆ ಬಂದು ಆತನ ಚಲನವಲನವನ್ನ ಸೂಕ್ಷ್ಮವಾಗಿ ನೋಡಿಯೇ ಬಂಧಿಸಿ ಕರೆದೊಯ್ದಿದ್ದಾರೆ.

2007-08 ರಲ್ಲಿ ಕಾಶ್ಮೀರದಲ್ಲಿ ಪಂಡಿತರನ್ನ ಹತ್ಯೆ ಮಾಡುವಂತಹ ಕೆಲಸವನ್ನ ಈ ಮುಜಾಹಿದ್ದೀನ್ ಉಗ್ರ ಸಂಘಟನೆಯ ಹುಸೇನ್ ಮಾಡ್ತಿದ್ದನಂತೆ. ಯಾವಾಗ ಕಾಶ್ಮೀರದಲ್ಲಿ 2014ರಿಂದ ಉಗ್ರ ಚಟುವಟಿಕೆಗೆ ಬ್ರೇಕ್ ಬಿತ್ತೋ ಆಗ್ಲೇ ಹುಸೇನ್ ಬೆಂಗಳೂರಿಗೆ ಓಡಿಬಂದಿದ್ದ. ಶ್ರೀರಾಂಪುರದಲ್ಲಿ ವಾಸವಾಗಿ ರೈಲ್ವೇ ನಿಲ್ದಾಣದಲ್ಲಿ ಹಮಾಲಿ ಕೆಲಸವನ್ನ ಮಾಡಿಕೊಂಡಿದ್ದ. ಇತ್ತೀಚೆಗೆ ಗೂಡ್ಸ್ ಆಟೋ ಒಂದನ್ನ ಓಡಿಸಿಕೊಂಡಿದ್ದ ಹುಸೇನ್ ಗುಪ್ತವಾಗಿಯೇ ಕಾಶ್ಮೀರದಲ್ಲಿ ಕೋಮುಗಲಭೆಯನ್ನ ಸೃಷ್ಠಿ ಮಾಡುವಂತಹ ಕೆಲಸವನ್ನ ಮಾಡೋಕೆ ಮುಂದಾಗಿದ್ದ.

ಈತನನ್ನು ಸಾಕಷ್ಟು ಕಾಶ್ಮೀರಿ ಯುವಕರು ಬಂದು ಭೇಟಿಯಾಗ್ತಿದ್ರು. ಈತನ ಆಣತಿಯಂತೆಯೇ ಬಾಂಬು ಹಾಗೂ ಪಂಡಿತರ ತಲೆ ಸಿಡಿಯುತ್ತಿದ್ವು ಎಂಬ ಮಾಹಿತಿಗಳು ಇದೀಗ ಲಭ್ಯವಾಗಿದೆ. ಜೊತೆಗೆ ನಗರ ಪೊಲೀಸ್ ಆಯುಕ್ತ ಪ್ರತಾಪ್ ರೆಡ್ಡಿ ಉಗ್ರನ ಅರೆಸ್ಟ್ ಬಗ್ಗೆ ರಿಯಾಕ್ಷನ್ ಹೀಗಿತ್ತು

ಬೆಂಗಳೂರಿನಲ್ಲಿ ಉಗ್ರನ ಜೊತೆ ಶಾಮೀಲಾಗಿರುವವರನ್ನು ಹುಡುಕಲಾಗುತ್ತಿದೆ.. ಈ ಸಂಬಂಧ ಕರ್ನಾಟಕ ಪೊಲೀಸರು ಕೇಂದ್ರೀಯ ಪೊಲೀಸರ ಜೊತೆ ನಿರಂತರ ಸಂಪರ್ಕದಲ್ಲಿದ್ದಾರೆ. ಇನ್ನು, ಆರ್‌ಎಸ್‌ಎಸ್‌ ಕಚೇರಿ ಮೇಲೆ ಬಾಂಬ್‌ ಬೆದರಿಕೆ ಹಿನ್ನೆಲೆಯಲ್ಲಿಯಲ್ಲಿ ದೆಹಲಿಯ ಮಾಧ್ಯಮಗಳಲ್ಲೂ ಬಂದಿದೆ.. ಈ ವಿಚಾರವಾಗಿ ಅಲ್ಲಿ ವಿಶೇಷವಾದ ತನಿಖೆ ನಡೆಯುತ್ತಿದೆ.. ಬೆಂಗಳೂರಿನಲ್ಲೂ ಅದೇ ರೀತಿ ಆಗಿತ್ತು.. ದೆಹಲಿ ಪೊಲೀಸರು ತಮಿಳುನಾಡಿನಲ್ಲಿ ಒಬ್ಬನನ್ನು ಬಂಧಿಸಿದ್ದಾರೆ.. ಈ ಹಿನ್ನೆಲೆಯಲ್ಲಿ ಎಲ್ಲಾ ಆರ್‌ಎಸ್‌ಎಸ್‌ ಕಚೇರಿಗಳಿಗೆ ಭದ್ರತೆ ಒದಗಿಸಲಾಗಿದೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಶಿವಮೊಗ್ಗದಲ್ಲಿ ತಿಳಿಸಿದ್ದಾರೆ.

ಸದ್ಯ ಶ್ರೀರಾಂಪುರ ಪೊಲೀಸ್ರ ನೆರವಿನಿಂದ ಉಗ್ರ ಹುಸೇನ್‌ನನ್ನ ಬಂಧಿಸಿದ್ದು ಈತನ ಸಹಚರರ ಮೇಲೆ ಕಾಶ್ಮೀರಿ ಪೊಲೀಸ್ರು ಹಾಗೂ ಎನ್‌ಐಎ ತಂಡ ಕಣ್ಣಿಡ್ತಿದೆ.. ಇನ್ನೆಷ್ಟು ಉಗ್ರರು ಬೆಂಗಳೂರಲ್ಲಿ ತಣ್ಣಗೆ ಕೂತು ಹೊಂಚುಹಾಕ್ತಿದ್ದಾರೆ ಎಂಬುದರ ಬಗ್ಗೆ ಮುಂದಿನ ತನಿಖೆಯಿಂದಲೇ ಗೊತ್ತಾಗಬೇಕಿದೆ.. ಯಾವುದಕ್ಕೂ ಬಿ ಅಲರ್ಟ್‌..

ಅಶ್ವಥ್ ಎಸ್.ಎನ್.ಕ್ರೈಂ ಬ್ಯೂರೋ ಪವರ್ ಟಿವಿ

RELATED ARTICLES

Related Articles

TRENDING ARTICLES