Monday, December 23, 2024

ಇಂಜಿನಿಯರ್ ಕನಸು ಕಂಡಿದ್ದ ವಿದ್ಯಾರ್ಥಿಗಳಿಗೆ ಶಾಕ್

ಬೆಂಗಳೂರು: ಸಿಇಟಿ ಪರೀಕ್ಷೆಗೆ ಇನ್ನೂ ಕೇವಲ 8 ದಿನ ಮಾತ್ರ ಬಾಕಿ ಉಳಿದಿದೆ ಆದರೆ ಸಿಇಟಿ ಪರೀಕ್ಷೆಗೆ ಹಾಲ್ ಟಿಕೆಟ್ ಸಿಗದೆ ವಿದ್ಯಾರ್ಥಿಗಳು ಕಂಗಾಲಾಗಿದ್ದಾರೆ.

ಪ್ರತಿ ವರುಷ ಕೆಇಎ ವಿದ್ಯಾರ್ಥಿಗಳಿಗೆ ಒಂದಲ್ಲ ಒಂದು ತೊಂದರೆ ಕೊಡ್ತಿರೋದೇಕೆ? ಪರೀಕ್ಷಾ ಶುಲ್ಕ ಪಾವತಿ ಮಾಡಿದ್ರು ಹಾಲ್ ಟಿಕೆಟ್ ಡೌನ್ ಲೋಡ್ ಆಗ್ತಿಲ್ಲ. ಪರೀಕ್ಷೆ ಸಿಗುತ್ತೋ ಸಿಗಲ್ವೋ ಆತಂಕದಲ್ಲಿ ಸಾವಿರಾರು ವಿದ್ಯಾರ್ಥಿಗಳು ಸಿಇಟಿ ಪರೀಕ್ಷೆಗೆ ಇನ್ನೂ ಕೇವಲ 8 ದಿನ ಮಾತ್ರ ಬಾಕಿ ಉಳಿದಿದೆ. ಸಿಇಟಿ ಪರೀಕ್ಷೆ ತೆಗೆದುಕೊಂಡ ವಿದ್ಯಾರ್ಥಿಗಳಿಗೆ ಆತಂಕವಾಗಿದೆ. ತಮ್ಮ ಮಕ್ಕಳಿಗೆ ಸಿಇಟಿ ಪರೀಕ್ಷೆ ಸಿಗೋದಿಲ್ಲ ಅನ್ನೋ ಆತಂಕಕ್ಕೆ ಸಿಲುಕಿದ ಪೋಷಕರು, ಕರ್ನಾಟಕ ಪರೀಕ್ಷಾ ಪ್ರಾಧಿಕಾರಕ್ಕೆ ಪೋಷಕರು ಮನವಿ ಸಲ್ಲಿಸುತ್ತಿದ್ದಾರೆ.

ಅದಲ್ಲದೇ, ಒಂದಲ್ಲ, ಎರಡಲ್ಲ ಬರೋಬ್ಬರಿ ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಹಾಲ್ ಟಿಕೆಟ್ ಸಮಸ್ಯೆ ಉಂಟಾಗಿದ್ದು, ಎಲ್ಲಾ ವಿದ್ಯಾರ್ಥಿಗಳು ಪರೀಕ್ಷಾ ಶುಲ್ಕ ಪಾವತಿ ಮಾಡಿದ್ದಾರೆ. ಆದ್ರೆ ಹಾಲ್ ಟಿಕೆಟ್ ಡೌನ್‌ಲೋಡ್ ಮಾಡಿಕೊಳ್ಳಲು ಸಾಧ್ಯವಾಗ್ತಿಲ್ಲ. ಸಿಇಟಿ ವೆಬ್ ಸೈಟ್ ಸರ್ವರ್ ಸ್ಲೋ ಅಂತ ತೋರಿಸುತ್ತಿದೆ. ಬೆಳಿಗ್ಗೆಯಿಂದ ಸಾವಿರಾರು ವಿದ್ಯಾರ್ಥಿಗಳು ಕೆಇಎಗೆ ಹಾಲ್ ಟಿಕೆಟ್ ಸಮಸ್ಯೆ ಕುರಿತು ದೂರು ನೀಡುತ್ತಿದ್ದಾರೆ. ಆದ್ರೆ ಕೆಇಎ ಅಧಿಕಾರಿಗಳು ಸರಿಯಾಗಿ ರೆಸ್ಪಾಂಡ್ ಮಾಡ್ತಿಲ್ಲ.

ಇನ್ನು, ಲಕ್ಷಾಂತರ ರೂಪಾಯಿ ಹಣ ಖರ್ಚು ಟ್ಯೂಷನ್ ಗೆ ಕಳುಹಿಸಿದ್ದೇವೆ. ಆದ್ರೆ ಹಾಲ್ ಟಿಕೆಟ್ ಸಾಕಷ್ಟು ನೊಂದಿದ್ದೇವೆ. ಮಗಳಿಗೆ ಪರೀಕ್ಷೆ ಬರೆಯಲು ಅವಕಾಶ ಮಾಡಿಕೊಡಿ ಎಂದು ಪೋಷಕರು ಕಣ್ಣೀರು ಹಾಕುತ್ತಿದ್ದಾರೆ.  ಸಿಇಟಿ ಹಾಲ್ ಟಿಕೆಟ್ ಸಂಬಂಧ ತಾಂತ್ರಿಕ ತೊಂದರೆಯಾಗಿದೆ. ಯಾರು ರಿಜಿಸ್ಟರ್ ಮಾಡಿಸಿದ್ದಾರೋ ಅವರಿಗಾಗಿ ಮತ್ತೊಂದು ದಿನ ಅಪ್ ಲೋಡ್ ಮಾಡಲು ಅವಕಾಶ ನೀಡಲು ಚಿಂತಿಸಲಾಗುತ್ತಿದೆ. ಈ ಬಗ್ಗೆ ಸಾಧ್ಯವಾದಷ್ಟು ಬೇಗ ನಿರ್ಧಾರ ತೆಗೆದುಕೊಳ್ತೇವೆ ಎಂದು ಕೆ ಇ ಎ ನಿರ್ದೇಶಕಿ ರಮ್ಯ ಮಾಹಿತಿ ನೀಡಿದ್ದಾರೆ.

RELATED ARTICLES

Related Articles

TRENDING ARTICLES