Monday, December 23, 2024

ಮೋದಿ ಕನಸು ನನಸು ಮಾಡಿದ ತುಮಕೂರಿನ ಕ್ಷೇತ್ರ..!

ತುಮಕೂರು : ರಾಜ್ಯದಲ್ಲೇ ಮೊದಲ ಬಾರಿಗೆ ಪ್ರಧಾನಿ ಮೋದಿಯ ಡಿಜಿಟಲೀಕರಣ ವ್ಯವಸ್ಥೆಯನ್ನು ತುಮಕೂರಿನ ದೇವಾಲಯದಲ್ಲಿ ಜಾರಿಗೊಳಿಸಲಾಗಿದೆ.

ಜನರೇಷನ್ ಬದಲಾದಂತೆ ತುಮಕೂರಿನ ದೇವರಾಯನದುರ್ಗದ ಲಕ್ಷ್ಮಿ ನರಸಿಂಹಸ್ವಾಮಿ ದೇವಸ್ಥಾನವೂ ಬದಲಾಗಿದೆ. ಮೋದಿಯ ಕ್ಯಾಶ್‌ಲೆಸ್‌ನ ಕನಸನ್ನ ದೇವಸ್ಥಾನದ ಆಡಳಿತ ಮಂಡಳಿ ಇದೀಗ ನನಸು ಮಾಡಿದೆ. ಕಾಣಿಕೆಯ ಹುಂಡಿಯ ಜೊತೆಗೆ ಇ – ಸ್ಕ್ಯಾನಿಂಗ್, ಸ್ವೈಪಿಂಗ್ ಸೇರಿ ಇತರೆ ಸೌಲಭ್ಯಗಳನ್ನು ಒದಗಿಸಿಕೊಟ್ಟಿದೆ.

ವ್ಯಾಪಾರ ವಹಿವಾಟು ಮಾರುಕಟ್ಟೆಗಳಿಂದ ದೇವಾಲಯಗಳ ಪಡಸಾಲೆವರೆಗೂ ಪಸರಿಸಿದ ಡಿಜಿಟಲೀಕರಣ, ಫೋನ್ ಪೇ, ಯುಪಿಐ ಇತರೆ ಡಿಜಿಟಲ್ ಮೂಲಕ ದೇವರಿಗೆ ಕಾಣಿಕೆ ಹಣ ಪಾವತಿ ಮಾಡಬಹುದಾಗಿದೆ. ಬೆಂಗಳೂರು, ಮೈಸೂರು ಸೇರಿ ಇತರೆ ಕಡೆಗಳಿಂದ ಬರುವವರು ಹಣ ತರೋದಕ್ಕೆ ಆಗಲ್ಲ. ಹೀಗಾಗಿ ಅಂತಹವರ ಅನುಕೂಲಕ್ಕಾಗಿ ಈ ಡಿಜಿಟಲ್ ವ್ಯವಸ್ಥೆಯನ್ನು ಕ್ಷೇತ್ರದ ಆಡಳಿತ ಮಂಡಳಿ ಜಾರಿ ಮಾಡಿದೆ.

ಇನ್ಮುಂದೆ ದೇವಾಲಯಗಳ ಹುಂಡಿಗಳಿಗೆ ಹಾಕಲು ಭಕ್ತರು ಚಿಲ್ಲರೆಗಳಿಗೆ ಪರದಾಡುವುದನ್ನು ನಿಲ್ಲಿಸಲು ಈ ಯೋಜನೆ ಜಾರಿ ಮಾಡಲಾಗಿದೆ ಎಂದು ದೇವಸ್ಥಾನದ ಕಾರ್ಯನಿರ್ವಾಹಕ ಅಧಿಕಾರಿ ಎಸ್.ಟಿ ಸುನೀಲ್ ಕುಮಾರ್ ಮಾಹಿತಿ ನೀಡಿದ್ದಾರೆ.

RELATED ARTICLES

Related Articles

TRENDING ARTICLES