Wednesday, January 22, 2025

ಇಂದು ನಟ ಚಿರಂಜೀವಿ ಸರ್ಜಾ ಪುಣ್ಯಸ್ಮರಣೆ

ಬೆಂಗಳೂರು: ಚಿರು ಮರೆಯಾಗಿ ಇಂದಿಗೆ 2 ವರ್ಷ ಆಗಿದ್ದು, ಕನಕಪುರ ಬೃಂದಾವನ ಫಾರ್ಮ್ ಹೌಸ್​ನಲ್ಲಿ ಪುಣ್ಯಸ್ಮರಣೆ ಕಾರ್ಯವನ್ನು ಕುಟುಂಬಸ್ಧರು ಮಾಡಲಿದ್ದಾರೆ.

ಮಗ ರಾಯನ್ ನಗುವಲ್ಲಿ ಅವರಿನ್ನೂ ಜೀವಂತವಾಗಿದ್ದು, ಎಲ್ಲರ ಮೆಚ್ಚಿನ ನಟ ಚಿರಂಜೀವಿ ಸರ್ಜಾ ಹೃದಯಾಘಾತದಿಂದ ಸಾವನ್ನಪ್ಪಿದ್ದರು. ನಟ ಚಿರಂಜೀವಿ ಸರ್ಜಾ ನಗು ಮುಖದ ವ್ಯಕ್ತಿಯಾಗಿದ್ದು, ಅವರಿಲ್ಲ ಎಂಬ ಸತ್ಯವನ್ನು ಇಂದಿಗೂ ಅರಗಿಸಿಕೊಳ್ಳುವುದು ಬಹಳ ಕಷ್ಟ. ಕುಟುಂಬ ಹಾಗೂ ಅಭಿಮಾನಿಗಳ ಪಾಲಿಗೆ ಇಂದು ಕರಾಳ ದಿನವಾಗಿದೆ.

2020ರಲ್ಲಿ ಹೃದಯಾಘಾತದಿಂದ ನಿಧನರಾದ ನಟ ಚಿರಂಜೀವಿ ಸರ್ಜಾ, ಸ್ಯಾಂಡಲ್​ವುಡ್​ನಲ್ಲಿ ಎಲ್ಲರ ಫೇವರೇಟ್​ ಎಂದರೆ ತಪ್ಪಾಗಲಾರದು. ವಾಯುಪುತ್ರ ಸಿನಿಮಾ ಮೂಲಕ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟ ಚಿರು. ಮುದ್ದಾದ ಪತ್ನಿ ಮೇಘನಾ, ಜೀವಕ್ಕೆ ಜೀವ ಕೊಡುವ ತಮ್ಮ ದೃವ ಎಲ್ಲರನ್ನು ಬಿಟ್ಟು ಅಗಲಿದ್ದರು.

RELATED ARTICLES

Related Articles

TRENDING ARTICLES