Monday, December 23, 2024

‘ಈದ್ಗಾ ಮೈದಾನ ಬಿಬಿಎಂಪಿ ಸ್ವತ್ತಲ್ಲ, ಅಲ್ಲಾ ಹು ಗೆ ಸೇರಿದ ಆಸ್ತಿ’

ಬೆಂಗಳೂರು :ಚಾಮರಾಜಪೇಟೆಯ ಈದ್ಗಾ ಮೈದಾನ ಈಗ ರಾಜ್ಯದ ಕೇಂದ್ರ ಬಿಂದುವಾಗಿದೆ. ಬಿಬಿಎಂಪಿ ಈ ಸ್ವತ್ತು ನಮ್ಗೆ ಸೇರಿದ್ದು ಅಂತಿದ್ರೆ, ಇತ್ತ ವಕ್ಫ್ ಬೋಡ್೯ ಈ ಮೈದಾನ ನಮ್ಮದು ಅಂತ ವಾದ ಮಾಡ್ತಿರುವುದು ಭಾರಿ ಚರ್ಚೆಗೆ ಗ್ರಾಸವಾಗ್ತಿದೆ. ಇತ್ತ ವಿಶ್ವ ಸನಾತನ ಪರಿಷತ್ತು ಈದ್ಗಾ ಮೈದಾನದಲ್ಲಿ ಧ್ವಜಾರೋಹಣ ಮಾಡ್ತೀವಿ ಅಂತಿದಾರೆ.

ನಗರದ ಪ್ರತಿಷ್ಠಿತ ಜಾಗಗಳಲ್ಲೋಂದಾದ ಚಾಮರಾಜಪೇಟೆ ಈದ್ಗಾ ಮೈದಾನದ ಗೊಂದಲ ದಿನೇ ದಿನೆ ಕಾವೇರುತ್ತಿದೆ.ಇಷ್ಟೂ ದಿನ ಬಿಬಿಎಂಪಿ ತನ್ನ ಆಸ್ತಿ ಎಂದು ಹೇಳುತ್ತಿತ್ತು. ಆದ್ರೀಗ ಶಫಿಕ್ ಸಾಧಿಕ್, ವಕ್ಫ್ ಬೋಡ್೯ ಅಧ್ಯಕ್ಷ ಸುಪ್ರೀಂಕೋಟ್೯ನ ಆದೇಶ ಪ್ರತಿ ಹಿಡ್ಕೊಂಡು ಈ ಜಾಗ ನಮ್ದು‌. ಇದು ಅಲ್ಲಾ ಗೆ ಸೇರಿದ ಜಾಗ ಬಿಬಿಎಂಪಿ ಕಮೀಷನರ್ ಬೇಕಿದ್ರೆ ಬೇರೆ ಕಡೆ ಜಾಗ ಹುಡುಕಲಿ ಅಂತಿದ್ದಾರೆ.

ಸುಮಾರು ದಶಕಗಳಿಂದ ವಿವಾದಿತ ಚಾಮರಾಜಪೇಟೆ ಈದ್ಗಾ ಮೈದಾನ ವಿವಾದಗಳಿಂದ‌ ಮತ್ತೆ ಮುನ್ನೆಲೆಗೆ ಬಂದಿದೆ. ಇಷ್ಟೂ ದಿನ ಸುಮ್ಮನಿದ್ದ ಹಿಂದೂ ಕಾರ್ಯಕರ್ತರು, ಇದೀಗ ಸ್ವಾತಂತ್ರ್ಯ ದಿನದನ್ನು ಈದ್ಗಾ ಮೈದಾನದಲ್ಲಿ ಧ್ವಜಾರೋಹಣ ಮಾಡ್ತೇವೆ. ಇದು ಬಿಬಿಎಂಪಿಯ ಸ್ವತ್ತು. ಧ್ವಜಾರೋಹಣ ಬಳಿಕ ಇನ್ನಿತರೆ ಕಾರ್ಯಕ್ರಮಗಳೂ ಆಚರಿಸ್ತೇವೆ ಅಂತ ವಿಶ್ವ ಸನಾತನ ಪರಿಷತ್ತು ಪಾಲಿಕೆಯ ಜಂಟಿ ಆಯುಕ್ತರ ಭೇಟಿ ಮಾಡಿ ಆಗಸ್ಟ್ 15ಕ್ಕೆ ರಾಷ್ಟ್ರಧ್ವಜ ಹಾರಿಸಲು ಮನವಿ ಮಾಡಿದ್ದಾರೆ.

ಈದ್ಗಾ ಮೈದಾನದಲ್ಲಿ ಧ್ವಜಾರೋಹಣ ಮಾಡೋ ವಿಚಾರಕ್ಕೆ ಸಂಸದ ನಾಜೀರ್ ಹುಸೇನ್ ಪ್ರತಿಕ್ರಿಯಿಸಿದ್ದು, ಈದ್ಗಾ ಮೈದಾನದಲ್ಲಿ ಯಾಕೆ ಧ್ವಜಾರೋಹಣ ಮಾಡಬೇಕು. ಇಷ್ಟೂ ದಿನ ಇಲ್ಲದ ಸಮಸ್ಯೆ ಈಗ್ಯಾಕೆ ಬಂತು, ಬೇಕಿದ್ರೆ ಬಿಬಿಎಂಪಿ ಪ್ರಾಪರ್ಟಿಯಲ್ಲಿ ಮಾಡಿಕೊಳ್ಳಲಿ, ಧ್ವಜಾರೋಹಣ ಮಾಡಲು ನಾವು ಸಿದ್ದ ಆದ್ರೆ. ದಾದಾಗಿರಿ ಮಾಡೋರ ಮುಂದೆ ನಾವು ಧ್ವಜಾರೋಹಣ ಮಾಡಬೇಕಾ ಅಂತ ಹಿಂದೂ ಸನಾತನ ಪರಿಷತ್ ವಿರುದ್ಧ ಕಿಡಿ ಕಾರಿದ್ದಾರೆ.

ಇನ್ನು ಮನವಿ ಸ್ವೀಕರಿಸಿ ಮಾತನಾಡಿದ ಬಿಬಿಎಂಪಿ ಪಶ್ಚಿಮ ವಲಯದ ಜಂಟಿ ಆಯುಕ್ತ ಶ್ರೀನಿವಾಸ್, ಈದ್ಗಾ‌ ಮೈದಾನ ಸದ್ಯ ಪಾಲಿಕೆ ಸ್ವತ್ತಾಗಿದೆ. ಅದು ಅತೀ ಸೂಕ್ಷ್ಮ ಪ್ರದೇಶ ಆದ ಹಿನ್ನೆಲೆಯಲ್ಲಿ ಪೊಲೀಸ್ ಆಯುಕ್ತರು ಮತ್ತು ಬಿಬಿಎಂಪಿ ಆಯುಕ್ತರ ಜೊತೆ ಮಾತನಾಡಿ ಐದು ದಿನಗಳ ಒಳಗೆ ಮನವಿಗೆ ಉತ್ತರಿಸುತ್ತೇವೆ ಅಂತ ಪ್ರತಿಕ್ರಿಯಿಸಿದ್ದಾರೆ.

ಒಟ್ನಲ್ಲಿ ಇಷ್ಟು ದಿನ ಈದ್ಗಾ ಮೈದಾನ ರಂಜಾನ್ ಮತ್ತು ಬಕ್ರೀದ್ ಹಬ್ಬಕ್ಕೆ ಮಾತ್ರ ಸೀಮಿತವಾಗಿತ್ತು.ಆದ್ರೀಗ ಹಲವು ವಿವಾದಗಳಿಂದ ಜಾತಿ ಧರ್ಮಗಳ ಸ್ವರೂಪ ಪಡೆಯುತ್ತಿದೆ. ಮುಂದಿನ ದಿನಗಳಲ್ಲಿ ಈ ವಿವಾದ ಯಾವ ಸ್ವರೂಪ ತಲುಪುತ್ತದೆ ಅಂತ ಕಾದು ನೋಡಬೇಕಿದೆ.

ಮಲ್ಲಾಂಡಹಳ್ಳಿ ಶಶಿಧರ್ ಪವರ್ ಟಿವಿ ಬೆಂಗಳೂರು

RELATED ARTICLES

Related Articles

TRENDING ARTICLES