ಬೆಂಗಳೂರು: ಫೇಸ್ ಬುಕ್ ನಲ್ಲಿ ಪರಿಚಯ ಆದವ್ರ ಬಗ್ಗೆ ಹುಷಾರಾಗಿರಿ ಫೇಸ್ ಬುಕ್ ನಲ್ಲಿ ಪರಿಚಯ ಆಗಿ ನಂತರ ಪಂಗನಾಮ ಹಾಕ್ತಾನೆ ಈ ಭೂಪ.
ಪೃಥ್ವಿ (34 ) ಹೆಚ್ಎಎಲ್ ಪೊಲೀಸರಿಂದ ಬಂಧನಕ್ಕೊಳಗಾದ ಆರೋಪಿ. ಫೇಸ್ ಬುಕ್ನಲ್ಲಿ ರಾಯಲ್ ರೀತಿ ಕಾಣುವ ಹಾಗೆ ಫೋಟೊ ಹಾಕ್ಕೊತಿದ್ದ. ಗುರುತು ಪರಿಚಯ ಇಲ್ಲದವರಿಗೆ ಫ್ರೆಂಡ್ ರಿಕ್ವೆಸ್ಟ್ ಕಳಿಸ್ತಾನೆ . ಫ್ರೆಂಡ್ಸ್ ಆಗ್ತಿದ್ದಂತೆ ಚಾಟಿಂಗ್ ಶುರು ಮಾಡ್ತಾನೆ . ಎರಡು ತಿಂಗಳು ಮಾತಾಡಿ ತನ್ನ ವರಸೆ ಶುರು ಮಾಡ್ತಾನೆ. ಅಮ್ಮನಿಗೆ ಹುಷಾರಿಲ್ಲ ಅರ್ಜೆಂಟಾಗಿ ಕಾರು ಬೇಕು ಅಂತಾ ಕೇಳ್ತಾನೆ. ಕಾರು ಕೊಟ್ಟರೆ ಮತ್ತೆ ಆತ ವಾಪಸ್ಸು ಬರೋದೆ ಇಲ್ಲ. ಗೊತ್ತಿರುವ ಸ್ನೇಹಿತರಿಗೆ ಅರ್ಜೆಂಟ್ ಹಣದ ಅವಶ್ಯಕತೆ ಇದೆ ಎನ್ನುತ್ತಿದ್ದ. ಅದಕ್ಕಾಗಿ ಕಾರು ಅಡಮಾನ ಇಡೋದಾಗಿ ಕಾರು ನೀಡಿ ಹಣ ಪಡೆದು ಎಸ್ಕೇಪ್ ಆಗುತ್ತಿದ್ದ.
ಅದಲ್ಲದೇ, ಈತ ಒಂದು ಕಾರಿಗೆ ಒಂದೂವರೆ ಯಿಂದ ಮೂರು ಲಕ್ಷದ ವರೆಗೆ ಹಣ ಪಡಿತಿದ್ದ. ನಂತರ ಈತ ಟಾರ್ಗೆಟ್ ಮಾಡ್ತಾ ಇದ್ದಿದ್ದು ಜೂಮ್ ಕಾರ್ಸ್ ಅಲ್ಲಿ ವೈಟ್ ಬೋರ್ಡ್ ವಾಹನವನ್ನ ಬಾಡಿಗೆಗೆ ಅಂತಾ ಪಡಿತಿದ್ದ. ನಂತರ ಅದನ್ನ ತೆಗೆದುಕೊಂಡು ಹೋಗಿ ಮಾರಾಟ ಮಾಡ್ತಿದ್ದ. ಒಎಲ್ ಎಕ್ಸ್ ನಿಂದ ಕ್ಯಾಮೆರಾ ಕೂಡ ಬಾಡಿಗೆಗೆ ಪಡೆದು ಮಾರಾಟ ಮಾಡ್ತಿದ್ದ. ಇಷ್ಟಲ್ಲದೇ, ಕ್ಷಣಕ್ಕೊಂದು ಮೊಬೈಲ್ ನಂಬರ್ ಚೇಂಜ್ ಮಾಡ್ತಿದ್ದ ಆರೋಪಿ ಪತ್ತೆಯೇ ಪೊಲೀಸರಿಗೆ ಸವಾಲಾಗಿತ್ತು. ಆತನ ಬಂಧನಕ್ಕೆ ರೆಡಿಯಾಗಿದ್ದ ಹೆಚ್ಎಎಲ್ ಠಾಣೆ ಪಿಎಸ್ಐ ಹನುಮಂತು ಮತ್ತು ತಂಡ ನಿರಂತರವಾಗಿ ಎರಡು ತಿಂಗಳ ಕಾರ್ಯಾಚರಣೆ ಬಳಿಕ ಆರೋಪಿ ಬಲೆಗೆ ಬಿದ್ದಿದ್ದಾನೆ. ಬಂಧಿತನಿಂದ ಐಷಾರಾಮಿ ಬೆನ್ ಕಾರು ಸೇರಿದಂತೆ 8 ಕಾರು ವಶಕ್ಕೆ ಪಡೆದುಕೊಂಡಿದ್ದಾರೆ.