Friday, December 27, 2024

ಗಣಿ ಬಾನದಾರಿಗೆ ಮಾಸ್ತಿ ಮಾಸ್, ಪ್ರೀತಂ ಕ್ಲಾಸ್ ಟಚ್

ಮಳೆ ಹುಡ್ಗ ಗೋಲ್ಡನ್ ಸ್ಟಾರ್ ಗಣೇಶ್ ಗೋಲ್ಡನ್ ಹೆಜ್ಜೆಗಳಲ್ಲಿ ಪ್ರೀತಂ ಗುಬ್ಬಿಯ ಹಾನೆಸ್ಟ್ ಎಫರ್ಟ್​ ಬಹಳಷ್ಟಿದೆ. ಸದ್ಯ ಬಾನದಾರಿಯಲ್ಲಿ ಸಾಗೋಕೆ ಸಜ್ಜಾಗಿರೋ ಈ ಜೋಡಿ, ಮುಂಗಾರುಮಳೆ ರೀತಿ ಮ್ಯಾಜಿಕ್ ಮಾಡೋ ಮುನ್ಸೂಚನೆ ನೀಡಿದೆ. ಅದಕ್ಕೆ ಮಾಸ್ತಿ ಮಾಸ್ ಟಚ್ ಜೊತೆ ಪ್ರೀತಂ ಕ್ಲಾಸ್ ಟಚ್ ಇರೋ ಇಂಟರೆಸ್ಟಿಂಗ್ ಸ್ಟೋರಿ ಹೇಳ್ತೀವಿ ಕೇಳಿ.

  • ಗಣಿ ಬಾನದಾರಿಗೆ ಮಾಸ್ತಿ ಮಾಸ್, ಪ್ರೀತಂ ಕ್ಲಾಸ್ ಟಚ್
  • ನಾಳೆಯಿಂದ ಬಾನದಾರಿಯಲ್ಲಿ ಶೂಟಿಂಗ್ ಕಿಕ್​ಸ್ಟಾರ್ಟ್​

ರೈತರಿಗೆ ಮುಂಗಾರು ಮಳೆ ಎಷ್ಟು ಮುಖ್ಯವೋ, ಕನ್ನಡ ಇಂಡಸ್ಟ್ರಿಗೆ ಅದಕ್ಕಿಂತ ಕೊಂಚ ಜಾಸ್ತಿನೇ ಮುಖ್ಯವಾಯ್ತು ಗೋಲ್ಡನ್ ಸ್ಟಾರ್ ಗಣೇಶ್​ರ ಮುಂಗಾರುಮಳೆ. ಮನರಂಜನೆಯ ರಸದೌತಣ ಉಣಬಿಡಿಸೋದ್ರ ಜೊತೆ ಮ್ಯೂಸಿಕಲಿ ಮ್ಯಾಜಿಕ್ ಮಾಡಿತ್ತು ಸಿನಿಮಾ. ಅಲ್ಲದೆ, 50 ಕೋಟಿ ಕ್ಲಬ್ ಸೇರಿದ ಮೊದಲ ಕನ್ನಡ ಸಿನಿಮಾ ಅನ್ನೋ ಹೆಗ್ಗಳಿಕೆಗೂ ಪಾತ್ರವಾಯ್ತು.

ಮುಂಗಾರುಮಳೆ ಕನ್ನಡ ಚಿತ್ರರಂಗವನ್ನು ಹಚ್ಚ ಹಸಿರಾಗಿಸಿತು. ಬಾಕ್ಸ್ ಅಫೀಸ್​ಗೆ ಉಸಿರು ನೀಡಿತು. ಇಂತಹ ಮೈಲಿಗಲ್ಲು ಚಿತ್ರದ ಕಥೆ, ಚಿತ್ರಕಥೆಯ ಹಿಂದಿನ ರೂವಾರಿ ಪ್ರೀತಂ ಗುಬ್ಬಿ. ಒಳ್ಳೆಯ ಬರಹಗಾರ, ಅದ್ಭುತ ಟೆಕ್ನಿಷಿಯನ್. ಗಣೇಶ್​ರ ಗೋಲ್ಡನ್ ಹೆಜ್ಜೆಗಳಲ್ಲಿ ಇವ್ರ ಪಾತ್ರ ಮಹತ್ವದ್ದು. ಅದೇ ಸ್ನೇಹ ಸಂಬಂಧ, ಗಣಿ ಜೊತೆ  ಮಳೆಯಲಿ ಜೊತೆಯಲಿ, ದಿಲ್ ರಂಗೀಲಾ ಹಾಗೂ 99 ಹೀಗೆ ಮೂರು ಸಿನಿಮಾಗಳನ್ನ ಒಟ್ಟೊಟ್ಟಿಗೆ ಮಾಡೋಕೆ ಪ್ರೇರಣೆ ಆಯ್ತು.

ಇದೀಗ ಆ ಗೋಲ್ಡನ್ ಕಾಂಬೋ ಒಟ್ಟಿಗೆ ಮತ್ತೊಂದು ಚರಿತ್ರೆ ಬರೆಯೋಕೆ ಸಜ್ಜಾಗ್ತಿದೆ. ಅದೂ ಬಾನದಾರಿಯಲ್ಲಿ ಅನ್ನೋದು ವಿಶೇಷ. ಯೆಸ್.. ರೀಸೆಂಟ್ ಆಗಿ ಬಾನದಾರಿಯಲ್ಲಿ ಚಿತ್ರ ಸೆಟ್ಟೇರಿತ್ತು. ಮಲ್ಲೇಶ್ವರಂನ ದೊಡ್ಡ ಗಣಪತಿಯ ಸನ್ನಿಧಿಯಲ್ಲಿ ಮುಹೂರ್ತ ಕಂಡಿತ್ತು. ಚಿತ್ರದ ಟೈಟಲ್ ಜೊತೆ ಪೋಸ್ಟರ್​ಗಳು ಸಿನಿಮಾ ಮೇಲಿನ ನಿರೀಕ್ಷೆ ಹೆಚ್ಚಿಸಿವೆ. ಕಾರಣ ಕಥೆಯಲ್ಲಿರೋ ವೇರಿಯೇಷನ್ಸ್.

ಸಪ್ತ ಸಾಗರದಾಚೆ ಎಲ್ಲೋ ಚಿತ್ರದ ನಾಯಕಿ ರುಕ್ಮಿಣಿ ವಸಂತ್ ಹಾಗೂ ಏಕ್ ಲವ್ ಯಾ ಚಿತ್ರದ ನಟಿ ರೀಷ್ಮಾ ನಾಣಯ್ಯ ಹೀಗೆ ಇಬ್ಬರೊಂದಿಗೆ ರೊಮ್ಯಾನ್ಸ್ ಮಾಡಲಿದ್ದಾರೆ ಗಣಿ. ಬೆಂಗಳೂರು ಹಾಗೂ ಸೌತ್ ಆಫ್ರಿಕಾದಲ್ಲಿ ತಯಾರಾಗಲಿರೋ ಈ ಚಿತ್ರ ನಾಳೆಯಿಂದ ಶೂಟಿಂಗ್ ಕಿಕ್​​ಸ್ಟಾರ್ಟ್​ ಮಾಡ್ತಿದೆ. ವಾಟರ್ ಸ್ಪೋರ್ಟ್​, ಕಾಡು, ಪ್ರಾಣಿಗಳು, ಸಮುದ್ರ, ಪರಿಸರ ಹೀಗೆ ಬೇರೆ ಬೇರೆ ಆಯಾಮಗಳಿರೋ ಚಿತ್ರದಲ್ಲಿ ಗಣಿ ಬೇರೆಯದ್ದೇ ರೀತಿಯಲ್ಲಿ ಕಾಣಸಿಗಲಿದ್ದಾರೆ ಅನ್ನೋದೇ ಬಿಗ್ ಸರ್​​ಪ್ರೈಸ್.

ವಿಶೇಷ ಅಂದ್ರೆ ಇಲ್ಲಿ ಪ್ರೀತಂ ಗುಬ್ಬಿ ಕ್ಲಾಸ್ ರೈಟಿಂಗ್​ಗೆ ಟಗರು, ಸಲಗ ರೈಟರ್ ಮಾಸ್ತಿ ಅವ್ರ ಮಾಸ್ ಟಚ್ ಕೂಡ ಇರಲಿದೆ. ಮಾಸ್ತಿಯ ಕೈಚಳಕ ಇದ್ರೆ ಸಿನಿಮಾ ಗೆಲ್ಲೋದು ಹಂಡ್ರೆಡ್ ಪರ್ಸೆಂಟ್ ಪಕ್ಕಾ ಅನ್ನುವಂತಾಗಿರೋ ಇತ್ತೀಚಿನ ದಿನಗಳಲ್ಲಿ ಈ ಸಿನಿಮಾದ ಗತ್ತು, ಗಮ್ಮತ್ತು ಹೆಚ್ಚಿಸಿದ್ದಾರೆ ಚಿತ್ರರಂಗದ ಆಸ್ತಿ ಮಾಸ್ತಿ.

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಪವರ್ ಟಿವಿ

RELATED ARTICLES

Related Articles

TRENDING ARTICLES