ಬೆಂಗಳೂರು : ಬಿಜೆಪಿ ಮುಖಂಡ ಅನಂತರಾಜು ಆತ್ಮಹತ್ಯೆ ಕೇಸ್ ದಿನಕ್ಕೊಂದು ತಿರುವು. ಕ್ಷಣಕ್ಕೊಂದು ಟ್ವಿಸ್ಟ್ ಪಡೆದುಕೊಳ್ತಿದೆ. ಫೇಸ್ಬುಕ್ನಲ್ಲಿ ಪರಿಚಯವಾದ ರೇಖಾ ಹಾಗೂ ಅನಂತರಾಜು ವಿಲ್ಲಿಂಗ್ ರಿಲೇಷನ್ ಶಿಪ್ ಮೂಲಕ ದೈಹಿಕ ಸಂಪರ್ಕದ ವರೆಗು ಬಂದಿತ್ತು.ಅದೇ ಸಂಬಂಧ ಅನಂತರಾಜು ಉಸಿರೊ ನಿಲ್ಲಿಸೊ ವರೆಗೂ ಬಂದುಬಿಟ್ಟಿತ್ತು.ಈಗ ಪತ್ನಿ ಸುಮಾ ಹಾಗೂ ರೇಖಾ ನಡುವಿನ ಸಮರ ಶುರುವಾಗಿ ಪ್ರತಿಭಟನೆ ಸ್ವರೂಪ ಪಡೆದುಕೊಂಡಿದೆ.
ಬಿಜೆಪಿ ಮುಖಂಡ ಅನಂತರಾಜು ಆತ್ಮಹತ್ಯೆ ಕೇಸ್ ಸುಮಾ ಮತ್ತು ರೇಖಾ ಮಧ್ಯೆ ದೊಡ್ಡ ಜಟಾಪಟಿಯೇ ಸೃಷ್ಟಿ ಮಾಡಿತ್ತು.ಅದೇ ಕೇಸ್ ಸಂಬಂಧ ಅನಂತರಾಜು ಅಭಿಮಾನಿಗಳು,ಬಿಜೆಪಿ ಮುಖಂಡರು ಬೀದಿಗಿಳಿದಿದ್ರು. ಬ್ಯಾಡರಹಳ್ಳಿ ಠಾಣೆ ಮುಂದೆ ಜಮಾಯಿಸಿ ತನಿಖೆ ಮಂದಗತಿಯಲ್ಲಿ ಸಾಗ್ತಿದೆ.ತಪ್ಪಿತಸ್ಥರಿಗೆ ಶೀಘ್ರವೇ ಶಿಕ್ಷೆ ಆಗಬೇಕು ಎಂದು ಪ್ರತಿಭಟನೆ ಮಾಡಲು ಮುಂದಾಗಿದ್ರು.ಆದರೆ ಪೊಲೀಸರು ನೆರೆದಿದ್ದ ಜನರ ಜೊತೆಗೆ ಮಾತುಕತೆ ಮಾಡಿ ಪ್ರತಿಭಟನೆ ನಡೆಸದಂತೆ ಮನವೊಲಿಸಿದ್ರು.ಅಲ್ಲದೇ ಇನ್ಸ್ ಪೆಕ್ಟರ್ ರವಿಕುಮಾರ್ ಭೇಟಿ ಮಾಡಿ ಮಾತುಕತೆ ನಡೆಸಿದ್ರು.ಠಾಣೆ ಎದುರು ಆಕ್ರೋಶ ಹೊರಹಾಕಿದ ಅನಂತ್ ಅಭಿಮಾನಿಗಳು ಶೀಘ್ರವೇ ತನಿಖೆ ನಡೆಸಿ ತಪ್ಪಿತಸ್ಥರಿಗೆ ಶಿಕ್ಷೆ ಕೊಡಿಸಬೇಕು ಎಂದು ಆಗ್ರಹಿಸಿದ್ರು.
ಅನಂತರಾಜು ಆತ್ಮಹತ್ಯೆ ಕೇಸ್ ತನಿಖೆ ವಿಳಂಬವಾಗ್ತಿದೆ.ತಪ್ಪಿತಸ್ಥರು ಸುಮಾ ಅಥವಾ ರೇಖಾನೇ ಇರಲಿ ಯಾರೇ ಇದ್ರು ಶೀಘ್ರ ತನಿಖೆ ಮುಕ್ತಾಯಗೊಳಿಸಿ ಶಿಕ್ಷೆ ಕೊಡಿಸಬೇಕು.ಅಲ್ಲದೇ ಇದರಲ್ಲಿ ರಾಜಕೀಯ ಕೈವಾಡ ಕೂಡ ಇದೆ.ಅನಂತರಾಜುಗೆ ಬಿಬಿಎಂಪಿ ಚುನಾವಣೆ ಟಿಕೆಟ್ ತಪ್ಪಿಸಲು ಈ ಷಡ್ಯಂತರ ಮಾಡಿದ್ದಾರೆ.ಅವರನ್ನು ಕೂಡ ಪತ್ತೆ ಮಾಡಿ ಅರೆಸ್ಟ್ ಮಾಡಬೇಕೆಂದು ಎರಡು ದಿನದ ಗಡುವು ನೀಡಿದ್ರು.ಇಲ್ಲದಿದ್ರೆ ಉಗ್ರ ಹೋರಾಟ ಮಾಡೋದಾಗಿ ಎಚ್ಚರಿಸಿದ್ದಾರೆ.
ಏನೇ ಹೇಳಿ ದಿನಕ್ಕೊಂದು ತಿರುವು ಪಡೆದುಕೊಳ್ತಿರೊ ಅನಂತರಾಜು ಆತ್ಮಹತ್ಯೆ ಕೇಸ್ ನಲ್ಲಿ ರೇಖಾ ಮತ್ತು ಸುಮಾ ಆಡಿಯೋ ವಾರ್ ನ ಜೊತೆಗೆ ಈಗ ಬಿಜೆಪಿ ಮುಖಂಡರು ಅಭಿಮಾನಿಗಳೂ ಬಂದಿರೋದು ಖಾಕಿಗೆ ದೊಡ್ಡ ತಲೆನೋವಾಗಿದೆ.
ಅಶ್ವಥ್ ಎಸ್.ಎನ್ ಕ್ರೈಂ ಬ್ಯೂರೋ ಪವರ್ ಟಿವಿ