Monday, November 18, 2024

ಬಿಎಂಟಿಸಿ ಎಲೆಕ್ಟ್ರಿಕ್ ಬಸ್ ಖರೀದಿಯಲ್ಲಿ ನಡೀತಿದ್ಯಾ ಬ್ರಹ್ಮಾಂಡ ಭ್ರಷ್ಟಾಚಾರ..?

ಬೆಂಗಳೂರು: ಕೋಟಿ ಕೋಟಿ ನಷ್ಟ ಅಂತ ಗೊತ್ತಿದ್ರೂ ಮೂರನೇ ಬ್ಯಾಚ್ ಎಲೆಕ್ಟ್ರಿಕ್ ಬಸ್ ಖರೀದಿಗೆ ಬಿಎಂಟಿಸಿ  ಬೋರ್ಡ್ ಒಪ್ಪಿಗೆ ಸೂಚಿಸಲಾಗಿದೆ.

ನಿನ್ನೆ ಬೋರ್ಡ್ ಮೀಟಿಂಗ್ ನಲ್ಲಿ 921 ಬಸ್ ಖರೀದಿಗೆ ಬೋರ್ಡ್ ನಲ್ಲಿ ಅನುಮತಿ ನೀಡಿದ್ದು, ಬೋರ್ಡ್ ಸದಸ್ಯರ ತೀವ್ರ ವಿರೋಧದ ನಡುವೆಯೂ ಎಲೆಕ್ಟ್ರಿಕ್ ಬಸ್ ಖರೀದಿಗೆ ಗ್ರೀನ್ ಸಿಗ್ನಲ್ ನೀಡಿದ್ದಾರೆ. ಈ ಹಿಂದೆ ಮೂರನೇ ಬ್ಯಾಚ್ನಲ್ಲಿ 830 ಬಸ್ ಖರೀದಿ ಲೆಕ್ಕಾಚಾರ ಹಾಕಲಾಗಿತ್ತು. ಈ ವೇಳೆ ಎಲೆಕ್ಟ್ರಿಕ್ ಬಸ್ ಖರೀದಿಯಿಂದ ಬಿಎಂಟಿಸಿಗೆ ನಷ್ಟ ಎಂಬ ಅಪಸ್ವರ ಕೇಳಿಬಂದಿತ್ತು. ಈಗಾಗಲೇ ಮೊದಲ ಬ್ಯಾಚ್ ಬಸ್​ಗಳೇ ನಿಗಮಕ್ಕೆ ಭಾರವಾಗಿ ಪರಿಣಮಿಸಿವೆ.

ಅದಲ್ಲದೇ, ಮೊದಲ ಬ್ಯಾಚ್ ನಲ್ಲಿ 90 ಎಲೆಕ್ಟ್ರಿಕ್ ಬಸ್ ಖರೀದಿಸಿದ್ದ ನಿಗಮ. ಜಿಸಿಸಿ ಮಾಡೆಲ್ ನಲ್ಲಿ ಬಸ್​ಗಳನ್ನ ರಸ್ತೆಗಿಳಿಸಿದ್ದ ಬಿಎಂಟಿಸಿ ಖಾಸಗಿ ಕಂಪನಿ ಜೊತೆಗೆ ಏರ್ಪಟ್ಟಿದ್ದ ಒಪ್ಪಂದ ಆದರೆ ಈ ಒಪ್ಪಂದದಂತೆ ಪ್ರತೀ ಬಸ್​ಗೆ ಮಿನಿಮಮ್ 180 ಕಿಲೋಮೀಟರ್, ಪ್ರತೀ ಕೀಮಿಗೆ 51.60 ಪೈಸೆಯಂತೆ ನಿತ್ಯ 9,288 ರೂ ಪಾವತಿಸಬೇಕು. ಆದರೆ ನಿಗಮಕ್ಕೆ ಒಂದು ಬಸ್ಸಿಂದ ಬರ್ತಿರೋ ಆದಾಯ ಕೇವಲ 5868 ರೂ ಮಾತ್ರ ಪ್ರತೀ ಎಲೆಕ್ಟ್ರಿಕ್ ಬಸ್ನಿಂದ ಒಂದು ದಿನಕ್ಕೆ 3420 ರೂ ನಷ್ಟವಾಗ್ತಿದೆ. ಹೀಗಾಗಿ ಇನ್ಮುಂದೆ ಜಿಸಿಸಿ ಮಾಡೆಲ್​ಲಲ್ಲಿ ಎಲೆಕ್ಟ್ರಿಕ್ ಬಸ್ ಖರೀದಿ ಬೇಡ ಎಂಬ ಕೂಗು ಕೇಳಿಬಂದಿತ್ತು. ಆದರೆ ಇದ್ಯಾವ್ದಕ್ಕೂ ತಲೆಕೆಡಿಸಿಕೊಳ್ಳದ ಬಿಎಂಟಿಸಿ ಎರಡನೇ ಬ್ಯಾಚ್ನಲ್ಲಿ 300 ಬಸ್ ಖರೀದಿ ನಿರ್ಧಾರ ಮಾಡಿತ್ತು.

ಇನ್ನು, ತೀವ್ರ ವಿರೋಧದ ನಡುವೆಯೇ ಬರೊಬ್ಬರಿ 921 ಎಲೆಕ್ಟ್ರಿಕ್ ಬಸ್ ಒಪ್ಪಂದಕ್ಕೆ ಮುಂದಾಗಿದೆ. ಟಾಟಾ ಜೊತೆಗೆ ಜಿಸಿಸಿ ಮಾಡೆಲ್ ಅಡಿಯಲ್ಲಿ ಬಸ್ ಖರೀದಿಗೆ ಬಿಎಂಟಿಸಿ ಬೋರ್ಡ್ ಒಪ್ಪಿಗೆ ಸೂಚಿಸಿದ್ದು, ಎಲೆಕ್ಟ್ರಿಕ್ ಬಸ್ ಬಗ್ಗೆ ಅಪಸ್ವರ ಕೇಳಿಬಂದ್ರೂ ಬೋರ್ಡ್ ನಲ್ಲಿ ಎಕಪಕ್ಷೀಯ ತೀರ್ಮಾನ ಮಾಡಿದ್ದಾರೆ. ಕೇಳಿದ್ರೆ ಎಲೆಕ್ಟ್ರಿಕ್ ಬಸ್ ಫ್ಯೂಚರ್, ಡೀಸೆಲ್ ಬಸ್ ಮುಗಿದು ಹೋದ ಅಧ್ಯಾಯ ಅಂತಿರೋ ನಿಗಮ ಪ್ರತೀ ಡೀಸೆಲ್ ಬಸ್ ಓಡಿಸಲು ಪ್ರತೀ ಕೀ.ಮೀಗೆ 27 ರೂ ಖರ್ಚು ಬರ್ತಿದೆ. ಅದೇ ಎಲೆಕ್ಟ್ರಿಕ್ ಬಸ್ಗೆ ಬಿಎಂಟಿಸಿ ಬರೊಬ್ಬರಿ 51ರೂ ವ್ಯಯ ಮಾಡುತ್ತಿದೆ. ಪ್ರತೀ ಕೀ.ಮೀಗೆ  ಡೀಸೆಲ್ ಬಸ್​ಗಿಂತ ಎಲೆಕ್ಟ್ರಿಕ್ ಬಸ್ನಿಂದ 24 ರೂ ಹೆಚ್ಚುವರಿ ಹೊರೆಯಾಗ್ತಿದೆ.

ಇನ್ಮುಂದೆ ಎಲೆಕ್ಟ್ರಿಕ್ ಬಸ್ ಬೋರ್ಡ್ ಮೆಂಬರ್ಸ್ ಒಪ್ಪಂದ ಬೇಡ ಎಂದಿದ್ದರು. ಆದ್ರೂ ಪ್ರಭಾವಿಗಳ ಒತ್ತಡಕ್ಕೆ ಒಳಗಾಗಿ ಬೋರ್ಡ್ನಲ್ಲಿ 3ನೇ ಬ್ಯಾಚ್ನಲ್ಲಿ 921 ಬಸ್ ಖರೀದಿಗೆ ಒಪ್ಪಗೆ ಸೂಚಿಸಿದ್ದಾರೆ. ಈಗಿನಂತೆ ನಷ್ಟ ಮುಂದುವರೆದ್ರೆ ಈ 921 ಬಸ್ನಿಂದ ನಿತ್ಯ ನಿಗಮಕ್ಕೆ 31 ಲಕ್ಷದ 49 ಸಾವಿರದ 820ರೂ ನಷ್ಟವಾಗಲಿದೆ. ಈ ರಿಪೋರ್ಟ್ ಕೈಲಿದ್ರೂ ಬಸ್ ಕೊಳ್ಳಲು ಬಿಎಂಟಿಸಿ ಬೋರ್ಡ್ ಒಪ್ಪಿಗೆ ನೀಡಿದ್ದಾರೆ.

RELATED ARTICLES

Related Articles

TRENDING ARTICLES