Friday, May 17, 2024

ರಾಜ್ಯಾದ್ಯಂತ ಧಗಧಗಿಸುತ್ತಿದೆ ಪಠ್ಯ ಪರಿಷ್ಕರಣೆ ವಿವಾದ

ಬೆಂಗಳೂರು: ವಿದ್ಯಾರ್ಥಿ ಸಂಘಟನೆಗಳಿಂದ ಫ್ರೀಡಂ ಪಾರ್ಕ್​ನಲ್ಲಿ ಇಂದು ರೋಹಿತ್ ಚಕ್ರತೀರ್ಥ ವಿರುದ್ಧ ಇಂದು ಪ್ರತಿಭಟನೆ ನಡೆಯಲಿದೆ.

AIDSOದಿಂದ ಇಂದು ಬೆಳಗ್ಗೆ 11 ಗಂಟೆಗೆ ಪ್ರತಿಭಟನೆ ಮಾಡುತ್ತಿದ್ದು, ಪಿಯುಸಿ ಪಠ್ಯ ಪುಸ್ತಕ ಪರಿಷ್ಕರಣೆ ಕಾರ್ಯ ವಹಿಸಿರೋ ಸರ್ಕಾರ ಚಕ್ರತೀರ್ಥಗೆ ಪರಿಷ್ಕರಣೆ ಜವಾಬ್ದಾರಿ ವಹಿಸಿರೋದಕ್ಕೆ ವಿರೋಧ ವ್ಯಕ್ತಪಡಿಸುತ್ತಿದೆ. ಸಮಿತಿ ವಿಸರ್ಜನೆಯಾದ್ರೂ ಪರಿಷ್ಕರಣೆಯಾದ ಪಠ್ಯಪುಸ್ತಕ ನೀಡುತ್ತಿರುವ ಹಿನ್ನಲೆಯಲ್ಲಿ ವಿವಾದದಿಂದ ಕೂಡಿರುವ ಪುಸ್ತಕಗಳನ್ನೇ ಮಕ್ಕಳಿಗೆ ಹಂಚಿಕೆ ಮಾಡಲಾಗಿದೆ ಹೀಗಾಗಿ ಶಿಕ್ಷಣ ಇಲಾಖೆ ವಿರುದ್ಧ ಸಂಘಟನೆಗಳು ಪ್ರತಿಭಟನೆಗೆ ಮುಂದಾಗಿದೆ.

ಅದಲ್ಲದೇ, ರೋಹಿತ್ ಚಕ್ರತೀರ್ಥ ಸಮಿತಿಯಿಂದ ಯಡವಟ್ಟುಗಳ ಸರಮಾಲೆಯಾಗಿದ್ದು, ಕನ್ನಡ ಭಾಷೆಯ 7ನೇ ತರಗತಿ ಪಠ್ಯದಲ್ಲಿ ಮತ್ತೊಂದು ಯಡವಟ್ಟಾಗಿದೆ. ಗೊಂಬೆ ಕಲಿಸುವ ನೀತಿ ಪಾಠದ ಕವಿ ಪರಿಚಯದಲ್ಲಿ ಯಡವಟ್ಟು ಉಂಟಾಗಿದ್ದು, ಚಿ.ಉದಯ ಶಂಕರ್ ಬರೆದ ಹಾಡನ್ನ R.N.ಜಯಗೋಪಾಲ್ ಎಂದು ತಿರುಚಿದೆ. ಉದಯ ಶಂಕರ್ ಬದಲಾಗಿ RN ಜಯಗೋಪಾಲ್ ಕವಿ ಪರಿಚಯ ಮಾಡಿರುವ ಸಮಿತಿ ಕಸ್ತೂರಿ ನಿವಾಸ ಚಿತ್ರದ ಮೂಲಕ ಜನಪ್ರಿಯವಾಗಿದ್ದ ಗೊಂಬೆ ಹಾಡು ಡಾ.ರಾಜ್​ಕುಮಾರ್ ಅಭಿನಯದ ಕಸ್ತೂರಿ ನಿವಾಸ ಸಿನಿಮಾದ ಹಾಡಾಗಿದ್ದು, ಶಿಕ್ಷಣ ಇಲಾಖೆಗೆ ಟೆನ್ಷನ್ ಹೆಚ್ಚಿಸಿದ ಪರಿಷ್ಕರಣಾ ಸಮಿತಿಯಲ್ಲಿ ಒಂದಲ್ಲಾ ಒಂದು ಯಡವಟ್ಟಾಗುತ್ತಿದ್ದು, ಪಠ್ಯ ಪರಿಷ್ಕರಣೆ ತಿದ್ದುಪಡಿಗಳು ನಗೆಪಾಟಲಿಗೆ ಕಾರಣವಾಗುತ್ತಿದೆ.

RELATED ARTICLES

Related Articles

TRENDING ARTICLES