ಎಲ್ಲಿ ಹೋದ್ರೂ, ಕ್ರೇಜಿಸ್ಟಾರ್ ಪುತ್ರ ವಿಕ್ರಮ್ ನಟನೆಯ ಚೊಚ್ಚಲ ಸಿನಿಮಾ ತ್ರಿವಿಕ್ರಮನ ಬಗ್ಗೆಯೇ ಟಾಕು. ಈಗಾಗ್ಲೇ ಈ ಚಿತ್ರದ ಪ್ಲೀಜ್ ಮಮ್ಮಿ ಸಾಂಗ್ ಮಿಲಿಯನ್ಗಟ್ಟಲೆ ವೀವ್ಸ್ ದಾಖಲಿಸಿದೆ. ಶಾಕುಂತಲಾ ಶೇಕ್ ಎ ಬಾಡಿ ಪ್ಲೀಜ್ ಅಂತಾ ಮತ್ತೊಮ್ಮೆ ಪ್ಲೀಜ್ ಮಾಡಲಿದ್ದಾರೆ ವಿಕ್ರಮ್. ಇದ್ರ ಜೊತೆಗೆ ಕ್ರೇಜಿ ಸ್ಟಾರ್ ರಿಲೀಸ್ಗೂ ಮುನ್ನ ಮಗನ ಸಿನಿಮಾ ನೋಡೋದೇ ಇಲ್ಲ ಅಂತಿದ್ದಾರೆ. ಅರೇ..! ಯಾಕೆ ಈ ಮುನಿಸು ಅಂತೀರಾ..?
- ತ್ರಿವಿಕ್ರಮ ಪ್ಯಾಕಪ್.. ಸಿನಿಮಾ ನೋಡಲ್ಲ ಅಂದರೇಕೆ ಕ್ರೇಜಿ..?
- ‘ಶಾಕುಂತಲಾ ಶೇಕ್ ಎ ಬಾಡಿ ಪ್ಲೀಜ್’ ಮ್ಯೂಸಿಕಲ್ ಹಿಟ್..!
- ರಿಲೀಸ್ ಡೇಟ್ ಲೇಟ್ ಆಗಿದ್ದಕ್ಕೆ ಡಾ. ಶಿವಣ್ಣ ಬೇಜಾರು
- ಸದ್ಯದಲ್ಲೇ ಶುರುವಾಗಲಿದೆ ಕ್ರೇಜಿ ತನಯನ ದರ್ಬಾರ್..!
ಪ್ರೇಮಲೋಕದ ರಾಮಾಚಾರಿ ಕ್ರೇಜಿಸ್ಟಾರ್ ರವಿಚಂದ್ರನ್ ಅವರ ದ್ವಿತೀಯ ಪುತ್ರ ವಿಕ್ರಮ್ ಸ್ಯಾಂಡಲ್ವುಡ್ಗೆ ಭರ್ಜರಿ ಎಂಟ್ರಿ ಕೊಟ್ಟಿದ್ದಾರೆ. ಜೂನ್ 24ಕ್ಕೆ ತ್ರಿವಿಕ್ರಮನ ಭರಾಟೆ ಜೋರಾಗಿರಲಿದೆ. ಚಿತ್ರದ ಟೀಸರ್, ಪೋಸ್ಟರ್ ಥ್ರಿಲ್ಲಿಂಗ್ ಆಗಿದೆ. ಸಾಂಗ್ಸ್ ಧೂಳೆಬ್ಬಿಸಿವೆ. ಪ್ರತಿ ಫ್ರೇಮಿನಲ್ಲೂ ವಿಕ್ರಮ್ ನಟನೆ ಎದ್ದು ಕಾಣುತ್ತದೆ. ಚೊಚ್ಚಲ ಚಿತ್ರದಲ್ಲೇ ವಿಕ್ರಮ್ ಸಿಕ್ಸರ್ ಬಾರಿಸೋದು ಪಕ್ಕಾ ಆಗಿದೆ.
ಇತ್ತೀಚೆಗೆ ಯೋಗರಾಜ್ ಭಟ್ ರಚನೆಯ ‘ಶಕುಂತಲಾ ಶೇಕ್ ಎ ಬಾಡಿ ಪ್ಲೀಜ್’ ಸಾಂಗ್ನ ಚಿತ್ರೀಕರಣ ಮೋಹನ್ ಬಿ ಕೆರೆ ಸ್ಟೂಡಿಯೋದಲ್ಲಿ ನಡೆಸಲಾಯಿತು. ಕ್ಯಾಚಿ ಹಾಡಿಗೆ ಅರ್ಜುನ್ ಜನ್ಯಾ ಸಂಗೀತ ಪ್ಲಸ್ ಆಗಿತ್ತು. ಡ್ಯಾನ್ಸ್ ಮಾಸ್ಟರ್ ಭೂಷಣ್ ಸಾರಥ್ಯದಲ್ಲಿ ಅದ್ದೂರಿ ಸೆಟ್ ಹಾಕಿ ಕಲರ್ಫುಲ್ ಕಾಸ್ಟ್ಯೂಮ್ಗಳಲ್ಲಿ ಶೂಟಿಂಗ್ ಕಂಪ್ಲೀಟ್ ಮಾಡಿ ಕುಂಬಳಕಾಯಿ ಕೂಡ ಒಡೆಯಲಾಗಿದೆ. ರಿಲೀಸ್ ಡೇಟ್ ಅನೌನ್ಸ್ ಆದಮೇಲೆ ಸಾಂಗ್ ಶೂಟಿಂಗ್ ಯಾಕೆ..? ಚೇಂಜಸ್ ಏನಾದ್ರೂ ಇತ್ತಾ ಅನ್ಕೋಬೇಡಿ. ಬಾಕಿ ಇದ್ದ ಶಕುಂತಲಾ ಶೇಕ್ ಎ ಬಾಡಿ ಹಾಡನ್ನು ಕಂಪ್ಲೀಟ್ ಮಾಡಿ ಶೂಟಿಂಗ್ ಪ್ಯಾಕಪ್ ಮಾಡಿದೆ.
ಕ್ರೇಜಿ ಸ್ಟಾರ್ ರವಿಚಂದ್ರನ್ಗೆ ಮಕ್ಕಳ ಸಿನಿಮಾಗಳು ಮಿಂಚಬೇಕು ಅನ್ನೋ ದೊಡ್ಡ ಕನಸಿದೆ. ದ್ವಿತೀಯ ಪುತ್ರ ವಿಕ್ರಮ್ಗೆ ಇದು ಮೊದಲ ಸಿನಿಮಾ. ಹಾಗಾಗಿ ರವಿ ಸರ್ಗೆ ಕೂತೂಹಲವೂ ಜಾಸ್ತಿ ಇದೆ. ತ್ರಿವಿಕ್ರಮ ಸಿನಿಮಾವನ್ನ ಫ್ಯಾಮಿಲಿಯ ಎಲ್ಲರೂ ನೋಡಿ ಇಷ್ಟ ಪಟ್ಟಿದ್ದಾರೆ. ಆದ್ರೇ, ಕ್ರೇಜಿ ಸ್ಟಾರ್ ಮಾತ್ರ ನೋಡಿದಿಲ್ಲ ಎಂದಿದ್ದಾರೆ. ಮಗನ ಮೇಲೆ ಏನಾದ್ರೂ ಕೋಪಾನ ಅನ್ಕೋಬೇಡಿ. ರವಿ ಸರ್ ಯಾವ ಸಿನಿಮಾ ನೋಡಿದ್ರೂ ಮುಲಾಜಿಲ್ಲದೆ ಕ್ರಿಟಿಸೈಜ್ ಮಾಡ್ತಾರೆ. ಚೆನ್ನಾಗಿಲ್ಲ ಅಂದ್ರೆ, ಓಪನ್ ಆಗಿ ಸೀನ್ ಚೇಂಜ್ ಮಾಡಿ ಅಂದ್ ಬಿಡ್ತಾರೆ. ಮಗನಿಗೆ, ನಿರ್ದೇಶಕರಿಗೆ ಬೇಜಾರ್ ಮಾಡಬಾರದು ಅನ್ನೋ ಕಾರಣಕ್ಕೆ ಥಿಯೇಟರ್ಗೆ ಹೋಗಿ ನೋಡ್ತೀನಿ ಅಂತಾರೆ ಕ್ರೇಜಿ ಸ್ಟಾರ್.
ಈ ಮುಂಚೆ ಪ್ಲೀಜ್ ಮಮ್ಮಿ ಸಾಂಗ್ ರಿಲೀಸ್ ಮಾಡಿದ್ದ ಶಿವಣ್ಣ ಕೂಡ ಫಿಲ್ಮ್ ರಿಲೀಸ್ ಮಾಡಿ ಲೇಟ್ ಮಾಡ್ಬೇಡಿ. ರವಿ ಸರ್ ಮಗನ ಸಿನಿಮಾ ಅಂದ್ರೆ, ನನ್ ಮಗನ ಸಿನಿಮಾ ಇದ್ದಂಗೆ ಅಂದಿದ್ರು. ಹಾಗಾಗಿ ತ್ರಿವಿಕ್ರಮ ಸಿನಿಮಾದ ಮೇಲೆ ಚಿತ್ರರಸಿಕರಿಗೆ ಕೂತೂಹಲ ಸಿಕ್ಕಾಪಟ್ಟೆ ಹೆಚ್ಚಾಗಿದೆ. 100ಕ್ಕೂ ಅಧಿಕ ದಿನಗಳ ಕಾಲ ಕಾಶ್ಮೀರ ಸೇರಿ ಕಲರ್ಫುಲ್ ಲೋಕೇಷನ್ಸ್ಗಳಲ್ಲಿ ಶೂಟಿಂಗ್ ಮಾಡಲಾಗಿದೆ. ವಿಕ್ರಮ್ಗೆ ನಾಯಕಿಯಾಗಿ ಆಕಾಂಕ್ಷ ಶರ್ಮಾ ಅಭಿನಯಿಸಿದ್ದಾರೆ. ತುಳಸಿ, ಸುಚೇಂದ್ರ ಪ್ರಸಾದ್, ಸಾಧುಕೋಕಿಲ, ರೋಹಿತ್ ರಾಯ್, ಜಯಪ್ರಕಾಶ್, ಶಿವಮಣಿ, ಆದಿ ಲೋಕೇಶ್, ನಾಗೇಂದ್ರ ಶಾ, ಚಿಕ್ಕಣ್ಣ ಸೇರಿದಂತೆ ಮುಂತಾದ ಕಲಾವಿದರ ಸಮಾಗಮವಿದೆ.
ರೋಸ್, ಮಾಸ್ ಲೀಡರ್ ಸಿನಿಮಾಗಳಿಗೆ ಆ್ಯಕ್ಷನ್ ಕಟ್ ಹೇಳಿರುವ ಸಹನಾ ಮೂರ್ತಿ ‘ತ್ರಿವಿಕ್ರಮ’ನಿಗೆ ಆ್ಯಕ್ಷನ್ ಕಟ್ ಹೇಳಿದ್ದಾರೆ. ಬಿಗ್ ಬಜೆಟ್ ಸಿನಿಮಾ ಇದಾಗಿದ್ದು, ದೊಡ್ಡ ಮಟ್ಟದಲ್ಲಿ ರಿಲೀಸ್ ಮಾಡೋಕೆ ಪ್ಲ್ಯಾನ್ ಕೂಡ ಮಾಡಿಕೊಂಡಿದೆ ಚಿತ್ರತಂಡ. ಸೋಮಣ್ಣ ಟಾಕೀಸ್ ಬ್ಯಾನರ್ ಅಡಿಯಲ್ಲಿ ರಾಮ್ಕೋ ಸೋಮಣ್ಣ ಬಂಡವಾಳ ಹೂಡಿದ್ದಾರೆ. ಸಂತೋಷ್ ರೈ ಪತಾಜೆ ಕ್ಯಾಮೆರಾ ಕೈಚಳಕ ನೋಡುಗರಿಗೆ ಹೊಸ ಫೀಲ್ ಕೊಡಲಿದೆ. ಒಟ್ನಲ್ಲಿ ಕ್ರೇಜಿ ಪುತ್ರನ ಕ್ರೇಜಿ ಹವಾ ಹೇಗಿರುತ್ತೆ ಅನ್ನೋಕೆ ಸ್ವಲ್ಪ ದಿನ ಕಾಯಲೇಬೇಕು.
ರಾಕೇಶ್ ಆರುಂಡಿ , ಫಿಲ್ಮ್ ಬ್ಯೂರೋ, ಪವರ್ ಟಿವಿ