Saturday, May 18, 2024

NSUI ಪ್ರತಿಭಟನೆಗೆ ದಿನಕ್ಕೊಂದು ತಿರುವು

ತುಮಕೂರು : ತಿಪಟೂರಿನಲ್ಲಿರುವ ಬಿ.ಸಿ.ನಾಗೇಶ್ ಮನೆ ಮುಂದೆ RSS ಚಡ್ಡಿ ಸುಟ್ಟು ಪ್ರತಿಭಟನೆ ನಡೆಸಿದ NSUI ಕಾರ್ಯಕರ್ತರ ಬಂಧನ ಹಿನ್ನೆಲೆಯಲ್ಲಿ ಕಳೆದ ಎರಡು ದಿನಗಳಿಂದ ಕಾಂಗ್ರೆಸ್ ನಾಯಕರ ಕಾರಾಗೃಹ ಭೇಟಿ ಜೋರಾಗಿದೆ.

ಶಿಕ್ಷಣ ಸಚಿವರ ಮನೆ ಮುಂದೆ ನಡೆದ ಎನ್ ಎಸ್ ಯು ಐ ಪ್ರತಿಭಟನೆ ದಿನಕ್ಕೊಂದು ತಿರುವು ಪಡೆಯುತ್ತಿದೆ. ಈ ಬಗ್ಗೆ ಪ್ರತಿಕ್ರಿಯಿಸಿದ ಮಾಜಿ ಡಿಸಿಎಂ ಡಾ.ಜಿ.ಪರಮೇಶ್ವರ್, ಪ್ರತಿಭಟನೆ ಮಾಡೋದು ನಮ್ಮ ಹಕ್ಕು. ಪ್ರತಿಭಟನೆ ವೇಳೆ NSUI ಕಾರ್ಯಕರ್ತರನ್ನ ಅವಾಚ್ಯವಾಗಿ ನಿಂದಿಸಿ ಹೊಡೆದಿದ್ದಾರೆ. ಆದ್ರೆ ಪ್ರತಿಭಟನಕಾರರು ಮನೆಗೆ ಬೆಂಕಿ ಹಚ್ಚೋಕೆ ಬಂದಿದ್ರು ಅಂತಾ ಆಪಾದನೆ ಮಾಡಿದ್ದಾರೆ. ಇದು ಪ್ರಜಾಪ್ರಭುತ್ವಕ್ಕೆ ವಿರೋಧವಾದ ಕೆಲಸ. ಅಲ್ಲದೆ, ನಮ್ಮವರು ಕಂಪ್ಲೇಂಟ್ ಕೊಟ್ಟರೂ ಪೊಲೀಸರು ಕ್ರಮ ಕೈಗೊಂಡಿಲ್ಲ. ಹಾಗಾಗಿ ಸಿಎಂ, ಗೃಹಸಚಿವರು ಮಧ್ಯಪ್ರವೇಶ ಮಾಡಬೇಕು ಎಂದರು.

ಇನ್ನು ತುಮಕೂರು ಕಾರಾಗೃಹದ ಮುಂದೆ ಎನ್ ಐಸಿಯು ಕಾರ್ಯಕರ್ತರ ಪೋಷಕರು ಪರಮೇಶ್ವರ್ ವಿರುದ್ಧ ಆಕ್ರೋಶ ಹೊರಹಾಕಿದ್ರು. ಜಿಲ್ಲಾಧ್ಯಕ್ಷರು, ರಾಜ್ಯಾಧ್ಯಕ್ಷರು, ಕಾಂಗ್ರೆಸ್ ನ ಮುಖಂಡರು, ಮಾಜಿ ಶಾಸಕರು ಎಲ್ಲರೂ ಬಂದು ಭೇಟಿ ಮಾಡಿಕೊಂಡು ಹೋಗುತ್ತಿದ್ದಾರೆ. ಒಬ್ಬರು ಮಾಜಿ ಡಿಸಿಎಂ ಆಗಿದ್ದಂತಹವರು ನಮ್ಮ ಮಕ್ಕಳನ್ನು ಭೇಟಿ ಮಾಡೋಕೆ ಬಂದಿಲ್ಲ ಎಂದು ಆಕ್ರೋಶ ಹೊರಹಾಕಿದರು. ಈ ವೇಳೆ ಕಾಂಗ್ರೆಸ್ ನಾಯಕರು ಆಕ್ರೋಶಿತರನ್ನು ಸಮಾಧಾನ ಪಡಿಸಿದ್ರು..

ಯೂತ್ ಕಾಂಗ್ರೆಸ್ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ರಕ್ಷಾ ರಾಮಯ್ಯ, ಎಂಎಲ್‌ಸಿ ಆರ್.ರಾಜೇಂದ್ರ ಸೇರಿ ಪ್ರಮುಖರು ಕಾರಾಗೃಹದಲ್ಲಿರುವ 24 ವಿದ್ಯಾರ್ಥಿಗಳನ್ನ ಭೇಟಿ ಮಾಡಿ ಮಾತುಕತೆ ನಡೆಸಿದ್ರಲ್ಲದೇ ಅವರನ್ನ ಶೀಘ್ರ ಹೊರಗೆ ಕರೆತರುವ ಸಮಾಲೋಚನೆ ನಡೆಸಿದ್ರು.., ಈ ವೇಳೆ ಮಾತನಾಡಿದ ಅವರು, ಬಿಜೆಪಿ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಇನ್ನೂ ಎಂ‌ಎಲ್‌ಸಿ ರಾಜೇಂದ್ರ ಮಾತನಾಡಿ, ಅವತ್ತು ಬಿ.ಸಿ.ನಾಗೇಶ್ ಮನೆಯಲ್ಲಿ ಚೆಡ್ಡಿ ಸುಟ್ಟಿಲ್ಲ. ಪೇಪರ್ ಹೊತ್ತಿಕೊಂಡಿರುವುದು. ಅಲ್ಲೇನಾದ್ರೂ ಪೆಟ್ರೋಲ್, ಕೆರೋಸಿನ್ ಹಾಕಿ ಸುಟ್ಟಿದಾರ ಎಂದು ಪ್ರಶ್ನಿಸಿದರು.., ಎನ್ ಎಸ್ ಯು ಐ ಕಾರ್ಯಕರ್ತರ ಮೇಲೆ ಹಲ್ಲೆ ಮಾಡಿದವರು ಬಿಜೆಪಿಯವರು ಎಂದರು.

ಒಟ್ಟಾರೆ ಪಠ್ಯ ಪುಸ್ತಕ ವಿವಾದದ ಪ್ರತಿಭಟನೆಯಿಂದ ಪ್ರತಿಭಟನಕಾರರ ಜೊತೆಗೆ ಅಮಾಯಕ ವಿದ್ಯಾರ್ಥಿಗಳು ಕೇಸ್ ನಲ್ಲಿ ಸಿಲುಕಿ ಪರದಾಡುವಂತಾಗಿದ್ದು, ನಿಜಕ್ಕೂ ಅಲ್ಲಿ ನಡೆದಿರುವ ಘಟನೆ ಏನು ಎಂಬುದು ತನಿಖೆಯಿಂದಷ್ಟೇ ಸ್ಪಷ್ಟವಾಗಬೇಕಿದೆ.

ಹೇಮಂತ್ ಕುಮಾರ್.ಜೆ.ಎಸ್ ಪವರ್ ಟಿವಿ ತುಮಕೂರು.

RELATED ARTICLES

Related Articles

TRENDING ARTICLES